
ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ಗರ್ಭಿಣಿ ಎಂದು ಬಾಲಿವುಡ್ ಲೈಫ್ ವರದಿ ಮಾಡಿತ್ತು. ಆದರೆ ಅದರ ಬಗ್ಗೆ ಸತ್ಯ ತಿಳಿದು ಬಂದಿರಲ್ಲಿ. ಆದರೆ ಇದೀಗ ಖುದ್ದು ನಟ ದಂಪತಿಯೇ ಅನೌನ್ಸ್ ಮಾಡಿದ್ದಾರೆ. ದೀಪಿಕಾ ಮತ್ತು ರಣವೀರ್ ಸಿಂಗ್ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ನಟಿ ಗರ್ಭಿಣಿ ಎನ್ನುವುದಕ್ಕೆ ಸದ್ಯ ಯಾವುದೇ ಮುನ್ಸೂಚನೆ ಇಲ್ಲ. ಏಕೆಂದರೆ ಅವರಿಗೆ ಈಗ ಕೇವಲ ಎರಡು ತಿಂಗಳು. ಎರಡು ತಿಂಗಳಿಗೆ ಬೇಬಿ ಬಂಪ್ ತಿಳಿಯುವುದಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿರುವುದಾಗಿ ದಂಪತಿ ಇದಾಗಲೇ ತಿಳಿಸಿದ್ದಾರೆ.
ಇದೀಗ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದ್ವೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದೆ. ಇದರಲ್ಲಿ ಹಲವಾರು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದಾರೆ. ಇವರಲ್ಲಿ ಹಲವರು ಭರ್ಜರಿ ಪರ್ಫಾಮೆನ್ಸ್ ಕೂಡ ನೀಡುತ್ತಿದ್ದಾರೆ. ಅಷ್ಟಕ್ಕೂ ಇಂಥ ಕಾರ್ಯಕ್ರಮಗಳಲ್ಲಿ ನಟ-ನಟಿಯರು ಪುಕ್ಕಟೆ ನೃತ್ಯ ಮಾಡುವುದಿಲ್ಲ. ಕೋಟಿ ಕೋಟಿ ಹಣ ಪಡೆದುಕೊಳ್ಳುತ್ತಾರೆ. ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆಗಿಂತಲೂ ಅಧಿಕ ಹಣ ಪಡೆದುಕೊಳ್ಳುವುದು ಉಂಟು. ಪ್ರೇಕ್ಷಕರು ಮಾತ್ರ ನಟ-ನಟಿಯರು ಸುಮ್ಮನೇ ನೃತ್ಯ ಪ್ರದರ್ಶನ ಮಾಡುತ್ತಿದ್ದಾರೆ ಎಂದುಕೊಳ್ಳುವುದು ಉಂಟು. ಆದರೆ ಮದುವೆಯಂಥ ಸಮಾರಂಭಗಳಲ್ಲಿ ಇವರು ಪಡೆಯುವ ಸಂಭಾವನೆಗೆ ಲೆಕ್ಕವೇ ಇಲ್ಲ.
ನಯನತಾರಾ- ವಿಘ್ನೇಶ್ ದಾಂಪತ್ಯಕ್ಕೆ ತೆರೆ ಬಿತ್ತಾ? ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ, ಭಾವುಕ ಪೋಸ್ಟ್!
ಇದೀಗ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ, ತಮ್ಮ ಪತಿಯ ರಣವೀರ್ ಸಿಂಗ್ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಹಲವರು ಇನ್ನೂ ಎರಡು ತಿಂಗಳ ಗರ್ಭಿಣಿ. ಆರಂಭದಲ್ಲಿ ಹುಷಾರಾಗಿ ಇರಬೇಕಮ್ಮಾ ಎಂದಿದ್ದರೆ, ಹಲವರು ಹಣದ ದುರಾಸೆ ಒಳ್ಳೆಯದಲ್ಲ ಎನ್ನುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ತೋರುವ ಬದಲು ಹಣದ ಆಸೆಗೆ ಬಿಟ್ಟು ಈ ರೀತಿ ಕುಣಿಯಬೇಡಮ್ಮಾ ಎಂದು ನಟಿಗೆ ಬುದ್ಧಿಮಾತು ಹೇಳುತ್ತಿದ್ದಾರೆ.
ಅಂದಹಾಗೆ ಈ ಜೋಡಿ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು. ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಇದೀಗ ಅಪ್ಪನಾಗುವ ಖುಷಿಯಲ್ಲಿರುವ ರಣವೀರ್ ಸಿಂಗ್ ಅವರು ತಮಗೆ ಎಂಥ ಮಗು ಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ ತಮಗೆ ಹೆಣ್ಣುಮಗು ಬೇಕು ಎನ್ನುವುದು. ರಣವೀರ್ ಹೇಳಿದ್ದೇನೆಂದರೆ, ಮದುವೆಯಾದ ಬಳಿಕ ಮಗು ಅಂತೂ ಆಗುತ್ತದೆ ಎಂದು ಗೊತ್ತೇ ಇಲ್ಲ. ಒಂದೆರಡು ವರ್ಷ ಅಲ್ಲದಿದ್ದರೂ ನಾಲ್ಕೈದು ವರ್ಷ ಬಿಟ್ಟಾದರೂ ಮಗು ಆಗುತ್ತದೆ ಎಂದು ತಿಳಿದಿತ್ತು. ಈಗಿನಿಂದಲೇ ಎಂಥ ಮಗು ಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ. ಅದಕ್ಕಾಗಿ ದೀಪಿಕಾಳ ಬಾಲ್ಯದ ಫೋಟೋ ಸದಾ ನೋಡುತ್ತಿದ್ದೆ. ಅವಳು ತುಂಬಾ ಕ್ಯೂಟ್ ಆಗಿ ಇದ್ದಳು. ಅದನ್ನೇ ನೋಡುತ್ತಿದ್ದರೆ, ಅಂಥದ್ದೇ ಮಗು ಹುಟ್ಟುತ್ತದೆ ಎನ್ನುವ ಕಲ್ಪನೆಯಲ್ಲಿಯೇ ಇದ್ದೇನೆ. ಆದ್ದರಿಂದ ನನಗೆ ಅವಳಂತೆಯೇ ಇದ್ದ ಕ್ಯೂಟ್ ಹೆಣ್ಣು ಮಗು ಬೇಕು ಎಂದಿದ್ದಾರೆ. ಹೆಣ್ಣು ಮಗುವೇ ಹುಟ್ಟಲಿದೆ ಎಂದೂ ಹೇಳಿದ್ದಾರೆ.
ಮಥುರಾಕ್ಕೆ ಹೇಮಾ ಮಾಲಿನಿ ಫಿಕ್ಸ್! ಕಂಗನಾ ರಣಾವತ್ ಕಥೆ ಏನು? ಬಿಜೆಪಿ ಪಟ್ಟಿ ಹೇಳ್ತಿರೋದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.