ಒಲೆ ಮೇಲಿಟ್ಟ ಹಾಲು ಉಕ್ಕುವ ಫಜೀತಿ: ನಟಿ ಕಂಗನಾ ರಣಾವತ್​ ಅನುಭವ ಕೇಳಿ! ನಿಮಗೂ ಹೀಗಾಗಿದ್ಯಾ?

Published : Feb 16, 2025, 02:46 PM ISTUpdated : Feb 16, 2025, 06:34 PM IST
ಒಲೆ ಮೇಲಿಟ್ಟ ಹಾಲು ಉಕ್ಕುವ ಫಜೀತಿ: ನಟಿ ಕಂಗನಾ ರಣಾವತ್​  ಅನುಭವ ಕೇಳಿ! ನಿಮಗೂ ಹೀಗಾಗಿದ್ಯಾ?

ಸಾರಾಂಶ

ಹಾಲು ಉಕ್ಕಿ ಚೆಲ್ಲುವ ಬಾಲ್ಯದ ಅನುಭವವನ್ನು ನಟಿ ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ. ಅನೇಕರು ಇದೇ ರೀತಿಯ ಅಡುಗೆಮನೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ಮೊನ್ನೆಯಷ್ಟೇ ಮನಾಲಿಯಲ್ಲಿ ತಮ್ಮ ಹೊಸ ರೆಸ್ಟೋರೆಂಟ್ "ದಿ ಮೌಂಟೇನ್ ಸ್ಟೋರಿ" ಉದ್ಘಾಟಿಸಿದ್ದಾರೆ.

ಒಲೆ ಮೇಲೆ ಇಟ್ಟ ಹಾಲು ಉಕ್ಕುವುದನ್ನೇ ಕಾಯುತ್ತಿರುತ್ತೀರಿ. ಅದು ಉಕ್ಕುವುದೇ ಇಲ್ಲ. ಅರೆ ಕ್ಷಣ ಅತ್ತ ಕಡೆ ಗಮನ ಹೋದ್ರೆ ಸಾಕು, ಅದ್ಯಾವ ಮ್ಯಾಜಿಕ್​ನಲ್ಲಿ ಹಾಲು ಉಕ್ಕಿ ಚೆಲ್ಲಿಯೇ ಬಿಡುತ್ತದೆ. ನಿಮಗೂ ಇಂಥ ಅನುಭವ ಆಗಿರಲಿಕ್ಕೆ ಸಾಕು ಅಲ್ಲವೆ? ಅದರಲ್ಲಿಯೂ ಮನೆಗೆಲಸದಲ್ಲಿ ಬಿಜಿ ಇರುವವರು, ಮುಖ್ಯವಾಗಿ ಹೆಚ್ಚಿನ ಮಹಿಳೆಯರಿಗೆ ಇದರ ಅನುಭವ ಆಗಿರಲು ಸಾಧ್ಯ. ಕೆಲವೊಮ್ಮೆ ಛೇ... ಹೀಗೆ ಯಾಕೆ ನನಗೇ ಆಗತ್ತೆ ಎಂದುಕೊಳ್ಳುವುದೂ ಉಂಟು. ಆದರೆ ಇಂಥ ಕೆಲವು ಅಡುಗೆ ಮನೆಯ ಫಜೀತಿಯ ಅನುಭವಗಳು ಬಹುತೇಕರಿಗೆ ಸಾಮಾನ್ಯವೇ ಹೌದು. ಒಲೆ ಮೇಲೆ ಏನೋ ಇಟ್ಟು ಮರೆಯುವುದು, ಅಡುಗೆ ಮಾಡುವಾಗ ಅರ್ಜೆಂಟ್​ಗೆ ಏನೋ ಬೇಕು ಎಂದು ಫ್ರಿಜ್​ ಬಾಗಿಲು ತೆರೆಯುವಷ್ಟರಲ್ಲಿಯೇ ಏನಕ್ಕೆ ಬಂದಿದ್ದೆ ಎನ್ನುವುದನ್ನೇ ಮರೆಯುವುದು. 2-3 ಅಡುಗೆಗಳನ್ನು ಒಟ್ಟಿಗೇ ಮಾಡುವಾಗ ಅದಕ್ಕೆ ಹಾಕುವ ಉಪ್ಪು ಇದಕ್ಕೆ ಹಾಕುವುದು, ಅದಕ್ಕೆ ಹಾಕುವ ಸಕ್ಕರೆ, ಇದಕ್ಕೆ ಹಾಕುವುದು... ಹೀಗೆ ಕೆಲವು ಫಜೀತಿಗಳು ಕಾಮನ್ ಬಿಡಿ.

ಈಗ ಅದೇ ಮಾಹಿತಿಯನ್ನು ಶೇರ್​ ಮಾಡಿಕೊಂಡಿದ್ದಾರೆ ನಟಿ, ಸಂಸದೆ ಕಂಗನಾ ರಣಾವತ್​. ಅವರ   ಅಡುಗೆ ಮನೆಯ ಸಮಸ್ಯೆ (kitchen disaster) ಏನು ಎಂಬ ಪ್ರಶ್ನೆಗೆ ನಟಿ, ಇದು ನನಗೆ ಬಾಲ್ಯದಲ್ಲಿ ಆಗುತ್ತಿದ್ದ ಅನುಭವ ಎಂದಿದ್ದಾರೆ. ನನ್ನಮ್ಮ ಒಲೆಯ ಮೇಲೆ ಹಾಲು ಇಟ್ಟಿದ್ದೇನೆ. ಉಕ್ಕುತ್ತದೆ, ಆಫ್​ ಮಾಡು ಎಂದು ಹೇಳಿ ಹೋಗುತ್ತಿದ್ದರು. ನಾನು ಅದನ್ನು ತದೇಕ ಚಿತ್ತದಿಂದ ನೋಡುತ್ತಲೇ ಇರುತ್ತಿದ್ದೆ. ಆದರೆ ಅರೆ ಕ್ಷಣ ಗಮನ ಅತ್ತ ಹೋಗುತ್ತಿದ್ದಂತೆಯೇ ಹಾಲು ಉಕ್ಕಿ ಚೆಲ್ಲಿಯೇ ಹೋಗುತ್ತಿತ್ತು. ಇದರಿಂದ ಅಮ್ಮನ ಕೈಯಲ್ಲಿ ಹಲವು ಬಾರಿ ಬೈಸಿಕೊಂಡಿದ್ದೇನೆ ಎಂದಿದ್ದಾರೆ. ಇದರ ವಿಡಿಯೋ ಅನ್ನು ರಾಜೇಶ್​ ಶ್ರೀವತ್ಸ ಎನ್ನುವವರು ಶೇರ್​ ಮಾಡಿಕೊಂಡಿದ್ದಾರೆ.

ನಟಿ ಕಂಗನಾ ಹೊಸ ರೆಸ್ಟೋರೆಂಟ್​ ಓಪನ್​: ವೆಜ್​-ನಾನ್​ ವೆಜ್​; ಎಷ್ಟೆಷ್ಟು ರೇಟ್? ಇಲ್ಲಿದೆ ಡಿಟೇಲ್ಸ್​...

ಈ ವಿಡಿಯೋಗೆ ಹೆಚ್ಚಿನ ಮಂದಿ ಮಾಡಿರುವ ಕಮೆಂಟ್ಸ್​ನಲ್ಲಿ ನನಗೂ ಇಂಥ ಅನುಭವ ಈಗಲೂ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಇಂಥ ಎಡವಟ್ಟು ನನಗೊಬ್ಬಳಿಗೇ ಆಗುವುದು ಎಂದುಕೊಂಡಿದ್ದೆ. ನಿಮಗೂ ಆಗಿತ್ತಾ ಎಂದು ಅಚ್ಚರಿಪಟ್ಟುಕೊಂಡಿದ್ದಾರೆ.  ಇನ್ನು ಕಂಗನಾ ವಿಷಯಕ್ಕೆ ಬರುವುದಾದರೆ, ಹಿಮಾಚಲ ಪ್ರದೇಶದ ಸಂಸದೆಯೂ ಆಗಿರುವ ನಟಿ, ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮೊನ್ನೆ ಪ್ರೇಮಿಗಳ ದಿನದಂದು  ಹಿಮಾಚಲ ಪ್ರದೇಶದ ಮನಾಲಿಯಲ್ಲಿ   'ದಿ ಮೌಂಟೇನ್ ಸ್ಟೋರಿ' ಎಂಬ ಕೆಫೆಯನ್ನು ಅವರು ಉದ್ಘಾಟಿಸಿದ್ದಾರೆ.  ಕೆಫೆಯ ಸುಂದರ ದೃಶ್ಯಗಳನ್ನು ಹಾಗೂ  ಒಳಾಂಗಣದ ಸೌಂದರ್ಯವನ್ನು, ತಾವು ಆಹಾರ ನೀಡುತ್ತಿರುವ ವಿಡಿಯೋಗಳನ್ನು ಹಿಮಾಚಲ ಪ್ರದೇಶದ ಕೆಲವು ಜನರ ಜೊತೆಗೂಡಿ ಇರುವ ದೃಶ್ಯಗಳನ್ನು ಕಂಗನಾ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಫೆ ಆರಂಭಿಸುವುದು ನನ್ನ ಬಾಲ್ಯದ ಆಸೆಯಾಗಿತ್ತು. ಬಹು ವರ್ಷಗಳ ಕನಸು ಈಡೇರಿದೆ ಎಂದು ನಟಿ, ಸಂಸದೆ ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ.  


ಮೊದಲೇ ದಿನವೇ  ಪ್ರವಾಸಿಗರ ಗುಂಪು ಹರಿದು ಬಂತು.  ಯಾವುದೇ ರಿಬ್ಬನ್ ಕತ್ತರಿಸಲಾಗಿಲ್ಲ ಅಥವಾ ಯಾವುದೇ ಪೂಜೆಯನ್ನು ನಡೆಸಲಾಗಿಲ್ಲ. ಬದಲಿಗೆ ಪ್ರವಾಸಿಗರ ಆಗಮನದೊಂದಿಗೆ ಉದ್ಘಾಟನೆ ಮಾಡಿರುವುದು ವಿಶೇಷ.  ದಿ ಮೌಂಟೇನ್ ಸ್ಟೋರಿ ಕೆಫೆಯ ಮೊದಲ ದಿನ, ಕಂಗನಾ ಅವರು ತಮ್ಮ ಕುಟುಂಬದೊಂದಿಗೆ ಸಂಜೆ ಕೆಫೆಯನ್ನು ತಲುಪಿದರು.  ಕುಟುಂಬದ ಸದಸ್ಯರ ಜೊತೆಯಲ್ಲಿ  ಕೆಲವು ಗಂಟೆಗಳ ಕಾಲ ಕಳೆದರು ಮತ್ತು ಅಲ್ಲಿಗೆ ಬಂದ ಪ್ರವಾಸಿಗರನ್ನು ಸಹ ಭೇಟಿಯಾದರು.  ದಿ ಮೌಂಟೇನ್ ಸ್ಟೋರಿಯಲ್ಲಿ ಜನರು ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲಿದ್ದಾರೆ. ಇಲ್ಲಿ ಸಸ್ಯಾಹಾರಿ ಥಾಲಿಯ ಬೆಲೆ 780 ರೂ.ಗಳಾಗಿದ್ದರೆ, ಮಾಂಸಾಹಾರಿ ಥಾಲಿ 850 ರೂ.ಗಳಿಗೆ ಲಭ್ಯವಿರುತ್ತದೆ. ಮತ್ತು ಇಲ್ಲಿ ಚಹಾಕ್ಕೆ 30 ರೂಪಾಯಿ ನಿಗದಿದ ಮಾಡಲಾಗಿದೆ. ಈ ಕೆಫೆ ಮನಾಲಿಯಿಂದ 4 ಕಿ.ಮೀ ದೂರದಲ್ಲಿರುವ ಪರಿಣಿಯಲ್ಲಿದೆ.   

ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್‌ ಪಾಸ್ವಾನ್‌ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?