ಸಿಂಪಲ್ ಬ್ಯೂಟಿ ಕೃತಿ ಶೆಟ್ಟಿ ತಮ್ಮ ಬ್ಯೂಟಿ ಕಾಪಾಡಿಕೊಳ್ಳಲು ಈ ಒಂದು ವಸ್ತುವಿನಿಂದ ದೂರ ಉಳಿದಿದ್ದಾರಂತೆ....ಏನದು?
ಸೌತ್ ಚಿತ್ರರಂಗದಲ್ಲಿ ಮಿಂಚುತ್ತಿರುವ 20 ವರ್ಷ ಮಂಗಳೂರು ಸುಂದರಿ ಕೃತಿ ಶೆಟ್ಟಿ ಬ್ಯೂಟಿಗೆ ಸಿಕ್ಕಾಪಟ್ಟೆ ಇಂಪಾರ್ಟೆನ್ಸ್ ಕೊಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಸ್ಕಿನ್ ಕೇರ್ ಮತ್ತು ಸೆಲ್ಫ್ ಪ್ಯಾಂಪರ್ ಮಾಡುತ್ತಾರಂತೆ. ಪ್ರತಿ ದಿನವೂ ತಪ್ಪದೆ ಡಬಲ್ ಕ್ಲೆನ್ಸ್ ಮಾಡಿ ಮೇಕಪ್ ತೆಗೆದುಕೊಂಡು ಸ್ಕಿನ್ ಕೇರ್ ಮಾಡುತ್ತಾರಂತೆ. ಕೃತಿ ಸ್ಕಿನ್ ಕೋರಿಯನ್ ಸ್ಕಿನ್ ರೀತಿ ಕಾಣಿಸಲು ಕಾರಣ ಏನೆಂದು ನೆಟ್ಟಿಗರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.....
'ಸ್ಕೂಲ್ ದಿನಗಳಲ್ಲಿ ಅಮ್ಮನ ಜೊತೆ ನಾನು ಬುಕ್ ಶಾಪ್‌ಗೆ ಹೋಗುತ್ತಿದ್ದೆ ಆಗ ನಾನು ಅಮ್ಮನಿಂದ ಹಣ ಪಡೆದುಕೊಂಡು ಪುಸ್ತಕ ಖರೀದಿಸಿದ್ದೆ. ವಾವ್ ನನ್ನ ಮಗಳಿಗೆ ಬುಕ್ ಬೇಕು ಎಂದು ಅಮ್ಮ ಖುಷಿ ಪಟ್ಟರು ಆದರೆ ನಾನು ಖರೀದಿಸಿದ್ದು 'How to be gorgeous' ಎಂದು. ಹೇಗೋ ಮನೆಯವರನ್ನು ಯಾಮಾರಿಸಿ ಈ ಪುಸ್ತಕ ಓದುತ್ತಿದ್ದೆ. ಪ್ರತಿನಿತ್ಯ ಡಬಲ್ ಕ್ಲೆನ್ಸಿಂಗ್ ಮಾಡುವೆ ಹಾಗೂ ದಿನ ಬೆಳಗ್ಗೆ ಸನ್‌ಸ್ಕ್ರೀನ್ ಹಾಕುವೆ ಅದೇ ನನ್ನ ತ್ವಚ್ಛೆಯನ್ನು ಕಾಪಾಡುತ್ತಿರುವುದು. ದಿನ ಬಿಟ್ಟು ದಿನ ಟೋನರ್ ಬಳಸುವೆ' ಎಂದು ಕೃತಿ ಶೆಟ್ಟಿ ವೋಗ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸಿಂಪಥಿಗೋಸ್ಕರ್ ವರ್ಷ ಕಾವೇರಿ ಹೊಸ ಗೇಮ್ ಶುರು? ಕೈ ಹಿಡಿಯುವ ಹುಡುಗನ ಬಗ್ಗೆ ಚಿಂತಿಸುತ್ತಿರುವ ರೀಲ್ಸ್ ರಾಣಿ!
'ಸಕ್ಕರೆಯಿಂದ ದೂರ ಉಳಿದಿರುವೆ. ಸಕ್ಕರೆ ಬಿಟ್ಟಿರುವುದಕ್ಕೆ ನನ್ನ ತ್ವಚ್ಛೆಯಲ್ಲಿ ತುಂಬಾ ಬದಲಾವಣೆ ನೋಡಿರುವೆ ಅಲ್ಲದೆ ಯಾವ ಪ್ರಾಜೆಕ್ಟ್ ಮಾಡದ ಮ್ಯಾಜಿಕ್ ಸಕ್ಕರೆ ಬಿಡುವುದು ಮಾಡಿದೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನನ್ನ ಪ್ರೇರಣೆ, ಅವರ ಕಾನ್ಫಿಡೆನ್ಸ್ ನನಗೆ ತುಂಬಾ ಇಷ್ಟವಾಗುತ್ತದೆ. ನಮ್ಮ ಸುತ್ತ ಮುತ್ತಲ ವಾತಾವರಣ ತುಂಬಾನೇ ಮುಖ್ಯವಾಗುತ್ತದೆ. ಸಮಾಜಕ್ಕೆ ನಾನು ಪಾಸಿಟಿವಿಟಿ ಮತ್ತು ಕೈಂಡ್ನೆಸ್ ಹರಡುವುದಕ್ಕೆ ಇಷ್ಟ ಪಡುತ್ತೀವಿ. ಸಮಾಜದಲ್ಲಿ ನಾನು ಹೇಗೆ ಇರಬೇಕು ಅನ್ನೋದನ್ನು ಜವಾಬ್ದಾರಿಯಾಗಿ ಸ್ವೀಕರಿಸುತ್ತೀನಿ' ಎಂದು ಕೃತಿ ಹೇಳಿದ್ದಾರೆ.
ಒಂದು ರೀಲ್ ಮಾಡೋಕೆ 20 ಸಾವಿರ ಕೇಳ್ತೀನಿ; ಬೇರೆ ಬೇರೆ ದುಡಿಮೆ ಬಗ್ಗೆ ರಿವೀಲ್ ಮಾಡಿದ ಅನುಪಮಾ ಗೌಡ!
'ಪ್ರತಿ ದಿನ ಬೆಳಗ್ಗೆ ಸ್ಲೋ ಆಗಿ ಆರಂಭಿಸುವುದಕ್ಕೆ ಇಷ್ಟ ಪಡುತ್ತೀನಿ. ರೆಡಿಯಾಗುವುದು ತುಂಬಾನೇ ಸಿಂಪಲ್....ಮುಖ ತೊಳೆದುಕೊಂಡ ಮೇಲೆ ಲಿಪ್ ಟಿಂಟ್, ಕಣ್ಣು ರೆಪ್ಪೆಗಳನ್ನು ಕರ್ಲ್ ಮಾಡುವುದು ಅಷ್ಟೇ...ರೆಡಿಯಾಗಿ ಹೊರಡಲು ಸಜ್ಜಾಗಿರುವೆ. ಡ್ಯೂವಿ ಸ್ಕಿನ್, ಲೈಟ್ ಮೇಕಪ್ ಇಷ್ಟ ಪಡುತ್ತೀನಿ. ಬಾಕ್ಸ್ ರೀತಿಯಲ್ಲಿ ಐ ಬ್ರೋ ಮಾಡಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿತ್ತು. ಅದನ್ನು ನಾನು ಕೂಡ ಟ್ರೈ ಮಾಡೋಣ ಅಂದುಕೊಂಡು ಆನಂತರ ಸುಮ್ಮನಾದೆ. ಫ್ರೀ ಮಾಡಿಕೊಂಡು ಪಿಲಾಟೆ, ಏರಿಯಲ್ ಯೋಗ ಮತ್ತು ಡ್ಯಾನ್ಸ್ ಮಾಡುತ್ತೀನಿ' ಎಂದಿದ್ದಾರೆ ಕೃತಿ.