Sajal Ali: ಬಾಲಿವುಡ್​ಗೆ ಹಾರಲು ಸಿದ್ಧಳಾದ ಪಾಕ್​ ಬೆಡಗಿ- ಶ್ರೀದೇವಿ 'ಪುತ್ರಿ'

Published : Apr 17, 2023, 10:15 AM IST
Sajal Ali: ಬಾಲಿವುಡ್​ಗೆ ಹಾರಲು ಸಿದ್ಧಳಾದ ಪಾಕ್​ ಬೆಡಗಿ- ಶ್ರೀದೇವಿ 'ಪುತ್ರಿ'

ಸಾರಾಂಶ

ಮಾಮ್​ ಚಿತ್ರದಲ್ಲಿ ನಟಿ ಶ್ರೀದೇವಿ ಜೊತೆ ನಟಿಸಿದ್ದ ಪಾಕಿಸ್ತಾನದ ನಟಿ ಸಜಲ್​ ಅಲಿ ಪುನಃ ಬಾಲಿವುಡ್​ಗೆ ಬರಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಏನು ಹೇಳಿದ್ದಾರೆ ಅವರು?   

2018ರ ಫೆಬ್ರುವರಿ 24ರಂದು ನಟಿ ಶ್ರೀದೇವಿ ನಿಗೂಢವಾಗಿ ಸಾವನ್ನಪ್ಪಿದಾಗ ಕಂಬನಿ ಮಿಡಿದವರು ಅದೆಷ್ಟೋ ಮಂದಿ. ಇವರ ಸಾವಿನ ಬೆನ್ನಲ್ಲೇ ಪಾಕಿಸ್ತಾನದ ನಟಿ ಹಾಕಿದ್ದ ಇನ್​ಸ್ಟಾಗ್ರಾಮ್​ (Instagram) ಒಂದು ಬಹಳ ಸುದ್ದಿಯಾಗಿತ್ತು. ಇದಕ್ಕೆ ಕಾರಣ ನಟಿ  ನಾನು ಮತ್ತೊಮ್ಮೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಎಂದು ಪೋಸ್ಟ್​ ಹಾಕಿದ್ದರು. ಅಸಲಿಗೆ ಈ ನಟಿಯ ಹೆಸರು  ಸಜಲ್ ಅಲಿ. ಸಜಲ್​ ಅವರು  ಈ ಹಿಂದೆ ತೆರೆಕಂಡಿದ್ದ ಶ್ರೀದೇವಿಯವರ ‘ಮಾಮ್’ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಶ್ರೀದೇವಿಯವರ ಮಲ ಮಗಳಾಗಿ ಸಜಲ್ (Sajal) ಅಭಿನಯಿಸಿದ್ದರು. ಅವರ ಅಭಿನಯ ಎಲ್ಲರನ್ನೂ  ಸೆಳೆದಿತ್ತು. ಆ ಸಮಯದಲ್ಲಿ ಶ್ರೀದೇವಿಯವರ ಜೊತೆಗಿನ ನಟನೆಯನ್ನು ನೆನಪಿಸಿಕೊಂಡಿದ್ದ ಸಜಲ್​,  ಮೊದಲ ಚಿತ್ರದಲ್ಲೇ ಶ್ರೀದೇವಿಯಂತಹ ದೊಡ್ಡ ನಟಿಯ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ನನ್ನ ಪುಣ್ಯ ಎಂದು ಕೊಂಡಾಡಿದ್ದರು. ಆದರೆ ಶ್ರೀದೇವಿಯವರನ್ನು ಕಳೆದುಕೊಂಡಾಗ ಬಿಕ್ಕಿ ಬಿಕ್ಕಿ ಅತ್ತವರಲ್ಲಿ ಸಜಲ್​ ಕೂಡ ಒಬ್ಬರು. 

ಇದೀಗ ನಟಿ  ಮತ್ತೊಮ್ಮೆ  ಸುದ್ದಿಯಲ್ಲಿದ್ದಾರೆ. ಭಾರತೀಯ ಚಿತ್ರಗಳಲ್ಲಿ ಕೆಲಸ ಮಾಡಲು ಇಷ್ಟಪಡುವುದಾಗಿ ಅವರು ಹೇಳಿಕೊಂಡಿದ್ದಾರೆ. ನಾನು ಈ ಹಿಂದೆ ಮಾಮ್​ನಲ್ಲಿ (Mom) ಕೆಲಸ ಮಾಡಿದ್ದೆ. ಆ ವೇಳೆ ಬಾಲಿವುಡ್​ ನನಗೆ ಅಚ್ಚುಮೆಚ್ಚು ಎನಿಸಿತು.  ನಾನು ಮತ್ತೆ ಭಾರತದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಆದರೆ ಯಾವಾಗ ಎಂದು ನನಗೆ ತಿಳಿದಿಲ್ಲ. ಭವಿಷ್ಯವು ನನಗಾಗಿ ಏನನ್ನು ಕಾದಿರಿಸಿದೆ ಎಂದು ನೋಡೋಣ ಎಂದರು. ಒಟ್ಟಿನಲ್ಲಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬರಲು ನಟಿ ಸಿದ್ಧತೆ ನಡೆಸಿದ್ದಾರೆ. ಕಲೆ ಮತ್ತು ಕಲಾವಿದನ ನಡುವೆ ರಾಜಕೀಯ ಬರಬೇಕು ಎಂದು ನಾನು ಭಾವಿಸುವುದಿಲ್ಲ. ನಾನು ಈ ಬಗ್ಗೆ ನಾನು ಹಲವು ವರ್ಷಗಳಿಂದ ಮಾತಾಡುತ್ತಿದ್ದೇನೆ. ಪಾಕಿಸ್ತಾನ ಹಾಗೂ ಭಾರತದ ನಡುವೆ ಇರುವ ಗೋಡೆಗಳು ಉರುಳಲಿ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಹೇಳಿದ್ದಾರೆ.

ಬಾಲಿವುಡ್​ ಇಂಡಸ್ಟ್ರಿಯಲ್ಲಿ ತಲ್ಲಣ ಸೃಷ್ಟಿಸಿದ ಶ್ರೀದೇವಿಯ ನಿಗೂಢ 'ತಂಗಿ'! ಯಾರೀಕೆ?

ಇದೇ ವೇಳೆ ನಟಿ ಶ್ರೀದೇವಿ ಅವರನ್ನು ಸಜಲ್​ ನೆನಪಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. 2017ರಲ್ಲಿ ಮಾಮ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಜಲ್ ಅವರ ಸ್ವಂತ ತಾಯಿ ನಿಧನರಾಗಿದ್ದರು. ಅನಂತರ ಸಜಲ್​ ಅವರಿಗೆ ತಾಯಿಯ ಪ್ರೀತಿ ತೋರಿದ್ದವರು ಶ್ರೀದೇವಿಯಂತೆ.  ಸಜಲ್ ಅವರಿಗೆ ಧೈರ್ಯ ತುಂಬಿ ಸ್ವಂತ ಮಗಳಂತೆ ಕಾಣುತ್ತಿದ್ದರು ಎಂದು ಸಜಲ್​ ಹೇಳಿಕೊಂಡಿದ್ದರು. ಶ್ರೀದೇವಿ (Shridevi) ಸೆಟ್‍ನಲ್ಲಿ ತುಂಬಾ ಪ್ರೊಫೆಷನಲ್ ಆಗಿರುತ್ತಿದ್ದರು. ಆದರೆ ವೈಯಕ್ತಿಯ ವಿಚಾರಕ್ಕೆ ಬಂದರೆ, ನನ್ನ ಜೊತೆ ಅವರ  ಬಾಂಧವ್ಯವೇ ಬೇರೆಯಾಗಿತ್ತು. ನನ್ನ ತಾಯಿ ಸಾವಿನ ಬಳಿಕ ಆ ಸ್ಥಾನವನ್ನು ಶ್ರೀದೇವಿ ತುಂಬಿದ್ದರು ಎಂದು ಸಜಲ್​ ಹೇಳಿದ್ದಾರೆ. ನನ್ನಗೆ ತಾಯಿಯ ನೆನಪಾದಾಗಲೆಲ್ಲಾ ಶ್ರೀದೇವಿ ಅಮ್ಮನಿಗೆ ಕರೆ ಮಾಡಿ ಮನಸಾರೆ ಅತ್ತುಬಿಡುತ್ತಿದ್ದೆ ಎಂದು ನೆನಪಿಸಿಕೊಂಡರು.  ಶ್ರೀದೇವಿಜಿ ಅವರನ್ನು ನೋಡಿದಾಗ ನನಗೆ ಭಾರತದಲ್ಲಿ ಒಂದು ಮನೆ ಇರಬೇಕು ಎಂದು ಅಂದುಕೊಂಡಿದ್ದೆ. ಆದರೆ ವಿಧಿಯಾಟವೇ ಬೇರೆಯಾಗಿ ಹೋಯಿತು. ನಾನು ಮತ್ತೊಂದು ಅಮ್ಮನನ್ನೂ ಕಳೆದುಕೊಂಡು ಬಿಟ್ಟೆ ಎಂದು ಗದ್ಗದಿತರಾದರು. 
 
ರವಿ ಉದಯವಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾಮ್, 2017 ಜುಲೈ ನಲ್ಲಿ ತೆರೆಕಂಡಿತ್ತು. ಚಿತ್ರದಲ್ಲಿ ಶ್ರೀದೇವಿ, ಸಜಲ್ ಅಲಿ, ನವಾಜುದ್ದೀನ್ ಸಿದ್ದೀಕಿ, ಅಕ್ಷಯ್ ಖನ್ನಾ ಮತ್ತು ಅದ್ನಾನ್ ಸಿದ್ದೀಕಿ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿತ್ತು. ಈ ಚಿತ್ರದ ಬಳಿಕ ಶಾರುಖ್ (Sharukh Khan) ಪುತ್ರ ಆರ್ಯನ್ ಖಾನ್​ ಕುರಿತು ಪೋಸ್ಟ್​ ಹಾಕಿ ಭಾರಿ ಸುದ್ದಿಯಾಗಿದ್ದರು.  ಆರ್ಯನ್ ಖಾನ್ (Aryan Khan) ಅಂದ್ರೆ ತನಗಿಷ್ಟ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಭಾರಿ ಸದ್ದು ಮಾಡಿದ್ದರು. ಇವರಿಬ್ಬರು ಮದುವೆ ಆದರೆ ಹೇಗಿರುತ್ತದೆ. ಇವರಿಬ್ಬರ ಜೋಡಿ ಹೇಗಿದೆ ಎಂದು ಈಗಾಗಲೇ ನೆಟ್ಟಿಗರು ಮುಂದಾಲೋಚನೆ ಮಾಡಿ ಕಮೆಂಟ್​ ಕೂಡ ಮಾಡಿದ್ದರು. 

ಆರ್ಯನ್ ಖಾನ್‌ ಫೋಟೋ ಶೇರ್‌ ಮಾಡಿದ ಪಾಕ್ ನಟಿ; ಏನ್ ನಡಿತಿದೆ ಎಂದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!