ಬೈಕಾಟ್​ ಹೃತಿಕ್​ ರೋಷನ್​ ಎಂದು ನೆಟ್ಟಿಗರು ಗರಂ: ಅಷ್ಟಕ್ಕೂ ಆಗಿದ್ದೇನು?

Published : Apr 17, 2023, 10:17 AM IST
ಬೈಕಾಟ್​ ಹೃತಿಕ್​ ರೋಷನ್​ ಎಂದು ನೆಟ್ಟಿಗರು ಗರಂ: ಅಷ್ಟಕ್ಕೂ ಆಗಿದ್ದೇನು?

ಸಾರಾಂಶ

ಇತ್ತೀಚೆಗೆ ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡ ಹೃತಿಕ್​ ರೋಷನ್​ ವಿರುದ್ಧ ನೆಟ್ಟಿಗರು ಭಾರಿ ಗರಂ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?   

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಇತ್ತೀಚೆಗೆ ಡಿನ್ನರ್ ಕಾರ್ಯಕ್ರಮವೊಂದರಲ್ಲಿ  ಕಾಣಿಸಿಕೊಂಡಿದ್ದರು. ಅವರು ತಮ್ಮ ಮಾಜಿ ಪತ್ನಿ ಸುಸ್ಸೇನ್ ಖಾನ್ ಮತ್ತು ಆಕೆಯ ಗೆಳೆಯ ಅರ್ಸ್ಲಾನ್ ಗೋನಿ ಅವರೊಂದಿಗೆ ಕಾಣಿಸಿಕೊಂಡರು. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಹೃತಿಕ್‌ರನ್ನು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ, ನಟರನ್ನು ಟ್ರೋಲ್ ಮಾಡಲು ಏನಾಯಿತು ಎಂದರೆ ಅವರು ಮಾಜಿ ಪತ್ನಿಯ ಜೊತೆ ಕಾಣಿಸಿಕೊಂಡಿದ್ದಕ್ಕಾಗಲೀ ಅಥವಾ ಮಾಜಿ ಪತ್ನಿ ಅವರ ಗೆಳೆಯ ಜೊತೆ ಕಾಣಿಸಿಕೊಂಡಿದ್ದಕ್ಕಾಗಲೀ ಅಲ್ಲ, ಬದಲಿಗೆ, ಸೆಲ್ಫಿಯೊಂದರ ವಿಚಾರದಲ್ಲಿ ಹೃತಿಕ್​ ರೋಷನ್​ ಅವರನ್ನು ಟ್ರೋಲ್​ (Troll) ಮಾಡಲಾಗುತ್ತಿದೆ. 

ಸೆಲೆಬ್ರಿಟಿಗಳು ಅದರಲ್ಲಿಯೂ ಚಿತ್ರತಾರೆಯರು ಎಲ್ಲಿಯಾದರೂ ಕಾಣಿಸಿಕೊಂಡರೆ ಸಾಕು ಅಭಿಮಾನಿಗಳು ಮುಗಿ ಬೀಳುವುದು ಸಹಜ. ಅದು ಕೆಲವೊಮ್ಮೆ ನಟ-ನಟಿಯರಿಗೆ ತೀವ್ರವಾಗಿ ಮುಜುಗರ ತರುವುದೂ ಉಂಟು. ಕೆಲವೊಮ್ಮೆ ಅವರ ಖಾಸಗಿ ಜೀವನಕ್ಕೆ ಧಕ್ಕೆ ಬರುವುದೂ ಉಂಟು. ಇದೇ ಕಾರಣಕ್ಕೆ ಚಿತ್ರ ನಟ-ನಟಿಯರು ಎಲ್ಲಿಯೇ ಹೋದರೂ ಅವರ ಸಮೀಪ ಯಾರೂ ಬರಲು ಬಿಡುವುದಿಲ್ಲ ಅವರ ಅಂಗರಕ್ಷಕರು (Bodygruads). ಅಭಿಮಾನ ಅಭಿಮಾನವಾಗಿದ್ದರೆ ಚೆನ್ನ, ಆದರೆ ಕೆಲವು ಅಭಿಮಾನಿಗಳು ಅತಿರೇಕಕ್ಕೆ ಹೋದಾಗ ಪರಿಸ್ಥಿತಿ ಕೈ ಮೀರುವುದು ಇದೆ. ಆದರೆ ಅತಿರೇಕದ ಅಭಿಮಾನ ಹೊಂದಿದವರು ಇರುವುದರಿಂದಲೇ ಎಷ್ಟೋ ನಟ-ನಟಿಯರ ಚಿತ್ರಗಳು ಇಂದು ಬ್ಲಾಕ್​ಬಸ್ಟರ್​ ಆಗುತ್ತಿದೆ ಎನ್ನುವುದೂ ನಿಜವೇ. ಚಿತ್ರ ಎಷ್ಟೇ ಕೆಟ್ಟಿದ್ದಾಗಿದ್ದರೂ ಇಂಥವರು ಅದರಲ್ಲಿ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಚಿತ್ರ ಹಿಟ್​ ಆಗುವ ಉದಾಹರಣೆಗಳು ಸಾಕಷ್ಟು ಇವೆ. ಇದೇ ಕಾರಣಕ್ಕೆ ಅಭಿಮಾನಿಗಳೇ ತಮ್ಮ ದೇವರು ಎಂಬಂತೆ ಬಹುತೇಕ ಎಲ್ಲಾ ನಟ-ನಟಿಯರು ಹೇಳುತ್ತಾರೆ. ಆದರೆ ಇದೇ ವೇಳೆ ಅವರೇನಾದರೂ ತಮ್ಮ ಬಳಿ ಬರಲು ಹಾತೊರೆದಾಗ ಆ ಅಭಿಮಾನಿಗಳನ್ನು ದೂರ ತಳ್ಳುವುದು ಇದೆ.

ಡೇಟಿಂಗ್​ನಲ್ಲಿರೋ ಹೃತಿಕ್ ರೋಷನ್​ ಮಗನಿಗೆ ಇಂದು 17ರ ಸಂಭ್ರಮ

ಇಲ್ಲಿ ಆದದ್ದೂ ಅದೇ.  ವಾಸ್ತವವಾಗಿ, ಹೃತಿಕ್ ರೋಷನ್​ ರೆಸ್ಟೋರೆಂಟ್‌ನಿಂದ (Restorant) ಹೊರಬಂದಾಗ, ಅವರ ಅಭಿಮಾನಿಯೊಬ್ಬರು ನಟನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದರು. ಬಟ್ಟೆಗಳನ್ನು ನೋಡಿದರೆ ಫುಡ್ ಡೆಲಿವರಿ ಮಾಡುವವರಂತೆ ಕಾಣುತ್ತಿದ್ದರು. ಫುಡ್ ಡೆಲಿವರಿ ಮ್ಯಾನ್ ಹೃತಿಕ್ ಜೊತೆ ಫೋಟೋ ತೆಗೆಸಿಕೊಳ್ಳಲು ಆರಂಭಿಸಿದ ತಕ್ಷಣ ಅವರ ಅಂಗರಕ್ಷಕರು ಆತನನ್ನು ಹಿಂದಕ್ಕೆ ತಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ದೃಶ್ಯ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜನ ನಟನ ವಿರುದ್ಧ ಹರಿಹಾಯ್ದಿದ್ದಾರೆ. ಈ ವೀಡಿಯೊ ಕಾಣಿಸಿಕೊಂಡ ನಂತರ, ಬಳಕೆದಾರರು ಅದರ ಬಗ್ಗೆ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.  'ನಿಮ್ಮ ಚಿತ್ರಗಳನ್ನು ನೋಡಲು ಬಡವರೇ ಬೇಕು, ಆದರೆ ಅವರು ನಿಮ್ಮ ಬಳಿ ಬಂದರೆ ಹೀಗೆ  ತಳ್ಳಿದಿರಿ' ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
 
ಅಸಲಿಗೆ ಇಲ್ಲಿ, ಡೆಲಿವರಿ ಬಾಯ್​ (Delivery Boy) ಅವರನ್ನು ತಳ್ಳಿದ್ದು ಅಂಗರಕ್ಷಕನಾದರೂ, ನಟ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಇದ್ದುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಎಷ್ಟರ ಮಟ್ಟಿಗೆ ಜನರಿಗೆ ಸಿಟ್ಟು ತರಿಸಿದೆ ಎಂದರೆ, ನಟನ ಚಿತ್ರಕ್ಕೆ ಬಹಿಷ್ಕಾರ ಹಾಕಿ ಎಂದು ಕರೆ ಕೊಟ್ಟಿದ್ದಾರೆ. ಬೈಕಾಟ್​ ಹೃತಿಕ್​ ರೋಷನ್​ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರಿಗೆ ಬಾಡಿ ಗಾರ್ಡ್​ ಈ ರೀತಿ ನಡೆಸಿಕೊಂಡ  ನಂತರವೂ ಹೃತಿಕ್ ಏಕೆ ಮೌನವಾಗಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.  ಇನ್ನು ಹೃತಿಕ್ ಅವರ ಮುಂಬರುವ ಚಿತ್ರದ ಬಗ್ಗೆ ಮಾತನಾಡುವುದಾದರೆ  'ಫೈಟರ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಪಠಾಣ್​, ಬಾಹುಬಲಿ2 ದಾಖಲೆ ಮುರಿಯಲಿವೆ Hrithik Roshan ಚಿತ್ರಗಳು!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?