ಮಗಳಿಗೆ ಬುದ್ಧಿ ಹೇಳೋದು ಬೇಕಿಲ್ಲ ನಿಮ್ದು ಸಣ್ಣ ಬುದ್ಧಿ; ಕರ್ಕಿ ಎಂದು ಮಗಳನ್ನು ಟ್ರೋಲ್‌ ಮಾಡಿದವರಿಗೆ ನಟಿ ಕಾಜಲ್‌ ಉತ್ತರ

Published : Mar 21, 2023, 03:25 PM IST
ಮಗಳಿಗೆ ಬುದ್ಧಿ ಹೇಳೋದು ಬೇಕಿಲ್ಲ ನಿಮ್ದು ಸಣ್ಣ ಬುದ್ಧಿ; ಕರ್ಕಿ ಎಂದು ಮಗಳನ್ನು ಟ್ರೋಲ್‌ ಮಾಡಿದವರಿಗೆ ನಟಿ ಕಾಜಲ್‌ ಉತ್ತರ

ಸಾರಾಂಶ

ಕೊನೆಗೂ ಮಗಳ ಟ್ರೋಲ್‌ಗಳ ಬಗ್ಗೆ ಮೌನ ಮುರಿದ ನಟಿ ಕಾಜಲ್ ದೇವಗನ್.  ವಿದೇಶದಲ್ಲಿದ್ದರೂ ಸೋಷಿಯಲ್ ಮೀಡಿಯಾ ಸೋಷಿಯಲ್ ಮೀಡಿಯಾನೇ..............  

ಬಾಲಿವುಡ್ ಖಡಕ್ ಪೊಲೀಸ್ ಆಫೀಸರ್‌ ಅಜಯ್ ದೇವಗನ್‌ ಮತ್ತು ಲವರ್ ಗರ್ಲ್‌ ಕಾಜಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣದಿಂದಲೂ ಹೆಡ್‌ಲೈನ್ಸ್‌ನಲ್ಲಿದ್ದಾರೆ. ತಂದೆ ತಾಯಿ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಹಣ ಗಳಿಸಿದ್ದಾರೆ ಅಂದ್ರೆ ಮಕ್ಕಳು ಕೂಡ ಅದೇ ಹಾದಿಯಲ್ಲಿ ನಡೆಯುವುದು ಸಾಮಾನ್ಯ. ಈ ಸ್ಟಾರ್‌ ಕಪಲ್‌ಗೆ ಇಬ್ಬರು ಮುದ್ದಾದ ಮಕ್ಕಳು...ನೈಸಾ ಮತ್ತು ಯುಗ್. ನೈಸಾ ವಿದೇಶದಲ್ಲಿ ವಿದ್ಯಾಭ್ಯಾಗ ಮುಗಿಸಿ ಸದ್ಯಕ್ಕೆ ಫ್ರೀ ಟೈಂ ಎಂಜಾಯ್ ಮಾಡುತ್ತಿದ್ದಾರೆ. ಯುಗ್‌ ಸ್ಕೂಲ್‌ -ಕ್ರೀಡೆ ಅಂತ ಬ್ಯುಸಿಯಾಗಿದ್ದಾನೆ. ಈ ವಿಚಾರ ಏನೆಂದರೆ ನೈಸಾ ಮತ್ತೆ ಟ್ರೋಲ್‌ಗಳಿಗೆ ಗುರುತಿಯಾಗಿರುವುದು...

ಹೌದು! ಬಿ-ಟೌನ್‌ನಲ್ಲಿ ಅತಿ ಹೆಚ್ಚು ಟ್ರೋಲ್‌ ಆದ ಸ್ಟಾರ್‌ ಕಿಡ್‌ನಲ್ಲಿ ನೈಸಾ ಮೊದಲ ಸ್ಥಾನ ಪಡೆದುಕೊಳ್ಳುತ್ತಾರೆ. ನೋಡಲು ಕಪ್ಪಿದ್ದಾಳೆ, ತುಟಿಗಳು ಸರಿ ಇಲ್ಲ, ವಯಸ್ಸಿಗೆ ತಕ್ಕ ದೇಹವಿಲ್ಲ..ಮಾಡಲ್ ವಾಕಿಂಗ್ ಸ್ಟೈಲ್‌ ಇಲ್ಲ ಅದಿಲ್ಲ ಇದಿಲ್ಲ ಅಂದುಕೊಂಡು ನೈಸಾಳನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಬೀದಿ ನಾಯಿಗಳ ಕಾಮೆಂಟ್‌ಗೆ ಕೇರ್ ಮಾಡಬಾರದು ಎಂದು ಇಷ್ಟ ದಿನ ಸುಮ್ಮನಿದ್ದ ಕಾಜಲ್‌ ಫುಲ್ ಗರಂ ಆಗಿ ರಿಯಾಕ್ಟ್ ಮಾಡಿದ್ದಾರೆ. 

ನೈಸಾ ದೇವಗನ್ ಫೊಟೋ ವೈರಲ್‌; ಅಮ್ಮನಂತೆ ಮಗಳು ಎಂದ ನೆಟ್ಟಿಗರು

ನೈಸಾ ವಿದೇಶದಲ್ಲಿ ಓಡುವಾಗ ವರ್ಷಕ್ಕೆ ಎರಡು ಮೂರು ಸಲ ಭಾರತಕ್ಕೆ ಬರುತ್ತಿದ್ದರು. ಆಗ ಸೆರೆ ಹಿಡಿದ ಫೋಟೋಗಳು ಈಗಲೂ ವೈರಲ್ ಆಗುತ್ತಿದೆ. 'ಪೋಷಕರಾಗಿ ನಮ್ಮ ಮಕ್ಕಳಿಗೆ ಸಣ್ಣ ತೊಂದರೆ ಕೂಡ ಆಗಬಾರದು ಎಂದು ಯೋಚನೆ ಮಾಡುತ್ತೀವಿ. ತುಂಬಾ ಕಾಳಜಿ ವಹಿಸಿ ಮಗಳನ್ನು ಬೆಳೆಸುತ್ತಿರುವಾಗ ಆಕೆಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಾರೆ. ಟ್ರೋಲ್‌ ಕ್ರೇಜ್ ಆಗಷ್ಟೇ ಭಾರತದಲ್ಲಿ ಆರಂಭವಾಗಿತ್ತು ನನ್ನ ಪುಣ್ಯಕ್ಕೆ ನೈಸಾ ವಿದೇಶದಲ್ಲಿದ್ದಳು.  ಭಾರತದಲ್ಲಿ ಏನಾಗುತ್ತಿದೆ ಅನ್ನೋ ಅರಿವು ಕೂಡ ಆಕೆಗೆ ಇರಲಿಲ್ಲ' ಎಂದು ಕಾಜಲ್ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಗಳ ಬಗ್ಗೆ ಮಾತನಾಡಿದ್ದಾರೆ.

ಹಿಂದಿಯಲ್ಲಿ ಮಾತನಾಡಲು ಬರದೇ ಪರದಾಡಿದ ಅಜಯ್ ದೇವಗನ್ ಪುತ್ರಿಗೆ ರಾಷ್ಟ್ರಭಾಷೆ ಪಾಠ!

'ನೈಸಾ ಭಾರತದಲ್ಲಿ ಇರಲಿ ವಿದೇಶದಲ್ಲಿ ಇರಲಿ ಸೋಷಿಯಲ್ ಮೀಡಿಯಾ ಇಸ್‌ ಸೋಷಿಯಲ್ ಮೀಡಿಯಾ...ಇಡೀ ಪ್ರಪಂಚವೇ ಆನ್‌ಲೈನ್‌ ಆಗಿರುವಾಗ ಕೆಲವೊಂದು ವಿಚಾರಗಳನ್ನು ನಾನು ತಡೆಯುವುದಕ್ಕೆ ಆಗಲ್ಲ. ನಮ್ಮ ಮಕ್ಕಳನ್ನು ನಾವು ಟ್ರೈನ್ ಮಾಡಬೇಕು ಅಥವಾ ಏನಾಗುತ್ತಿದೆ ಪ್ರಪಂಚದಲ್ಲಿ ಎಂದು ಅರ್ಥ ಮಾಡಿಸಬೇಕು. ನಮ್ಮ ಸೊಸೈಟಿಯ ಸಣ್ಣ ಭಾಗದ ಜನರು ಮಾತ್ರ ಈ ಟ್ರೋಲ್ ಮಾಡುವುದು ನೆಗೆಟಿವ್ ಮಾತನಾಡುವುದು. ನನ್ನ ಬಗ್ಗೆ ನಾವು ಏನು ಯೋಚನೆ ಮಾಡುತ್ತೀವಿ ಅನ್ನೋದು ಮುಖ್ಯವಾಗುತ್ತದೆ ಜನರ ಕಾಮೆಂಟ್ ಅಲ್ಲ' ಎಂದು ಕಾಜಲ್ ಹೇಳಿದ್ದಾರೆ.

'ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು ಅನ್ನೋ ವಿಚಾರವನ್ನು ನನ್ನ ಮಗನಿಗೆ ಕಲಿಸುತ್ತಿರುವೆ. ನನ್ನ ಮಗಳಿಗೂ ನಾನು ಪಾಠ ಮಾಡಬೇಕು...ಹಾಗಂತ ಊರಿನವರೆಲ್ಲಾ ನನ್ನ ಮಗಳಿಗೆ ಬುದ್ಧಿ ಹೇಳಿಕೊಡಬೇಕಿಲ್ಲ. Self Respect ತುಂಬಾ ಮುಖ್ಯ ಅನ್ನೋದು ಆಕೆಗೆ ತಿಳಿಸಿರುವೆ' ಎಂದಿದ್ದಾರೆ ಕಾಜಲ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್