Jyotika: ದಕ್ಷಿಣ ಭಾರತದ ಸಿನಿಮಾರಂಗದ ಸೀಕ್ರೆಟ್ ಬಿಚ್ಚಿಟ್ಟು ಬಾಲಿವುಡ್‌ ಮಂದಿಗೆ ಶಾಕ್ ಕೊಟ್ಟ ಜ್ಯೋತಿಕಾ!

Published : May 21, 2026, 03:42 PM IST
Jyothika Deepika Padukone

ಸಾರಾಂಶ

"ಇಂಡಸ್ಟ್ರಿಯಲ್ಲಿ ಎಷ್ಟೋ ಜನ ಪುರುಷ ನಟರಿದ್ದಾರೆ, ಅವರು 8 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುವುದಿಲ್ಲ. ಶಾಟ್ ಮುಗಿದಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಅವರು ತಮ್ಮ ಕಾರು ಹತ್ತಿ ಹೊರಟು ಹೋಗುತ್ತಾರೆ. ಅವರನ್ನು ಯಾರೂ ಪ್ರಶ್ನಿಸುವುದಿಲ್ಲ.

ದೀಪಿಕಾ ಪಡುಕೋಣೆ ಅವರ '8 ಗಂಟೆಗಳ ಶಿಫ್ಟ್' ರೂಲ್ಸ್: ಬಾಲಿವುಡ್‌ನಲ್ಲೀಗ ಕೆಲಸದ ಸಮಯದ ವಾರ್! ಜ್ಯೋತಿಕಾ-ಸೋನಾಕ್ಷಿ ಹೇಳಿದ್ದೇನು?

ಬಾಲಿವುಡ್‌ನ 'ಮಸ್ತಾನಿ' ದೀಪಿಕಾ ಪಡುಕೋಣೆ (Deepika Padukone) ಸದಾ ಸುದ್ದಿಯಲ್ಲಿರುವ ನಟಿ. ಇತ್ತೀಚೆಗೆ ಅವರು ಹಾಕಿರುವ ಹೊಸ ಕಂಡೀಷನ್ ಸಿನಿಮಾರಂಗದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಚಿತ್ರರಂಗ ಅಂದಮೇಲೆ ಹಗಲು-ರಾತ್ರಿ ಎನ್ನದೆ ಶೂಟಿಂಗ್ ನಡೆಯುವುದು ಸಾಮಾನ್ಯ. ಆದರೆ ದೀಪಿಕಾ ಮಾತ್ರ, "ನನಗೆ 8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ" ಎಂಬ ಕಟ್ಟುನಿಟ್ಟಿನ ನಿಯಮವನ್ನು ಅಳವಡಿಸಿಕೊಂಡಿದ್ದಾರೆ.

ಈ ಕಾರಣಕ್ಕಾಗಿಯೇ ಅವರು ಬಹುನಿರೀಕ್ಷಿತ 'ಸ್ಪಿರಿಟ್' ಮತ್ತು 'ಕಲ್ಕಿ 2' ಚಿತ್ರಗಳ ಚಿತ್ರೀಕರಣದಿಂದ ತುಸು ದೂರ ಉಳಿದಿದ್ದರು ಎಂಬ ಸುದ್ದಿಯಿದೆ. ದೀಪಿಕಾ ಅವರ ಈ ನಿರ್ಧಾರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸೌತ್ ಕ್ವೀನ್ ಜ್ಯೋತಿಕಾ (Jyothika) ಮತ್ತು ಬಾಲಿವುಡ್ ಸುಂದರಿ ಸೋನಾಕ್ಷಿ ಸಿನ್ಹಾ ಅವರು ದೀಪಿಕಾ ಬೆನ್ನಿಗೆ ನಿಂತಿದ್ದಾರೆ.

ದಕ್ಷಿಣದಲ್ಲಿ ಸಂಜೆ 6ಕ್ಕೇ ಪ್ಯಾಕ್ ಅಪ್!

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಜ್ಯೋತಿಕಾ, ದಕ್ಷಿಣ ಭಾರತದ ಚಿತ್ರರಂಗಕ್ಕೂ ಮತ್ತು ಬಾಲಿವುಡ್‌ಗೂ ಇರುವ ವ್ಯತ್ಯಾಸವನ್ನು ಬಿಚ್ಚಿಟ್ಟಿದ್ದಾರೆ. "ದಕ್ಷಿಣದಲ್ಲಿ ಶೂಟಿಂಗ್ ಸಂಸ್ಕೃತಿ ತುಂಬಾ ಶಿಸ್ತುಬದ್ಧವಾಗಿದೆ. ಅಲ್ಲಿ ಶೇ. 99 ರಷ್ಟು ಸಿನಿಮಾಗಳು ಸಂಜೆ 6 ಗಂಟೆಯಾಗುತ್ತಿದ್ದಂತೆಯೇ 'ಪ್ಯಾಕ್ ಅಪ್' ಆಗುತ್ತವೆ. ನಾವು ಬೆಳಿಗ್ಗೆ 7 ಗಂಟೆಗೆ ಕೆಲಸ ಆರಂಭಿಸುತ್ತೇವೆ ಮತ್ತು ಸಂಜೆ ಸರಿಯಾಗಿ 6 ಗಂಟೆಗೆ ಮುಗಿಸುತ್ತೇವೆ. ಹಾಗಾಗಿ 8 ಗಂಟೆಗಳ ಕೆಲಸದ ಬೇಡಿಕೆ ಇಡುವುದು ಖಂಡಿತಾ ತಪ್ಪಲ್ಲ" ಎಂದು ಜ್ಯೋತಿಕಾ ವಿವರಿಸಿದ್ದಾರೆ.

ಗಂಡಸರಿಗೊಂದು ನ್ಯಾಯ, ಹೆಂಗಸರಿಗೊಂದು ನ್ಯಾಯವೇ?

ಇದೇ ವೇಳೆ ಸೋನಾಕ್ಷಿ ಸಿನ್ಹಾ ಅವರು ಪುರುಷ ನಟರ ಬಗ್ಗೆ ಒಂದು ಸ್ಫೋಟಕ ಸತ್ಯವನ್ನು ಹೊರಹಾಕಿದ್ದಾರೆ. "ಇಂಡಸ್ಟ್ರಿಯಲ್ಲಿ ಎಷ್ಟೋ ಜನ ಪುರುಷ ನಟರಿದ್ದಾರೆ, ಅವರು 8 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುವುದಿಲ್ಲ. ಶಾಟ್ ಮುಗಿದಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಅವರು ತಮ್ಮ ಕಾರು ಹತ್ತಿ ಹೊರಟು ಹೋಗುತ್ತಾರೆ. ಅವರನ್ನು ಯಾರೂ ಪ್ರಶ್ನಿಸುವುದಿಲ್ಲ. ದೀಪಿಕಾ ಅವರಂತಹ ಯಶಸ್ವಿ ನಟಿ, ದಶಕಗಳಿಂದ ಈ ಕ್ಷೇತ್ರದಲ್ಲಿರುವವರು ಇಂತಹ ಬೇಡಿಕೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.

ತಾಯ್ತನದ ಜವಾಬ್ದಾರಿ ಮತ್ತು ಕೆಲಸದ ಸಮತೋಲನ!

ಜ್ಯೋತಿಕಾ ಅವರು ಮತ್ತೊಂದು ಪ್ರಮುಖ ಅಂಶವನ್ನು ನೆನಪಿಸಿದ್ದಾರೆ. "ದೀಪಿಕಾ ಈಗ ಒಬ್ಬ ತಾಯಿ. ಅವರಿಗೆ ಪುಟ್ಟ ಮಗುವಿದೆ. ಒಬ್ಬ ನಟಿಯಾಗಿ ಮಾತ್ರವಲ್ಲದೆ, ತಾಯಿಯಾಗಿ ತಮ್ಮ ಮಗುವಿನೊಂದಿಗೆ ಸಮಯ ಕಳೆಯಲು ಅವರಿಗೆ ಈ ಎಂಟು ಗಂಟೆಗಳ ಶಿಫ್ಟ್ ಬಹಳ ಮುಖ್ಯ. ಅಷ್ಟಕ್ಕೂ ಈ ಹಂತ ತಲುಪಲು ಅವರು ಸತತ ಪರಿಶ್ರಮ ಪಟ್ಟಿದ್ದಾರೆ, ಆ ಗೌರವ ಅವರಿಗೆ ಸಿಗಲೇಬೇಕು" ಎಂದು ಬೆಂಬಲ ಸೂಚಿಸಿದರು.

'ಸಿಸ್ಟಮ್' ಮೂಲಕ ಬರಲಿದ್ದಾರೆ ಜ್ಯೋತಿಕಾ-ಸೋನಾಕ್ಷಿ!

ಅಂದಹಾಗೆ, ಈ ಇಬ್ಬರೂ ನಟಿಯರು ಸದ್ಯ ತಮ್ಮ ಮುಂಬರುವ ಚಿತ್ರ 'ಸಿಸ್ಟಮ್' (System) ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಈ ಸಿನಿಮಾದಲ್ಲಿ ಜ್ಯೋತಿಕಾ ಸ್ಟೆನೋಗ್ರಾಫರ್ ಆಗಿ ಕಾಣಿಸಿಕೊಂಡರೆ, ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರು ಸೋನಾಕ್ಷಿ ತಂದೆಯ ಪಾತ್ರದಲ್ಲಿ ಹಾಗೂ ವಕೀಲರಾಗಿ ನಟಿಸಿದ್ದಾರೆ. ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ ಈ ಕ್ರೈಮ್ ಡ್ರಾಮಾ ಚಿತ್ರವು ಮೇ 22 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ಒಟ್ಟಿನಲ್ಲಿ, ದೀಪಿಕಾ ಪಡುಕೋಣೆ ಆರಂಭಿಸಿರುವ ಈ '8 ಗಂಟೆಗಳ ಕೆಲಸದ ಸಂಸ್ಕೃತಿ' ಬಾಲಿವುಡ್‌ನಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Trisha: ದಳಪತಿ 'ದೊರೆ'ಯಾದ ಬೆನ್ನಲ್ಲೇ 'ಸೂರ್ಯ'ಗೆ ಶಾಪ ವಿಮೋಚನೆ ಮಾಡಿದ ತ್ರಿಷಾ; ಮುಂದೇನ್ ಗೊತ್ತಾ?
Rubina Khan: 'ಗಿಡ್ಡ-ಸಣ್ಣ ಬಟ್ಟೆ ಧರಿಸಿದ್ರೆ ನಮ್ಗೆ ಡಬಲ್ ಪೇಮೆಂಟ್ ಸಿಗ್ತಿತ್ತು; ಬಾಲಿವುಡ್ ಕರಾಳತೆ ಬಿಚ್ಚಿಟ್ಟ ಡಾನ್ಸರ್!