Trisha: ದಳಪತಿ 'ದೊರೆ'ಯಾದ ಬೆನ್ನಲ್ಲೇ 'ಸೂರ್ಯ'ಗೆ ಶಾಪ ವಿಮೋಚನೆ ಮಾಡಿದ ತ್ರಿಷಾ; ಮುಂದೇನ್ ಗೊತ್ತಾ?

Published : May 21, 2026, 02:09 PM IST
Vijay Trisha Suriya

ಸಾರಾಂಶ

ವಿಜಯ್ ಪ್ರಮಾಣ ವಚನದ ದಿವಸ ತ್ರಿಷಾ ಸೀರೆಯುಟ್ಟು, ಮಲ್ಲಿಗೆ ಮುಡಿದು ಥೇಟ್ ವಿಜಯ್ ಪತ್ನಿಯ ರೀತಿ ಕಾಣಿಸಿಕೊಂಡಿದ್ರು. ಜಗತ್ತನ್ನೇ ಗೆದ್ದ ಖುಷಿ ಅವರ ಮೊಗದಲ್ಲಿ ಕಾಣ್ತಾ ಇತ್ತು. ಸೂರ್ಯನ ಗೆಲುವಿಗೂ ತ್ರಿಷಾ ಕಾರಣವಾದ್ರು. ಮುಂದೆ..? 

ವಿಜಯ್​ಗೆ ಪಾಲಿಟಿಕ್ಸ್​​ ಸಕ್ಸಸ್.. ಸೂರ್ಯ ಸಿನಿಮಾ ಹಿಟ್..! ದಳಪತಿಗೆ ವಿಜಯ​ ದೇವತೆ.. ಸೂರ್ಯ ಪಾಲಿಗೆ ಲಕ್ಕಿ ಗರ್ಲ್..!

ನಟಿ ತ್ರಿಷಾ ಕೃಷ್ಣನ್ (Trisha Krishnan) ಪಾಲಿಗೀಗ ಅದೃಷ್ಟವೋ ಅದೃಷ್ಟ. ದಳಪತಿ ವಿಜಯ್ (Thalapathy Vijay) ಗೆಲುವು ತ್ರಿಷಾ ಕಾಲ್ಗುಣ ಅಂತ ಫ್ಯಾನ್ಸ್ ಕೊಂಡಾಡ್ತಾ ಇದ್ದಾರೆ. ಅದರ ನಡುವೆ ತ್ರಿಷಾ ಸೂರ್ಯ (Suriya) ಜೊತೆಗೆ ನಟಿಸಿರೋ ಕರಪ್ಪು ಸಿನಿಮಾ ಬೇರೆ ಸೂಪರ್ ಡೂಪರ್ ಹಿಟ್ ಆಗಿದೆ. ಈ ನಡುವೆ ಮೇನಲ್ಲಿ ಇನ್ನೊಂದು ಸಕ್ಸಸ್ ಬಾಕಿ ಇದೆ ಅಂದಿದ್ದಾರೆ ತ್ರಿಷಾ. ಏನದು ಮೂರನೇ ಯಶಸ್ಸು..? ಈ ಸ್ಟೋರಿ ನೋಡಿ.

ಯೆಸ್, ಬಹುಶಃ ತ್ರಿಷಾ ಜಾತಕದಲ್ಲೀಗ ರಾಜಯೋಗ ನಡೀತಾ ಇದೆ. ಇತ್ತೀಚಿಗೆ ದಳಪತಿ ವಿಜಯ್ ರಾಜಕೀಯದಲ್ಲಿ ಅಮೋಘ ಜಯ ಸಾಧಿಸಿ, ತಮಿಳುನಾಡು ಸಿಎಂ ಆಗಿರೋದು ಗೊತ್ತೇ ಇದೆ. ವಿಜಯ್ ಗೆಳತಿಗೆ ಈ ಗೆಲುವಿನ ಕ್ರೆಡಿಟ್ ಕೊಟ್ಟಿದ್ದ ಫ್ಯಾನ್ಸ್ ದಳಪತಿ ಪಾಲಿಗೆ ತ್ರಿಷಾ ವಿಜಯ ದೇವತೆ ಅಂದಿದ್ರು.

ಮೇ.4 ರಂದು ಚುನಾವಣಾ ಫಲಿತಾಂಶದ ದಿನವೇ ತ್ರಿಷಾ ಬರ್ತ್​​​ಡೇ ಕೂಡ ಇತ್ತು. ಆವತ್ತು ತಿರುಪತಿಗೆ ಹೋಗಿ ವಿಜಯ್ ಗೆಲುವಿಗೆ ಪ್ರಾರ್ಥಿಸಿದ್ದ ತ್ರಿಷಾ ಚೆನ್ನೈಗೆ ಮರಳುವಷ್ಟರದಲ್ಲಿ ದಳಪತಿ ಗೆದ್ದಾಗಿತ್ತು.

ವಿಜಯ್ ಪ್ರಮಾಣ ವಚನದ ದಿವಸ ತ್ರಿಷಾ ಸೀರೆಯುಟ್ಟು, ಮಲ್ಲಿಗೆ ಮುಡಿದು ಥೇಟ್ ವಿಜಯ್ ಪತ್ನಿಯ ರೀತಿ ಕಾಣಿಸಿಕೊಂಡಿದ್ರು. ಜಗತ್ತನ್ನೇ ಗೆದ್ದ ಖುಷಿ ಅವರ ಮೊಗದಲ್ಲಿ ಕಾಣ್ತಾ ಇತ್ತು.

ಸೂರ್ಯ ತ್ರಿಷಾ ಜೋಡಿಯ ಕರಪ್ಪು ಸೂಪರ್ ಹಿಟ್..! 160ಕೋಟಿ ಗಳಿಸಿದ ಚಿತ್ರ.. ಸೂರ್ಯ ಶಾಪ ವಿಮೋಚನೆ

ಯೆಸ್ ಕಳೆದ ವಾರ ಸೂರ್ಯ ಮತ್ತು ತ್ರಿಷಾ ಜೊತೆಯಾಗಿ ನಟಿಸಿರೋ ಕರಪ್ಪು ಸಿನಿಮಾ ತೆರೆಗೆ ಬಂದಿತ್ತು. ಹಲವು ಅಡೆತಡೆಗಳ ನಡುವೆಯೂ ಕರಪ್ಪು ಸೂಪರ್ ಸಕ್ಸಸ್ ಕಂಡಿದೆ. ಈ ಫ್ಯಾಂಟಸಿ ಆಕ್ಷನ್ ಡ್ರಾಮಾ ಇಲ್ಲಿತನಕ 160 ಕೋಟಿ ಗಳಿಕೆ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಸೂರ್ಯ ಇಂಥದ್ದೊಂದು ಗೆಲುವನ್ನ ಕಂಡೇ ಇರಲಿಲ್ಲ. ಅವರ ನಟನೆಯ ಸಿನಿಮಾಗಳು ಒಂದರ ಬಳಿಕ ಒಂದು ನೆಲಕಚ್ಚಿದ್ವು. ಆದ್ರೆ ಈ ಸಾರಿ ತ್ರಿಷಾ ಜೊತೆಗೆ ನಟಿಸಿದ್ದೇ ನಟಿಸಿದ್ದು ಸೂರ್ಯನ ಶಾಪ ವಿಮೋಚನೆ ಆಗಿಬಿಟ್ಟಿದೆ.

ಸದ್ಯ ಕರಪ್ಪು ಸಕ್ಸಸ್ ಬಗ್ಗೆ ಸೋಷಿಯಲ್ ಮಿಡಿಯಾ ಪೋಸ್ಟ್ ಹಾಕಿರೋ ತ್ರಿಷಾ, ಮೇನಲ್ಲಿ ಎರಡು ಸಕ್ಸಸ್ ಸಿಕ್ಕಿವೆ. ಇನ್ನೊಂದು ಬಾಕಿ ಇದೆ ಅಂತ ಬರೆದುಕೊಂಡಿದ್ದಾರೆ. ಒಂದು ದಳಪತಿ ಪಾಲಿಟಿಕ್ಸ್ ವಿಜಯ. ಇನ್ಜೊಂದು ಸೂರ್ಯನ ಸಿನಿಮಾ ಜಯ. ಬಾಕಿ ಇರೋ ಮೂರನೇ ಸಕ್ಸಸ್ ಯಾವುದು ಅಂತ ಜನ ತಲೆಕೆಡಿಸಿಕೊಂಡಿದ್ದಾರೆ.

ಇದೇ ತಿಂಗಳು ತ್ರಿಷಾ ರಾಜಕೀಯ ಎಂಟ್ರಿ ಫಿಕ್ಸ್..?

ಅಸಲಿಗೆ ದಳಪತಿ ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದು ತಿರುಚ್ಚಿ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಅಲ್ಲಿಂದ ತ್ರಿಷಾನ ಸ್ಪರ್ಧೆಗೆ ಇಳಿಸ್ತಾರೆ ಅನ್ನೋ ಮಾತಿದೆ. ಖುದ್ದು ತ್ರಿಷಾಗೂ ರಾಜಕೀಯ ಆಸಕ್ತಿ ಇರೋದು ಅವರ ಹಿಂದಿನ ಸಂದರ್ಶನಗಳನ್ನ ನೋಡಿದ್ರೆ ಗೊತ್ತಾಗುತ್ತೆ.

ಸೋ, ತ್ರಿಷಾ ಹೇಳಿರುವ ಮೇ ತಿಂಗಳ ಮೂರನೇ ಸಕ್ಸಸ್ ಅದೇ ಇರಬಹುದಾ..? ತ್ರಿಷಾ ರಾಜಕೀಯಕ್ಕೆ ಬರಬಹುದಾ ಅಂತ ಫ್ಯಾನ್ಸ್ ಯೋಚನೆ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಮೇ ತಿಂಗಳಲ್ಲಿ ಇನ್ನಿರೋದೇ ಹತ್ತು ದಿನ. ಸೋ ತ್ರಿಷಾ ಅದೇನು ಸಕ್ಸಸ್ ಕೊಡ್ತಾರೋ ಕಾದುನೋಡೋಣ ಬಿಡಿ..!

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rubina Khan: 'ಗಿಡ್ಡ-ಸಣ್ಣ ಬಟ್ಟೆ ಧರಿಸಿದ್ರೆ ನಮ್ಗೆ ಡಬಲ್ ಪೇಮೆಂಟ್ ಸಿಗ್ತಿತ್ತು; ಬಾಲಿವುಡ್ ಕರಾಳತೆ ಬಿಚ್ಚಿಟ್ಟ ಡಾನ್ಸರ್!
Rakesh Bedi-Shocking: ಅವನು ಅಷ್ಟು ಚೆನ್ನಾಗಿ ಹಾಡಲು ಒಂದೇ ಕಾರಣ, ಏಕೆಂದರೆ ಅವನು ನನ್ನ ಮಗ (ಬಚ್ಚಾ ಹೈ ತೂ ಮೇರಾ)..!