ನಟಿ ಜಾಸ್ಮಿನ್ ಕತ್ತಲೆಯಲ್ಲಿದ್ದಾಳೆ. ಲೆನ್ಸ್ ಆಕೆಯ ಕಾರ್ನಿಯಾವನ್ನು ಹಾನಿಗೊಳಿಸಿದೆ. ತಾತ್ಕಾಲಿಕ ಕುರುಡುತನ ಸಮಸ್ಯೆಯಿಂದ ಬಳಲುತ್ತಿರುವ ಜಾಸ್ಮಿನ್ ಆತ್ಮವಿಶ್ವಾಸ ಮಾತ್ರ ಕಡಿಮೆ ಆಗಿಲ್ಲ. ಅದನ್ನು ವೈರಲ್ ವಿಡಿಯೋದಲ್ಲಿ ನೀವು ನೋಡ್ಬಹುದು.
ಬಹುಭಾಷಾ ನಟಿ ಜಾಸ್ಮಿನ್ ಭಾಸಿನ್ ಕಾರ್ನಿಯಾ ಹಾನಿಯಾಗಿದೆ. ಹಾಗಾಗಿ ನಟಿಗೆ ತಾತ್ಕಾಲಿಕವಾಗಿ ಕಣ್ಣ ಕಾಣ್ತಿಲ್ಲ. ಕಣ್ಣಿನ ಸಮಸ್ಯೆಗೆ ಒಳಗಾದ್ರೂ ನಟಿಯ ಕಾನ್ಫಿಡೆನ್ಸ್ ಕಡಿಮೆ ಆಗಿರಲಿಲ್ಲ. ಸಮಸ್ಯೆ ಮಧ್ಯೆಯೇ ಕಾನ್ಫಿಡೆನ್ಸ್ ನಲ್ಲಿ ಕ್ಯಾಟ್ ವಾಕ್ ಮಾಡಿದ ಜಾಸ್ಮಿನ್ ಭಾಸಿನ್ ವಿಡಿಯೋ ವೈರಲ್ ಆಗಿದೆ.
ದೆಹಲಿ (Delhi) ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಸ್ಮಿನ್ ಭಾಸಿನ್ (Jasmin Bhasin) ಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ರೆ ಕೆಲಸ ಒಪ್ಪಿಕೊಂಡಿದ್ದರಿಂದ ಸ್ಟೇಜ್ ಮೇಲೆ ಬರೋದು ಅನಿವಾರ್ಯವಾಯ್ತು. ಈ ಸಮಯದಲ್ಲಿ ಸನ್ ಗ್ಲಾಸ್ (Sunglasses) ಹಾಕಿಕೊಂಡ ಜಾಸ್ಮಿನ್, ತಂಡದ ಸಹಾಯಪಡೆದು ಸ್ಟೇಜ್ ಹತ್ತಿದ್ರು. ಅಲ್ಲದೆ ಕಾನ್ಫಿಡೆನ್ಸ್ ನಲ್ಲಿ ಕ್ಯಾಟ್ ವಾಕ್ ಮಾಡಿದ್ರು. ಈ ಸಮಯದಲ್ಲಿ ಜಾಸ್ಮಿನ್ ಭಾಸಿನ್ ಗೆ ಕಣ್ಣು ಕಾಣ್ತಿರಲಿಲ್ಲ ಅಂತ ಯಾರೂ ಹೇಳಲು ಸಾಧ್ಯವಿಲ್ಲ. ಯಾಕೆಂದ್ರೆ ಜಾಸ್ಮಿನ್ ಹೆಜ್ಜೆ ತಪ್ಪದೆ ಹೆಜ್ಜೆ ಹಾಕಿದ್ದರು.
ಯಾರೂ ಬದಲಾಗಲ್ಲ... ದುಡ್ಡು ಬಂದಾಗ ಒಳಗಿರೋದು ಹೊರಬರುತ್ತೆ- ನಿತ್ಯಾ ಮೆನನ್ ಓಪನ್ ಮಾತು..
jasminbhasin14 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಾಸ್ಮಿನ್ ಭಾಸಿನ್ ಸಮಸ್ಯೆಯನ್ನು ಹಂಚಿಕೊಳ್ಳಲಾಗಿದೆ. ಅದ್ರಲ್ಲಿ ಕಾರ್ಯಕ್ರಮ ಮುಗಿಯುವವರೆಗೂ ಏನೂ ಕಾಣ್ತಿರಲಿಲ್ಲ. ಆದ್ರೆ ಕಾನ್ಫಿಡೆನ್ಸ್ ನಲ್ಲಿ ವಾಕ್ ಮಾಡಿದ್ರು ಎಂದು ಶೀರ್ಷಿಕೆ ಹಾಕಲಾಗಿದೆ. ಅಲ್ಲದೆ ಏನೆಲ್ಲ ಆಯ್ತು ಎಂಬುದನ್ನು ವಿವರವಾಗಿ ಹೇಳಲಾಗಿದೆ. ವಿಡಿಯೋದಲ್ಲಿ ಜಾಸ್ಮಿನ್, ಸಹಾಯಕಿಯೊಬ್ಬರ ಕೈ ಹಿಡಿದು ನಡೆಯುತ್ತಿದ್ದಾರೆ. ಅವರು ನಟಿಗೆ ಎಲ್ಲಿ ನಿಲ್ಲಬೇಕು, ಎಲ್ಲಿಗೆ ಹೋಗ್ಬೇಕು ಎಂಬ ಸೂಚನೆ ನೀಡ್ತಿರೋದನ್ನು ನೀವು ಕಾಣಬಹುದು.
ಇದು ಜುಲೈ 17 ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮ. ಲೆನ್ಸ್ ಧರಿಸಿದ ನಂತ್ರ ಜಾಸ್ಮಿನ್ ಕಣ್ಣುಗಳು ನೋಯಲು ಶುರುವಾಗಿದ್ದವು. ನೋವು ಹೆಚ್ಚಾಗ್ತಾ ಹೋಯ್ತು. ನೋವು ವಿಪರೀತವಾಗ್ತಿದ್ದಂತೆ ಜಾಸ್ಮಿನ್, ಸನ್ ಗ್ಲಾಸ್ ಧರಿಸಿದ್ರು. ನಿಧಾನವಾಗಿ ಕಣ್ಣು ಊದಿಕೊಳ್ಳಲು ಶುರುವಾಗಿತ್ತು. ಕೆಲಸದ ಕಾರಣ, ವೈದ್ಯರ ಬಳಿ ಹೋಗಲು ಸಾಧ್ಯವಾಗದ ಜಾಸ್ಮಿನ್, ಕಾರ್ಯಕ್ರಮ ಮುಗಿದ ಮೇಲೆ ತಡರಾತ್ರಿ ವೈದ್ಯರನ್ನು ಭೇಟಿಯಾಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಕಾರ್ನಿಯಾ ಹಾನಿಯನ್ನು ಪತ್ತೆಹಚ್ಚಿದ್ರು.
ಸದ್ಯ ಕಣ್ಣಿಗೆ ಬ್ಯಾಂಡೇಜ್ ಹಾಕಲಾಗಿದೆ. ಹಾಗಾಗಿ ಜಾಸ್ಮಿನ್ ಗೆ ಏನೂ ಕಾಣ್ತಿಲ್ಲ. ನೋವಿನಿಂದ ನಿದ್ರಿಸೋದು ಕಷ್ಟವಾಗಿದೆ. ಇದೆಲ್ಲದರ ಹೊರತಾಗಿಯೂ, ಜಾಸ್ಮಿನ್ ಅತ್ಯಂತ ಸಕಾರಾತ್ಮಕ ಮತ್ತು ಆತ್ಮವಿಶ್ವಾಸದಿಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ನಾಲ್ಕೈದು ದಿನಗಳಲ್ಲಿ ಜಾಸ್ಮಿನ್ ಚೇತರಿಸಿಕೊಳ್ತಾರೆಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ.
ಕಾಂಟ್ಯಾಕ್ಟ್ ಲೆನ್ಸ್ ಸೋಂಕಿಗೆ ಕಾರಣ : ಜಾಸ್ಮಿನ್ ಕಾರ್ನಿಯಾ ಗೆ ಹಾನಿಯಾಗಲು ಕಾರಣ ಕಾಂಟ್ಯಾಕ್ಟ್ ಲೆನ್ಸ್. ಇದನ್ನು ಧರಿಸಿದ ನಂತ್ರ ಹಾಗೂ ಧರಿಸುವ ವೇಳೆ ಅನೇಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲೆನ್ಸ್ ಸರಿಯಾಗಿ ಬಳಸದೆ ಹೋದ್ರೆ ಕಣ್ಣು ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಲೆನ್ಸ್ ಗಳನ್ನು ಕವರ್ ನಲ್ಲಿ ಇಡಲಾಗುತ್ತದೆ. ಅದನ್ನು ತೆಗೆಯುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅದನ್ನು ಮತ್ತೆ ಕವರ್ ಗೆ ಹಾಕುವ ಮೊದಲೂ ಕೂಡ ಕೈಗಳನ್ನು ಸ್ವಚ್ಛವಾಗಿತೊಳೆಯಬೇಕು. ಲೆನ್ಸ್ ಹಾಗೂ ಕವರ್ ಕ್ಲೀನಾಗಿರಬೇಕು. ಅದನ್ನು ಸ್ವಚ್ಛಗೊಳಿಸಲು ಲಿಕ್ವಿಡ್ ನೀಡಲಾಗುತ್ತದೆ. ಆ ಲಿಕ್ವಿಡ್ ಓಪನ್ ಮಾಡಿದ ಒಂದು ತಿಂಗಳು ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಆ ನಂತ್ರ ಅದನ್ನು ಬಳಸಿದ್ರೆ ಅದು ಸೋಂಕಿಗೆ ಕಾರಣವಾಗುತ್ತದೆ. ಲೆನ್ಸ್ ಧರಿಸಿದ ನಂತ್ರ ತಲೆ ಸ್ನಾನ ಅಥವಾ ಸ್ನಾನ ಮಾಡಬಾರದು. ಲೆನ್ಸ್ ಧರಿಸಿದ ವೇಳೆ ಕಣ್ಣುಗಳನ್ನು ಕ್ಲೀನ್ ಮಾಡಲು ಟ್ಯಾಪ್ ವಾಟರ್ ಬಳಸಬಾರದು. ಲೆನ್ಸ್ ಧರಿಸಿ ಮಲಗಬೇಡಿ. ಲೆನ್ಸ್ ಧರಿಸಿದ ನಂತ್ರ ಉರಿ, ನೋವು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ.