ನಟ ಶಾರುಖ್​ ಖಾನ್​ ಆಸ್ಪತ್ರೆಯಿಂದ ಡಿಸ್​ಚಾರ್ಜ್​: ಹೀಟ್​ಸ್ಟ್ರೋಕ್​ ಜೊತೆ ತೀವ್ರ ಜ್ವರ- ಪತ್ನಿ ಹೇಳಿದ್ದೇನು?

By Suchethana D  |  First Published May 24, 2024, 10:47 AM IST

ಹೀಟ್​ಸ್ಟ್ರೋಕ್​  ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಶಾರುಖ್​ ಖಾನ್​ ಅವರನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದೆ. ಈ ಕುರಿತು ಪತ್ನಿ ಗೌರಿ ಖಾನ್​ ಹೇಳಿದ್ದೇನು? 
 


ಬಾಲಿವುಡ್​​ ನಟ ಶಾರುಖ್​ ಖಾನ್​ ಅವರನ್ನು ಏಕಾಏಕಿ ಮೊನ್ನೆ ಆಸ್ಪತ್ರೆಗೆ ದಾಖಲು ಮಾಡಿದ್ದು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು.  ಕೆಕೆಆರ್ ಪಂದ್ಯವನ್ನು ವೀಕ್ಷಿಸಲು ಅಹಮದಾಬಾದ್‌ಗೆ ಆಗಮಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಇದ್ದಕ್ಕಿದ್ದಂತೆಯೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುದ್ದಿ ಕಾಳ್ಗಿಚ್ಚಿನಂತೆಯೇ ಹರಡಿ ಅಭಿಮಾನಿಗಳಲ್ಲಿ ಭಾರಿ ಆತಂಕ ಉಂಟಾಗಿತ್ತು. ಹೀಟ್‌ ಸ್ಟ್ರೋಕ್‌ನಿಂದ ದಿಢೀರ್ ಎಂದು ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಹೇಳಲಾಗಿತ್ತು.  ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಅಷ್ಟಾಗುತ್ತಿದ್ದಂತೆಯೇ ದಿಢೀರನೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  

ಇದೀಗ ನಟನನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಶಾರುಖ್​ ಪತ್ನಿ ಗೌರಿ ಖಾನ್​, ಶಾರುಖ್​ ತೀವ್ರ ಜ್ವರದಿಂದ ಬಳಲುತ್ತಿದ್ದರು. ನಂತರ ಬಿಸಿಲಿನ ತಾಪಮಾನದಿಂದ ಹೀಟ್​ಸ್ಟ್ರೋಕ್​ ಕೂಡ ಆಗಿದೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.  ಅಹಮದಾಬಾದ್ ಸೇರಿದಂತೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ತಾಪಮಾನ ಹೆಚ್ಚಾಗಿದೆ. ಗುಜರಾತ್‌ನ ರಾಜಧಾನಿಯಲ್ಲಿ 45 ಡಿಗ್ರಿಗಳಷ್ಟು ತಾಪಮಾನವಿದ್ದು, ಹವಾಮಾನ ಇಲಾಖೆ ನಗರದಲ್ಲಿ ಬಿಸಿಗಾಳಿಯ ರೆಡ್ ಅಲರ್ಟ್ ಘೋಷಿಸಿದೆ.

Tap to resize

Latest Videos

ತಲೆ ಮೇಲೆ ದುಪ್ಪಟ್ಟಾ... ಎಷ್ಟು ಸಂಸ್ಕಾರವಂತೆ ನೋಡಿ ಅರ್ಬಾಜ್​ ಖಾನ್​ ಎಕ್ಸ್​ ಅಂತಿದ್ದಾರೆ ನೆಟ್ಟಿಗರು!

ನಿನ್ನೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದ ನಟಿ  ಜೂಹಿ ಚಾವ್ಲಾ,  ‘ಮೇ 21ರಂದು ಅವರಿಗೆ ಅನಾರೋಗ್ಯ ಕಾಡಿತ್ತು. ಆದಾಗ್ಯೂ ಅವರು ಮ್ಯಾಚ್​​ ವೀಕ್ಷಿಸಿದರು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ಫಿನಾಲೆ ವೀಕ್ಷಿಸಲಿದ್ದಾರೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಮಾಧಾನ ತಂದುಕೊಟ್ಟಿದ್ದರು. ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ನಂತರ, ಶಾರುಖ್ ಖಾನ್ ಅವರನ್ನು ಮಧ್ಯಾಹ್ನ 1 ಗಂಟೆಗೆ ಕೆಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿತ್ತು.  

ಶಾರುಖ್ ಖಾನ್ ಅವರು ಐಪಿಎಲ್​ನಲ್ಲಿ ಕೆಕೆಆರ್​ ತಂಡದ ಸಹ ಮಾಲಿಕತ್ವ ಹೊಂದಿದ್ದಾರೆ. ಕೆಕೆಆರ್ ಈ ಬಾರಿ ಫೈನಲ್ ತಲುಪಿದೆ. ಶಾರುಖ್ ಖಾನ್ ಅವರು ಕುಟುಂಬದವರ ಜೊತೆ ಫೈನಲ್ ನೋಡಲು ಚೆನ್ನೈ ತೆರಳಲಿದ್ದಾರಂತೆ. ಅವರಿಗೆ ಅನಾರೋಗ್ಯ ಆಗಿದೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈಗ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿರೋ ವಿಚಾರ ಕೇಳಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

ಮದ್ವೆ ಯಾವಾಗ ಕೇಳಿದ್ರೆ ಹೀಗೆ ಹೇಳೋದಾ ನಟ ವಿಶಾಲ್​? ಈ ಜನ್ಮದಲ್ಲಿ ಇದು ಸಾಧ್ಯವಿಲ್ಲ ಬಿಡಿ ಎಂದ ಫ್ಯಾನ್ಸ್​!
 

click me!