Actress Dimple Hayathi: ನಾಯಿ ಕೂಗಿದ್ದಕ್ಕೆ ಬಡಪಾಯಿ ಯುವತಿಯ ವಿವಸ್ತ್ರಗೊಳಿಸಿ ಹಲ್ಲೆ, ಖ್ಯಾತ ನಟಿಯ ವಿರುದ್ಧ ಎಫ್‌ಐರ್!

Published : Oct 01, 2025, 11:48 PM IST
Actress Dimple Hayathi  Faces Police Case

ಸಾರಾಂಶ

Actress Dimple Hayathi ನಟಿ ಡಿಂಪಲ್ ಹಯಾತಿ ಮತ್ತು ಅವರ ಪತಿ ಡೇವಿಡ್ ವಿರುದ್ಧ ಅವರ ಮನೆ ಕೆಲಸದಾಕೆ ಪ್ರಿಯಾಂಕಾ ಬೀಬರ್ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ನಾಯಿ ಬೊಗಳಿದ್ದಕ್ಕೆ  ವಿವಸ್ತ್ರಗೊಳಿಸಿದ ಆರೋಪ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶೇಖ್ ಪೇಟಾದ ವೆಸ್ಟ್ ವುಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ನಟಿ ಡಿಂಪಲ್ ಹಯಾತಿ ಮತ್ತು ಅವರ ಪತಿ ಡೇವಿಡ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಒಡಿಶಾದ 22 ವರ್ಷದ ಮನೆ ಕೆಲಸದಾಕೆ ಪ್ರಿಯಾಂಕಾ ಬೀಬರ್ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಡಿಂಪಲ್ ಮತ್ತು ಡೇವಿಡ್ ತನ್ನ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪ್ರಿಯಾಂಕಾ ಗಂಭೀರ ಆರೋಪ ಮಾಡಿದ್ದಾಳೆ.

ನಾಯಿ ಕೂಗಿದ್ದಕ್ಕೆ ವಿವಸ್ತ್ರಗೊಳಿಸಿದ ಆರೋಪ:

ಪ್ರಿಯಾಂಕಾ ಅವರ ದೂರಿನ ಪ್ರಕಾರ, ಮಂಗಳವಾರ ಬೆಳಿಗ್ಗೆ ಡಿಂಪಲ್‌ರ ಮನೆಯಲ್ಲಿ ಸಾಕು ನಾಯಿ ಬೊಗಳಿದ ಕಾರಣಕ್ಕೆ ದಂಪತಿಗಳು ಆಕೆಯನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆ. ಇದರ ಜೊತೆಗೆ, ಆಕೆಯನ್ನು ವಿವಸ್ತ್ರಗೊಳಿಸಿ, ಬೆತ್ತಲೆಯಾಗಿ ನಿಲ್ಲಿಸಿ ಹೊಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ವೀಡಿಯೊ ರೆಕಾರ್ಡ್ ಮಾಡಲು ಪ್ರಯತ್ನಿಸಿದಾಗ, ಡೇವಿಡ್ ಆಕೆಯ ಫೋನ್ ಅನ್ನು ಬಲವಂತವಾಗಿ ಕಿತ್ತು ಕೆಳಗೆ ಎಸೆದಿದ್ದಾರೆ. ಇದಲ್ಲದೆ, ಸಂಬಳ ನೀಡದೆ ಕೆಲಸಕ್ಕೆ ಒತ್ತಾಯಿಸಿದ್ದಾರೆ ಎಂದು ಪ್ರಿಯಾಂಕಾ ದೂರಿನಲ್ಲಿ ತಿಳಿಸಿದ್ದಾಳೆ.

ನಟಿ ಡಿಂಪಲ್ ಹಯಾತಿಯಿಂದ ಅವಮಾನ:

ಡಿಂಪಲ್‌ರ ಸಾಕು ನಾಯಿಗಳ ಆರೈಕೆಗಾಗಿ ಒಡಿಶಾದ ಇಬ್ಬರು ಯುವತಿಯರನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ, ಕೆಲಸಕ್ಕೆ ಸರಿಯಾದ ಸೌಲಭ್ಯಗಳಿಲ್ಲದೆ, ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಯುವತಿಯರು ಆರೋಪಿಸಿದ್ದಾರೆ. 'ನಮ್ಮ ವಕೀಲರು ನಮ್ಮನ್ನು ರಕ್ಷಿಸುತ್ತಾರೆ, ನೀವು ಏನು ಮಾಡೋಕೆ ಸಾಧ್ಯ? ಎಂದು ಡಿಂಪಲ್ ದಂಪತಿಗಳು ಅವಮಾನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾಳೆ. ಈ ಆರೋಪಗಳಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆಗಿದ್ದು, ವಿಷಯ ಭಾರೀ ಚರ್ಚೆಗೆ ಗುರಿಯಾಗಿದೆ.

ಡಿಂಪಲ್‌ರ ಹಿಂದಿನ ವಿವಾದಗಳು:

ಇದಕ್ಕೂ ಮೊದಲು, ಡಿಂಪಲ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್ ವಿಷಯದಲ್ಲಿ ಡಿಸಿಪಿ ರಾಹುಲ್ ಹೆಗ್ಡೆ ಅವರೊಂದಿಗೆ ಜಗಳವಾಡಿದ್ದರು, ಇದು ವಿವಾದಕ್ಕೆ ಕಾರಣವಾಗಿತ್ತು. ಗಲ್ಫ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡಿಂಪಲ್, ಖಿಲಾಡಿ, ಯುರೇಖಾ, ರಾಮಬನಂ ಮತ್ತು ವರುಣ್ ತೇಜ್ ಅವರ ಗದ್ದಲಕೊಂಡ ಗಣೇಶ್ ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸರು ಈಗ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?