
ಕೇರಳದ 26ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ(International Film Festival of Kerala) ಪ್ರಾರಂಭವಾಗಿದೆ. ಅದ್ದೂರಿಯಾಗಿ ಉದ್ಘಾಟನೆಗೊಂಡ ಸಮಾರಂಭಕ್ಕೆ ಖ್ಯಾತ ನಟಿ ಭಾವನಾ(Bhavana) ಸರ್ಪ್ರೈಸ್ ಎಂಟ್ರಿ ಅಚ್ಚರಿ ಮೂಡಿಸಿತ್ತು. ಉದ್ಘಾಟನಾ ಸಮಾರಂಭದ ವೇದಿಕೆ ಮೇಲೆ ಕಾಲಿಡುತ್ತಿದ್ದಂತೆ ಭಾವನಾ ಅವರಿಗೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅದ್ದೂರಿಯಾಗಿ ಸ್ವಾಗತ ಮಾಡಿದರು. ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ನಿರ್ಮಾಪಕ ರಂಜಿತ್ ವೇದಿಕೆಗೆ ಆಹ್ವಾನಿಸಿ ಭಾವನಾ ಅವರನ್ನು ಹೋರಾಟದ ಸಂಕೇತ ಎಂದು ಕರೆದರು.
ಏಳು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏಷ್ಯನ್, ಆಫ್ರಿಕನ್, ಲ್ಯಾಟಿನ್ ಅಮೇರಿಕ ಮತ್ತು ಯುರೋಪ್ ಸೇರಿದಂತೆ ಒಟ್ಟು 180ಕ್ಕೂ ಅಧಿಕ ಚಲನಚಿತ್ರಗಳನ್ನು ಕೇರಳ ರಾಜ್ಯ ರಾಜಧಾನಿಯ 14 ಚಿತ್ರಮಂದಿರಗಳಲ್ಲಿ ಪ್ರದರ್ಶಿಲಾಗುತ್ತದೆ. ಈ ಸಮಾರಂಭದಲ್ಲಿ ಐಸಿಸ್ ದಾಳಿಯಿಂದ ಕಾಲುಗಳನ್ನು ಕಳೆದುಕೊಂಡ ಟರ್ಕಿಶ್ ನಿರ್ದೇಶಕಿ ಲೀಸಾ ಕ್ಯಾಲನ್ ಅವರ ಸಾಧನೆಗೆ ಸ್ಪಿರಿಟ್ ಆಫ್ ಸಿನಿಮಾ ಅವಾರ್ಡ್ ನೀಡಿ ಗೌರವಿಸಲಾಯಿತು.
Assault Case: ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ
ಈ ವೇದಿಕೆಯಲ್ಲಿ ಮಾತನಾಡಿದ ಭಾವನಾ 26ನೇ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿರುವುದು ಸಂತೋಷವಾಗಿದೆ ಎಂದು ಹೇಳಿದ್ದಾರೆ. ಉತ್ತಮ ಸಿನಿಮಾಗಳನ್ನು ನಿರ್ಮಿಸುವವರಿಗೆ ಮತ್ತು ನೋಡುವವರಿಗೆ ಹಾಗೂ ಲಿಸಾ ಅಂತ ಹೋರಾಟಗಾರ್ತಿಗೆ ನಾನು ನನ್ನ ಬೆಸ್ಟ್ ವಿಶಸ್ ಹೇಳುತ್ತೇನೆ ಎಂದು ಹೇಳಿದರು.
ಭಾವನಾ ಎಂಟ್ರಿ ಸಮಾರಂಭದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಭಾವನಾ ಎಂಟ್ರಿ ನಿಜಕ್ಕೂ ರೋಮಾಂಚನಕಾರಿಯಾಯಿತು ಎಂದು ಹೇಳುತ್ತಿದ್ದಾರೆ. ಇನ್ನು ಅನೇಕ ನಟಿಯರು ಕೂಡ ಭಾವನಾ ಅವರಿಗೆ ಸ್ವಾಗತ ಕೋರಿದ್ದಾರೆ. ನಟಿ ಪಾರ್ವತಿ, ಭಾವನಾ ವಿಡಿಯೋವನ್ನು ಶೇರ್ ಮಾಡಿ 'ಭಾವನಾ ಅವರಿಗೆ ಸ್ವಾಗತ. ಇದು ನಿಮ್ಮ ಸ್ಥಳ, ನಿಮ್ಮ ಕತೆ' ಎಂದು ಹೇಳಿದ್ದಾರೆ.
ದೌರ್ಜನ್ಯ, ಹಲ್ಲೆ ಬಗ್ಗೆ ಮೌನ ಮುರಿದ ಭಾವನಾ ಮೆನನ್, ನೋವು ತೋಡಿ ಕೊಂದದ್ಹೀಗೆ!
ನಟಿ ಭಾವನಾ ಮಲಯಾಳಂ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ 5 ವರ್ಷಗಳ ಬಳಿಕ ಭಾವನಾ ಮತ್ತೆ ಮಲಯಾಳಂ ಸಿನಿಮಾರಂಗಕ್ಕೆ ಮರಳುತ್ತಿದ್ದಾರೆ. ಸ್ಲೈಸ್ ಆಫ್ ಲೈಫ್ ಸಿನಿಮಾ ಮೂಲಕ ಭಾವನಾ ಮತ್ತೆ ಮಲಯಾಳಂನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಮದುವೆ ಬಳಿಕ ಕನ್ನಡ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಭಾವನಾ ಕೊನೆಯದಾಗಿ ಭಜರಂಗಿ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಇತ್ತೀಚಿಗಷ್ಟೆ ಭಾವನಾ ತಾನು ಅನುಭವಿಸಿದ ನೋವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಐದು ವರ್ಷಗಳಲ್ಲಿ ನನ್ನ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ನಾನು ಯಾವುದೇ ಅಪರಾಧ ಮಾಡಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗಲು ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.