Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?

Published : Apr 21, 2023, 07:16 PM IST
Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?

ಸಾರಾಂಶ

ನಟ ಪ್ರಭಾಸ್​ ಮಾಜಿ ಗರ್ಲ್​ಫ್ರೆಂಡ್​ ಅನುಷ್ಕಾ ಶೆಟ್ಟಿ ಅವರು ಗುಟ್ಟಾಗಿ ಮದುವೆಯಾದ್ರಾ? ಮೊದಲ ಬಾರಿಗೆ ಮೌನ ಮುರಿದ ನಟಿ ಹೇಳಿದ್ದೇನು?   

ತಾರೆಯರು ಎಂದರೆ ಅವರು ಯಾರ ಜೊತೆ ಡೇಟಿಂಗ್​ (Dating) ಮಾಡುತ್ತಾರೆ, ಯಾರ ಜೊತೆ ಸಂಬಂಧ ಇರಿಸಿಕೊಂಡಿದ್ದಾರೆ ಇತ್ಯಾದಿ ಗಾಸಿಪ್​ಗಳು ಮಾಮೂಲು. ಅಂತೆಯೇ ಸೌತ್​ ಇಂಡಸ್ಟ್ರಿಯಲ್ಲಿ ಸಕತ್​ ಫೇಮಸ್​ ಆಗಿರೋ ನಟಿ ಅನುಷ್ಕಾ ಶೆಟ್ಟಿ ಸುತ್ತಲೂ ಮೊದಲಿನಿಂದಲೂ ಹಲವಾರು ಗಾಸಿಪ್​ಗಳು ನಡೆಯುತ್ತಲೇ ಇವೆ. ತಮ್ಮ ಮದುವೆ ವಿಚಾರಕ್ಕೆ ಹತ್ತಾರು ಬಾರಿ ನಟಿ ಅನುಷ್ಕಾ ಹೆಡ್ ಲೈನ್ ಆಗಿದ್ದಾರೆ. ಅವರ ಜೊತೆ ಮದುವೆ ಅಂತೆ, ಇವರ ಜೊತೆ ಮದುವೆ ಅಂತೆ ಡೇಟಿಂಗ್‌ನಲ್ಲಿ ಇದ್ದಾರಂತೆ, ಹೀಗೆ ಹತ್ತಾರು ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಕೆಲ ತಿಂಗಳ ಹಿಂದೆಯೂ ಇದೇ ರೀತಿ ಬಹಳ ಸುದ್ದಿಯಾಗಿತ್ತು. ಆದರೆ  ಈ ಬಾರಿ ಗಾಸಿಪ್ ಅಲ್ಲ, ಇದು ನಿಜ ಎನ್ನಲಾಗಿತ್ತು.   ಪ್ರಭಾಸ್ ಜೊತೆಗೆ ಅನುಷ್ಕಾ ಶೆಟ್ಟಿ ಹೆಸರು ಸದಾ ಕೇಳಿಬರುತ್ತಿತ್ತು. ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಜೋಡಿ ಹಿಟ್ ಜೋಡಿ ಎನಿಸಿಕೊಂಡಿತ್ತು. ಅಲ್ಲಿಂದಲೇ ಇವರ ಮದುವೆ ಗಾಸಿಪ್ ಹಬ್ಬಿತ್ತು.  ಇನ್ನು ಬಾಹುಬಲಿ ಸಿನಿಮಾದ ನಂತರ ಇವರಿಬ್ಬರು ಮದುವೆ ಆಗಿ ಬಿಡುತ್ತಾರೆ ಎನ್ನುವ ಬಗ್ಗೆ ಹಲವು ಬಾರಿ ಸುದ್ದಿಗಳು ಹರಿದಾಡಿತ್ತು. ಆದರೆ ಅದಾದ ಬಳಿಕ ನಟಿ ಸಿನಿಮಾರಂಗದವರನ್ನ ಮದುವೆಯಾಗುತ್ತಿಲ್ಲ. ಬದಲಿಗೆ ಉದ್ಯಮಿಯ ಹಿಡಿಯುತ್ತಿದ್ದಾರೆ ಎಂದು ಸುದ್ದಿಯಾಯಿತು. ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರಂತೆ. ಹುಡುಗ ಬೆಂಗಳೂರು ಮೂಲದ ಉದ್ಯಮಿಯಾಗಿದ್ದು ಮನೆಯವರೇ ನೋಡಿ ಮದುವೆ ನಿಶ್ಚಯ (Marriage fix) ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.  

ಇವೆಲ್ಲ ತಣ್ಣಗಾಗಿದ್ದರೂ ಮತ್ತೆ ಅನುಷ್ಕಾ ಮದುವೆ ಸದ್ದು ಮಾಡುತ್ತಿದೆ. ಇದಾಗಲೇ ಅನೇಕ ನಟರು ಮತ್ತು ನಿರ್ದೇಶಕರ ಜೊತೆ ಅನುಷ್ಕಾ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿರೋ ಬೆನ್ನಲ್ಲೇ ಮತ್ತೆ ನಟ ಪ್ರಭಾಸ್​ (Prabhas) ಜೊತೆ ಮತ್ತೆ ಹೆಸರು ಕೇಳಿಬಂದಿದೆ.  ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ  ಸುದ್ದಿ ಬಹಳ ಹಿಂದಿನದ್ದಾದರೂ, ಉದ್ಯಮಿಯ ಜೊತೆಗಿನ ಮದುವೆಯ ಸುದ್ದಿ ಬಳಿಕ ಪ್ರಭಾಸ್​ ವಿಷಯ ತಣ್ಣಗಾಗಿತ್ತು. ಏಕೆಂದರೆ, ಅನುಷ್ಕಾ -ಪ್ರಭಾಸ್​  ಜೋಡಿ ಕಳೆದ ವರ್ಷ ಬೇರ್ಪಟ್ಟಿದ್ದರು ಎನ್ನಲಾಗಿತ್ತು, ಆದರೆ ಮತ್ತೆ ಈ ಜೋಡಿ (Couple) ಒಂದಾಗಿದ್ದು  ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್​ ಖಾನ್​!

ಇದಾಗಲೇ ಬಾಲಿವುಡ್​ ಸೇರಿದಂತೆ ಚಿತ್ರರಂಗದ ಹಲವು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಸಿನಿ ಇಂಡಸ್ಟ್ರಿಯಲ್ಲಿ ಗಟ್ಟಿಮೇಳ ಜೋರಾಗಿದೆ.ಆದ್ದರಿಂದ 41 ವಯಸ್ಸಿನ ಅನುಷ್ಕಾ ಮದುವೆ ಮಾತ್ರ ಆಗಲೇಇಲ್ಲ ಎನ್ನುವ ನೋವು ಫ್ಯಾನ್ಸ್​ಗಳದ್ದು, ಇದೇ  ಕಾರಣಕ್ಕೆ ಇವರ ಹೆಸರು ಆಗಾಗ್ಗೆ ಅಲ್ಲಲ್ಲಿ ಥಳಕು ಹಾಕಿಕೊಳ್ಳುತ್ತದೆ. ಆದರೆ ಇದೀಗ ಖುದ್ದು ನಟಿಯೇ ಸಂದರ್ಶನದಲ್ಲಿ, ಮದುವೆಯ ಬಗ್ಗೆ ಮಾತನಾಡಿದ್ದಾರೆ.  ಅಷ್ಟಕ್ಕೂ ಈಗ ಖುದ್ದು ನಟಿಯೇ ಬಾಯಿ ಬಿಡುತ್ತಿರಲು ಕಾರಣ ಏನೆಂದರೆ, ಈಕೆ ಗುಟ್ಟಾಗಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಹರಡಿದೆ. ಕೆಲವೊಬ್ಬರು ಇದಾಗಲೇ ಈಕೆಯ ಮದುವೆ ಆಗಿದೆ ಎನ್ನುತ್ತಿದ್ದಾರೆ.

ಈ ಗುಸುಗುಸು ಮಾತಿನಿಂದ ಬೇಸತ್ತಿರೋ ನಟಿ, ಮೌನ ಮುರಿದಿದ್ದಾರೆ.  ಇಂತಹ ಸುದ್ದಿಗಳನ್ನು ಓದಿದಾಗ ನನಗೆ ನಗು ಬರುತ್ತದೆ. ಇಂತಹ ವದಂತಿಗಳು ನನಗೆ ತಮಾಷೆಯಾಗಿವೆ. ಜೊತೆಗೆ ಇಂತಹ ಸುದ್ದಿ ಓದುವುದನ್ನು ಕೂಡ  ಎಂಜಾಯ್​ ಮಾಡುತ್ತೇನೆ ಎಂದಿದ್ದಾರೆ.  ಮೊದಮೊದಲು  ಇಂತಹ ವದಂತಿಗಳಿಂದ ನನಗೆ ಕಿರಿಕಿರಿ ಉಂಟಾಗಿತ್ತು. ಆದರೆ ಈಗ ಮಾಮೂಲಾಗಿ ಹೋಗಿದೆ. ನಾನು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಸದ್ಯ  ಮನೆಯವರ ಜೊತೆ ಕಾಲ ಕಳೆಯುತ್ತಿದ್ದೇನೆ.  ಪೋಷಕರ ಸಲಹೆ ಪಡೆದು ಅವರು ತೋರಿಸಿದ ಹಾದಿಯಲ್ಲಿ ನಡೆಯುತ್ತೇನೆ ಎಂದಿದ್ದಾರೆ. ಬಾಲ್ಯದಿಂದಲೂ (Childhood) ನನಗೆ ಅನೇಕ ಕನಸುಗಳಿತ್ತು. ಇದೀಗ ನಾನು ಹೆಚ್ಚಾಗಿ ಸಂತೋಷವಾಗಿರಲು ಬಯಸುತ್ತೇವೆ ಎಂದು ಅನುಷ್ಕಾ ಹೇಳಿದ್ದಾರೆ.  

Soundarya Death Anniversary: ಬಾಡಿ ಇತ್ತು, ರುಂಡವೇ ಇರಲಿಲ್ಲ... ಆ ದಿನ ನೆನೆದು ನಟಿ ಪ್ರೇಮಾ ಕಣ್ಣೀರು
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?