ನನ್ನ ಕೆರಿಯರ್‌ನಲ್ಲೇ ಅದು ಕೆಟ್ಟ ಸಿನಿಮಾ... ಬಾಲಯ್ಯ, ಮಹೇಶ್ ಬಾಬುಗೆ ಶಾಕ್ ಕೊಟ್ಟ ಅನುಷ್ಕಾ ಶೆಟ್ಟಿ

By Mahmad Rafik  |  First Published Jul 10, 2024, 11:58 AM IST

Anushka Shetty Interview Clip: ಸಂದರ್ಶನದಲ್ಲಿ ತಮ್ಮ ಸಿನಿ ಕೆರಿಯರ್‌ನ ಅತ್ಯಂತ ಕೆಟ್ಟ ಸಿನಿಮಾ ಯಾವುದು ಮತ್ತು ಯಾಕೆ ಎಂಬುದನ್ನು ಹೇಳಿದ್ದಾರೆ. ಇದೇ ಸಂದರ್ಶನದಲ್ಲಿ ತಾವು ಯಾರ ಜೊತೆ ಕಂಫರ್ಟ್ ಎಂಬುದನ್ನು ಹೇಳಿದ್ದಾರೆ.


ಹೈದರಬಾದ್: ಟಾಲಿವುಡ್ ಅಂಗಳದ ಸ್ವೀಟಿ ಅನುಷ್ಕಾ ಶೆಟ್ಟಿ ಸಂದರ್ಶನದಲ್ಲಿ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಅರುಂಧತಿ, ಬಾಹುಬಲಿ, ರುದ್ರಮ್ಮಾದೇವಿ, ಮಿರ್ಚಿ, ಲಿಂಗಾ, ನಿಶ್ಯಬ್ದಂ ಭಾಗಮತೀ ಅಂತ ಸೂಪರ್ ಹಿಟ್ ಸಿನಿಮಾ ನೋಡಿರುವ ಅನುಷ್ಕಾ ಶೆಟ್ಟಿ ಕೊನೆಯ ಬಾರಿ ಪೋಲಿಶೆಟ್ಟಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವೂ ಅನುಷ್ಕಾ ಶೆಟ್ಟಿಯವರ ಕೈ ಹಿಡಿದಿರಲಿಲ್ಲ. ಅನುಷ್ಕಾ ಶೆಟ್ಟಿ ಹೋಮ್‌ಲಿ, ಗ್ಲಾಮರ್ ಪಾತ್ರಗಳಿಗೆ ಒಪ್ಪುವ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಸಂದರ್ಶನದಲ್ಲಿ ತಮ್ಮ ಸಿನಿ ಕೆರಿಯರ್‌ನ ಅತ್ಯಂತ ಕೆಟ್ಟ ಸಿನಿಮಾ ಯಾವುದು ಮತ್ತು ಯಾಕೆ ಎಂಬುದನ್ನು ಹೇಳಿದ್ದಾರೆ. ಇದೇ ಸಂದರ್ಶನದಲ್ಲಿ ತಾವು ಯಾರ ಜೊತೆ ಕಂಫರ್ಟ್ ಎಂಬುದನ್ನು ಹೇಳಿದ್ದಾರೆ.

ಮಹಿಳಾ ಪ್ರಧಾನ ಚಿತ್ರಗಳ ಮೂಲಕವೇ ಸ್ಟಾರ್ ಹೀರೋಗಳಿಗೆ ನಡುಕ ಹುಟ್ಟಿಸಿದ ನಟಿ ಅನುಷ್ಕಾ ಶೆಟ್ಟಿ. ಬಾಹುಬಲಿ ಚಿತ್ರದ ಬಳಿಕ ಕಥೆಗಳ ಆಯ್ಕೆಯಲ್ಲಿ ತುಂಬಾ ನಿಧಾನ ಮಾಡುತ್ತಿದ್ದಾರೆ. ಆದ್ರೂ ಅನುಷ್ಕಾ ಶೆಟ್ಟಿ ಫ್ಯಾನ್ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದೆಲ್ಲದರ ನಡುವೆ ತೂಕ ಹೆಚ್ಚಾಗಿರುವ ಕಾರಣ ಸಿನಿಮಾ ಆಫರ್ ಕಡಿಮೆಯಾಗಿವೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. 

Tap to resize

Latest Videos

ಯೋಗವೇ ನನ್ನ ಆರೋಗ್ಯದ ಗುಟ್ಟು

ಈ ಹಿಂದೆ ಅನುಷ್ಕಾ ಶೆಟ್ಟಿ ನೀಡಿದ ಹೇಳಿಕೆಗಳು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿವೆ. ವೈರಲ್ ಆಗಿರುವ ಸಂದರ್ಶನದ ಕೆಲ ಹೇಳಿಕೆಗಳು ಇಲ್ಲಿವೆ. ಯೋಗ ಗೊತ್ತಿಲ್ಲರದಿದ್ದರೆ ನಿಮ್ಮ ಜೀವನ ಹೇಗಿರುತ್ತಿತ್ತು ಎಂದು ಪ್ರಶ್ನೆ ಕೇಳಲಾಗುತ್ತದೆ. ಯೋಗವಿಲ್ಲದೇ ನನ್ನ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಯೋಗ ಇಲ್ಲದಿದ್ದರೆ ನನ್ನ ವೃತ್ತಿಜೀವನವೂ ಇಷ್ಟು ಸುಂದರವಾಗಿರುತ್ತಿರಲಿಲ್ಲ ಎಂದು ಹೇಳಿದ್ದರು.

ಡಾರ್ಲಿಂಗ್ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಪಕ್ಕಾ ಉತ್ತರ!

ರವಿತೇಜಾ, ಗೋಪಿಚಂದ್ ಮತ್ತು ಮಹೇಶ್ ಬಾಬು  ಈ ಮೂವರಲ್ಲಿ ನೀವು ಯಾರ ಜೊತೆ ಹೆಚ್ಚು ಕಂಫರ್ಟ್ ಫೀಲ್ ಮಾಡ್ತೀರಿ ಎಂದು ಕೇಳಿದಾಗ ಒಂದು ಕ್ಷಣವೂ ಯೋಚನೆ ಮಾಡದೇ ರವಿತೇಜಾರ ಹೆಸರು ಹೇಳುತ್ತಾರೆ. ಯಾವುದೇ ಹಿಂಜರಿಕೆ ಇಲ್ಲದೇ ಮಹೇಶ್ ಬಾಬು ಮತ್ತು ಗೋಪಿಚಂದ್ ಅವರನ್ನು ಪಕ್ಕಕ್ಕೆ ಸರಿಸುತ್ತಾರೆ. ವಿಕ್ರಮಾರುಡು, ಬಲದೂರು ಸಿನಿಮಾಗಳಲ್ಲಿ ಅನುಷ್ಕಾ ಮತ್ತು ರವಿತೇಜ ಜೊತೆಯಾಗಿ ನಟಿಸಿದ್ದಾರೆ.

ಬಾಲಯ್ಯ ಜೊತೆಗಿನ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ!

ನೀವು ನಟನೆ ಮಾಡಿದ ಇಷ್ಟವಾದ ಮತ್ತು ಕೆಟ್ಟವಾದ ಸಿನಿಮಾ ಯಾವುದು ಎಂದು ಕೇಳಲಾಗುತ್ತದೆ. ವೇದಂ ಮತ್ತು ಅರುಂಧತಿ ನನ್ನಿಷ್ಟದ ಸಿನಿಮಾಗಳು, ಆ ಎರಡೂ ಚಿತ್ರಗಳನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ ಎಂದಿದ್ದರು. ಕೆಟ್ಟ ಸಿನಿಮಾ ಅಂತ ಕೇಳಿದಾಗ 'ಒಕ್ಕಮಗಡು' ಅಂತ ಹೇಳಿದ್ದರು. ವೈವಿಎಸ್ ಚೌಧರಿ ಮತ್ತು ಬಾಲಕೃಷ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಸಿನಿಮಾ ದೊಡ್ಡ ಡಿಸಾಸ್ಟರ್ ಆಯಿತು.  

ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ, ಶುರುವಾದ್ರೆ ನಿಲ್ಲೋದೇ ಇಲ್ವಂತೆ!

ಒಂದೇ ಸಮಯದಲ್ಲಿ ಎನ್‌ಟಿಆರ್ ಮತ್ತು ರಾಮಚರಣ್ ಜೊತೆ ನಟಿಸುವ ಆಯ್ಕೆ ಬಂದಾಗ ಯಾರ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಲಾಗಿತ್ತು. ಸ್ವಲ್ಪ ಯೋಚಿಸಿ ಎನ್‌ಟಿಆರ್ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.

click me!