
ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಜನಪ್ರಿಯರಾಗಿರುವ ನಟಿ ಜೆನಿಲಿಯಾ-ರಿತೇಶ್ ದಂಪತಿ ಸಿನಿಮಾ ಕ್ಷೇತ್ರದಲ್ಲಷ್ಟೇ ಅಲ್ಲವೂ ಹಲವು ಸಮಾಜಮುಖಿ ಕೆಲಸದಲ್ಲೂ ಸುದ್ದಿಯಾಗಿದ್ದಾರೆ. ತಮ್ಮ ಸಾವಿನ ಬಳಿಕ ಅಂಗಾಂಗ ದಾನ ಮಾಡುವುದಾಗಿ ಘೋಷಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೌದು ರಿತೇಶ್-ಜೆನಿಲಿಯಾ ಜೋಡಿ ಯಾರಿಗೆ ಇಷ್ಟವಿಲ್ಲ? ಅವರು ತುಂಟಾಟ ಪರಸ್ಪರ ಪ್ರೀತಿ, ಜಗಳ.. ಅಬ್ಬಬ್ಬ ಲವರ್ಸ್ ಅಂದ್ರೆ ಹೀಗಿರಬೇಕು ಎನ್ನುವಂತಿದ್ದಾರೆ ದಂಪತಿ. ರಿತೇಶ್-ಜೆನಿಲಿಯಾ ಬಾಲಿವುಡ್‌ನ ಐಡಿಯಲ್ ಕಪಲ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯಾಗಿ ದಂಪತಿಗಳಿಗೆ ಇಬ್ಬರು ಮುದ್ದಾದ ಗಂಡುಮಕ್ಕಳಿದ್ದರೂ ಲವ್ ಬರ್ಡ್ಸ್‌ನಂತೆ ಬದುಕುತ್ತಿದ್ದಾರೆ. ಇಂತಹ ಜೋಡಿ ಮರಣನಂತರ ಅಂಗಾಂಗ ದಾನಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಯೆಲ್ಲೋ ಸೀರೆಯ ಶಿಲಾಬಾಲಿಕೆಯೇ ಅನುಪಮಾ ಗೌಡ: ಜ್ಯೂನಿಯರ್ ಜೆನಿಲಿಯಾ ಎಂದ ಫ್ಯಾನ್ಸ್
ಈ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಗ ಕಸಿ ಸಂಸ್ಥೆ ಟ್ವಿಟ್ಟರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ದಂಪತಿಗಳ ಉದಾತ್ತ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ರಿತೇಶ್-ಜೆನಿಲಿಯಾ ಜೋಡಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದು, ಅದರಲ್ಲಿ ಅವರು ತಮ್ಮ ಅಂಗಾಂಗ ದಾನ ಮಾಡುವ ಪ್ರತಿಜ್ಞೆಗೆ ಬಗ್ಗೆ ಮಾತನಾಡಿದ್ದಾರೆ. ಈ ನಿರ್ಧಾರಕ್ಕೆ ಬಹಳ ಹಿಂದಿನಿಂದ ಯೋಚಿಸಿದ್ದೆವು, ಯಾರಿಗಾದರೂ ಕೊಡುವುದಿದ್ದರೆ ದೊಡ್ಡ ಗಿಫ್ಟ್ ಇಲ್ಲ ಎಂದಿದ್ದಾರೆ.
ಜೆನಿಲಿಯಾ ಮತ್ತು ನಾನು ಮರಣ ನಂತರ ನಮ್ಮ ಅಂಗಾಂಗಗಳನ್ನು ದಾನ ಮಾಡಲು ವಾಗ್ದಾನ ಮಾಡಿದ್ದೇವೆ. ನಿಮ್ಮೆಲ್ಲರನ್ನೂ ಈ ಮಹಾನ್ ಉದ್ದೇಶಕ್ಕೆ ಸೇರಲು ಮತ್ತು 'the life after life' ನ ಭಾಗವಾಗುವಂತೆ ನಾವು ಒತ್ತಾಯಿಸುತ್ತೇವೆ" ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.