ನಟಿ ಊರ್ವಶಿ ರೌಟೇಲಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಊರ್ವಶಿ ರೌಟೇಲಾ ಗಾಯಗೊಂಡು ಪರಿಣಾಮ ಆಸ್ಪತ್ರೆ ದಾಖಲಿಸಲಾಗಿದೆ.
ಹೈದರಾಬಾದ್(ಜು.9) ನಟಿ ಊರ್ವಶಿ ರೌಟೇಲಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ನಟಿ ಊರ್ವಶಿ ಮೂಳೆಗಳು ಮುರಿದಿದೆ. ಗಂಭೀರ ಗಾಯಗೊಂಡ ಪರಿಣಾಮ ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಆ್ಯಕ್ಷನ್ ಸೀನ್‌ನಲ್ಲಿ ಊರ್ವಶಿ ರೌಟೇಲಾ ಅಭಿನಯಿಸುತ್ತಿದ್ದ ವೇಳೆ ಘಟನೆ ನಡೆದಿದೆ.
ನಂದಮೂರಿ ಬಾಲಕೃಷ್ಣ ಅವರ NBK 109 ತೆಲುಗು ಚಿತ್ರದಲ್ಲಿ ಊರ್ವಶಿ ರೌಟೇಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಚಿತ್ರದಲ್ಲಿ ಬಾಬಿ ಡಿಯೋಲ್ ಕೂಡ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಮೂರನೇ ಹಂತದ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಹೈದರಾಬಾದ್‌ಗೆ ಆಗಮಿಸಿದ ಊರ್ವಶಿ ರೌಟೇಲಾ ಕೆಲ ಆ್ಯಕ್ಷನ್ ಸೀನ್‌ಗಳಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ.
ರಿಷಬ್ ಪಂತ್ ಟಾರ್ಗೆಟ್ ಮಾಡಿದ್ರಾ ಊರ್ವಶಿ ರೌಟೇಲಾ? ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ!
ಘಟನೆ ಕುರಿತು ನಟಿ ಊರ್ವಶಿ ಸಿಬ್ಬಂದಿ ತಂಡ ಮಾಹಿತಿ ನೀಡಿದೆ. ನಟಿ ಊರ್ವಶಿ ರೌಟೇಲಾ ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ನಟಿಯ ಮೂಳೆಗಳು ಮುರಿತಕ್ಕೊಳಗಾಗಿದೆ. ತಕ್ಷಣವೇ ನಟಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇಲ್ಲಿ ನಟಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಆ್ಯಕ್ಷನ್ ದೃಶ್ಯದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಸಾಹಸಮಯ ರೀತಿಯಲ್ಲಿ ಊರ್ವಶಿ ಆ್ಯಕ್ಷನ್ ಸೀನ್ ನಿಭಾಯಿಸಿದ್ದರು. ಆದರೆ ಆಯ ತಪ್ಪಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ನಟಿ ಸಿಬ್ಬಂದಿ ತಂಡ ಮಾಹಿತಿ ನೀಡಿದೆ.
NBK 109 ಚಿತ್ರ ಕಳೆದ ವರ್ಷ ನವೆಂಬರ್‌ನಲ್ಲಿ ಸೆಟ್ಟೇರಿದೆ. ಹಂತ ಹಂತಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ಇದೀಗ 3ನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಭಾರಿ ಬಜೆಟ್ ಚಿತ್ರದಲ್ಲಿ ಹಲವು ಸ್ಟಾರ್ ನಟ ನಟಿಯರು ಕಾಣಿಸಿಕೊಂಡಿದ್ದಾರೆ.ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಜೆಎನ್‌ಯು ಚಿತ್ರದ ಬಳಿಕ ಊರ್ವಶಿ ರೌಟೇಲಾ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ NBK 109 ಬಿಗ್ ಬಜೆಟ್ ಸಿನಿಮಾ ಆಗಿದೆ.
30 ವರ್ಷದ ನಟಿ ಊರ್ವಶಿ ರೌಟೇಲಾ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಸನ್ನಿ ಡಿಯೋಲ್ ಜೊತೆಗೆ ಅಭಿನಯಿಸಿದ ರೌಟೇಲಾ ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಐರಾವತ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ದಿಲ್ ಹೇ ಗ್ರೆ, ತಮಿಳಿನಲ್ಲಿ ತಿರ್ತು ಪಾಯಲೇ, ತೆಲುಗಿನಲ್ಲಿ ಬ್ಲಾಕ್ ರೋಸ್ ಸೇರಿದಂತೆ ಹಲವು ಚಿತ್ರಗಳನ್ನು ಒಪ್ಪಿಕೊಂಡು ಶೂಟಿಂಗ್ ಆರಂಭಿಸಿದ್ದಾರೆ.
ಅಬ್ಬರೆ! ಆಲಿಯಾ ಭಟ್ ಮೆಟ್ ಗಾಲಾ ಸೀರೆಗಿಂತ 7 ಪಟ್ಟು ಹೆಚ್ಚು ಬೆಲೆಯ ಡ್ರೆಸ್ ಧರಿಸಿದ ಊರ್ವಶಿ ರಾಟೇಲಾ!