ಅಯ್ಯೋ ನೋಡೋಕಾಗ್ತಿಲ್ಲ, ಕೆಜಿಗಟ್ಟಲೆ ಮೇಕಪ್ಪಾ, ಸರ್ಜರಿನಾ; ಆಮಿ ಜಾಕ್ಸನ್ ಸಖತ್‌ ಟ್ರೋಲ್‌!

Published : Sep 23, 2023, 09:21 AM ISTUpdated : Sep 23, 2023, 09:47 AM IST
ಅಯ್ಯೋ ನೋಡೋಕಾಗ್ತಿಲ್ಲ, ಕೆಜಿಗಟ್ಟಲೆ ಮೇಕಪ್ಪಾ, ಸರ್ಜರಿನಾ; ಆಮಿ ಜಾಕ್ಸನ್ ಸಖತ್‌ ಟ್ರೋಲ್‌!

ಸಾರಾಂಶ

ಬ್ರಿಟನ್ ಮೂಲದ ಬಾಲಿವುಡ್ ನಟಿ ಆಮಿ ಜಾಕ್ಸನ್. ಬಾಲಿವುಡ್‌ನಿಂದ ತೊಡಗಿ ಸೌತ್‌ನ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಆಮಿ, ಬಹಳ ದಿನಗಳಿಂದ ಚಿತ್ರರಂಗದಿಂದ ದೂರವಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ಹೊಸ ಲುಕ್‌ನಿಂದಾಗಿ ಸಖತ್ ಟ್ರೋಲ್ ಆಗುತ್ತಿದ್ದಾರೆ.

ಮುಂಬೈ: ಬಾಲಿವುಡ್‌, ಬ್ಯೂಟಿಗೆ ತುಂಬಾ ಇಂಪಾರ್ಟೆನ್ಸ್ ಕೊಡೋ ಚಿತ್ರರಂಗ. ಝೀರೋ ಫಿಗರ್‌, ಸ್ಲಿಮ್ ಬ್ಯೂಟಿ ಕಾನ್ಸೆಪ್ಟ್ ಇಲ್ಲಿ ಹೆಚ್ಚು ಫೇಮಸ್‌. ಪರ್ಫೆಕ್ಟ್‌ ಆಗಿ ಕಾಣೋಕೆ ಇಲ್ಲಿಬ ನಟ-ನಟಿಯರು ಮೂಗು, ತುಟಿ, ಕೆನ್ನೆ, ಎದೆ ಅಂತ ಆಗಾಗ ಸರ್ಜರಿ ಮಾಡಿಕೊಳ್ತಾನೆ ಇರ್ತಾರೆ. ಕೆಲವೊಮ್ಮೆ ಇದು ಚಿತ್ರ-ವಿಚಿತ್ರವಾಗಿ ಟ್ರೋಲ್ ಆಗುವುದೂ ಇದೆ. ಹಾಗೆಯೇ ಸದ್ಯ ಬಾಲಿವುಡ್‌ನ ನಟಿಯೊಬ್ಬರು ಕೆಟ್ಟದಾಗಿ ಟ್ರೋಲ್ ಆಗುತ್ತಿದ್ದಾರೆ. ಅವರು ಮತ್ಯಾರು ಅಲ್ಲ. ಬ್ರಿಟನ್ ಮೂಲದ ಬಾಲಿವುಡ್ ನಟಿ ಆಮಿ ಜಾಕ್ಸನ್. ಬಾಲಿವುಡ್‌ನಿಂದ ತೊಡಗಿ ಸೌತ್‌ನ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಆಮಿ, ಬಹಳ ದಿನಗಳಿಂದ ಚಿತ್ರರಂಗದಿಂದ ದೂರವಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ಕನ್ನಡದಲ್ಲಿ ಸುದೀಪ್‌ ಅಭಿನಯದ ವಿಲನ್ ಚಿತ್ರದಲ್ಲೂ ಆಮಿ ಜಾಕ್ಸನ್ ನಟಿಸಿದ್ದರು. ತಮಿಳು ಚಿತ್ರ ರಜನೀಕಾಂತ್ ಅಭಿನಯದ 2.0ದಲ್ಲೂ ಕಾಣಿಸಿಕೊಂಡಿದ್ದರು. ಆ ನಂತರ ತೆರೆಮರೆಗೆ ಸರಿದಿದ್ದ ಆಮಿ ಜಾಕ್ಸನ್‌ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಕ್ರಿಯವಾಗಿದ್ದರು. ಇನ್‌ಸ್ಟಾಗ್ರಾಂ, ಎಕ್ಸ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಆಕೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ಪೋಟೋವೊಂದು ನೆಟ್ಟಿಗರಲ್ಲಿ ಗಾಬರಿ ಮೂಡಿಸುತ್ತಿದೆ. 

ಕೆಜಿಗಟ್ಟಲೆ ಮೇಕಪ್​, ಮೂಗಿಗೆ ಸರ್ಜರಿ- ಊರ ಮಂದಿಗೆ ಸಹಜ ಸೌಂದರ್ಯದ ಪಾಠ: ಶಾರುಖ್​ ಪುತ್ರಿ ಟ್ರೋಲ್​!

ಆಮಿ ಜಾಕ್ಸನ್‌ ನ್ಯೂ ಲುಕ್‌ನಿಂದ ಸಖತ್‌ ಟ್ರೋಲ್‌
ಆಕೆಯ ಟ್ರಾನ್ಸ್‌ಫಾರ್ಮೇಶನ್‌ ಅಭಿಮಾನಿಗಳನ್ನು ಆತಂಕ ಮೂಡಿಸಿದೆ. ನಟಿ ಈಗ ಎಕ್ಸ್ (ಟ್ವಿಟ್ಟರ್) ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ ಏಕೆಂದರೆ ಅವರ ಹೊಸ ರೂಪಾಂತರದಿಂದ (Transformation) ಅಭಿಮಾನಿಗಳು ಹೆಚ್ಚು ಸಂತೋಷವಾಗಿಲ್ಲ. ನಟಿ ತನ್ನ ಗೆಳೆಯ ಎಡ್ ವೆಸ್ಟ್‌ವಿಕ್‌ನೊಂದಿಗಿನ ತನ್ನ ಇತ್ತೀಚಿನ ಪ್ರವಾಸದ ಚಿತ್ರಗಳನ್ನು (Photos) ಹಂಚಿಕೊಂಡಿದ್ದಾರೆ. ಅದರಲ್ಲಿ ಆಕೆ ತುಂಬಾ ವಿಚಿತ್ರವಾಗಿ ಕಾಣುತ್ತಿದ್ದಾರೆ. ಆಮಿ ಜಾಕ್ಸನ್ ಇತ್ತೀಚೆಗೆ ಒಂದು ಫೋಟೋ ಹಂಚಿಕೊಂಡಿದ್ದು, ಆಮಿ ಈ ಫೋಟೋದಲ್ಲಿರುವ ಲುಕ್‌ನಿಂದಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆಮಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಈಗ ನಟಿಯನ್ನು 'ಓಪೆನ್‌ಹೈಮರ್' ಚಿತ್ರದ ಖ್ಯಾತಿಯ ಹಾಲಿವುಡ್ ಸೂಪರ್‌ಸ್ಟಾರ್ ಸಿಲಿಯನ್ ಮರ್ಫಿ ಅವರೊಂದಿಗೆ ಹೋಲಿಸುತ್ತಿದ್ದಾರೆ.

ಫೋಟೋಗಳಲ್ಲಿ, ಆಮಿ ಕೆಂಪು ಬಣ್ಣದ ಫಾರ್ಮಲ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿಯ ಮೇಕಪ್ ಲುಕ್ ಮತ್ತು ಹೇರ್ ಕಟ್ ನೋಡಿ ನೆಟ್ಟಿಗರು ಹಾಲಿವುಡ್ ನಟ ಸಿಲಿಯನ್ ಮರ್ಫಿ ಅವರನ್ನು ನೆನಪಿಸಿಕೊಂಡಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 

ಅದಿತಿ ರಾವ್‌ ಹೈದರಿ ಫೋಟೋ ವೈರಲ್‌: ಎಷ್ಟು ಚೆಂದ ಇದ್ದೋಳು ಪ್ಲಾಸ್ಟಿಕ್ ತಿಂದ್ಲಾ?

ತುಂಬಾ ವಿಚಿತ್ರವಾಗಿ ಕಾಣುತ್ತಿದ್ದೀರಿ ಎಂದು ಕಾಮೆಂಟಿಸಿದ ನೆಟ್ಟಿಗರು
ಒಬ್ಬ ಬಳಕೆದಾರರು, 'ಇದು ನಿಮ್ಮ ಮೇಕಪ್ ಅಥವಾ ಶಸ್ತ್ರಚಿಕಿತ್ಸೆಯೇ. ತುಂಬಾ ವಿಚಿತ್ರವಾಗಿ ಕಾಣುತ್ತಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ನಿಮ್ಮ ಮೂಲ ರೂಪದಲ್ಲಿ ನೀವು ಹೆಚ್ಚು ಸುಂದರವಾಗಿ ಕಾಣುತ್ತೀರಿ' ಎಂದಿದ್ದಾರೆ.  ಇನ್ನೊಬ್ಬ ಬಳಕೆದಾರರು, 'ನಾವು ಚಿತ್ರಗಳಲ್ಲಿ ನೋಡಿದ ಆಮಿ ಅತ್ಯಂತ ಸುಂದರಿ' ಎಂದು ಪ್ರತಿಕ್ರಿಯಿಸಿದ್ದಾರೆ. 'ನೀವು ಓಪನ್‌ಹೈಮರ್‌ನಲ್ಲಿ ಅದ್ಭುತವಾಗಿ ಕೆಲಸ ಮಾಡಿದ್ದೀರಿ' ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

ಜಾರ್ಜ್ ಪನಾಯೊಟೌ ಅವರೊಂದಿಗಿನ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ ನಂತರ ಆಮಿ ಪ್ರಸ್ತುತ 'ಗಾಸಿಪ್ ಗರ್ಲ್' ಸ್ಟಾರ್ ಎಡ್ ವೆಸ್ಟ್‌ವಿಕ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಕಳೆದ ವರ್ಷ ಜೂನ್‌ನಲ್ಲಿ ತನ್ನ ಸಂಬಂಧವನ್ನು ಇನ್‌ಸ್ಟಾವನ್ನು ಅಧಿಕೃತಗೊಳಿಸಿದರು. ಅವರು ಸ್ವಲ್ಪ ಸಮಯದಿಂದ ಚಲನಚಿತ್ರಗಳಿಂದ ದೂರವಿದ್ದರು ಮತ್ತು ಕೊನೆಯದಾಗಿ 'ಅಚಮ್ ಎಂಬತ್ತು ಇಲ್ಲಯೇ' ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ರೋಬೋಟ್ 2.0, ದಿ ವಿಲನ್, ಥೆರಿ ಮತ್ತು ಸಿಂಗ್ ಈಸ್ ಬ್ಲಿಂಗ್‌ನಂತಹ ಚಲನಚಿತ್ರಗಳಿಂದ ಫೇಮಸ್ ಆಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?