ಭಾರತದ 'ಟಾಪ್ ವಿಲನ್' ಪಟ್ಟ ಅಲಂಕರಿಸಿದ ಸ್ಟಾರ್ ನಾಯಕ!

By Shriram Bhat  |  First Published Sep 22, 2023, 6:28 PM IST

ಎಲ್ಲರಿಗಿಂತ ವಿಲನ್ ರೋಲ್‌ನಲ್ಲಿ ಇತ್ತೀಚೆಗೆ ಹೆಚ್ಚು ಸುದ್ದಿಗೆ ಸಿಕ್ಕ ನಟ ತಮಿಳು ಮೂಲದ ವಿಜಯ್ ಸೇತುಪತಿ. ಇವರು ಬಿಗ್ ಬಜೆಟ್ ಚಿತ್ರದ ಮೋಸ್ಟ್ ವಾಂಟೆಡ್ ವಿಲನ್ ಎಂದರೆ ತಪ್ಪಿಲ್ಲ. ನಾಯಕರಾಗಿ ಚಿತ್ರರಂಗಕ್ಕೆ ಬಂದರೂ ವಿಜಯ್ ಸೇತುಪತಿಗೆ ಹೆಚ್ಚು ಅಂಟಿಕೊಂಡಿದ್ದು ವಿಲನ್ ರೋಲ್! 


ಭಾರತೀಯ ಚಿತ್ರರಂಗದಲ್ಲಿ ವಿಲನ್‌ ರೋಲ್‌ಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು? ಈ ಪ್ರಶ್ನೆಗೆ ಉತ್ತರ ಹುಡುಕುವುದು ಸ್ವಲ್ಪ ಕಷ್ಟವೇ? ಏಕೆಂದರೆ, ಒಂದಾದ ಮೇಲೆ ಇನ್ನೊಂದರಂತೆ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರುತ್ತಿರುವಾಗ ಹಳೆಯ ವಿಲನ್ ಸಂಭಾವನೆಯನ್ನು ಮೀರಿಸಿ ಇನ್ನೊಬ್ಬರು ಆ ಜಾಗಕ್ಕೆ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಆದರೂ ಸದ್ಯಕ್ಕೆ ಎಂಬ ಮಾತನ್ನು ಇಟ್ಟು ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬಹುದು ಎಂಬುದು ಸೂಕ್ತವಾದ ಉತ್ತರವಾದೀತು!

ಹೌದು, ಹಲವು ದಶಕಗಳಿಂದಲೂ ಭಾರತೀಯ ಚಿತ್ರರಂಗದ ಮೋಸ್ಟ್ (ಡೇಂಜರಸ್‌!} ವಿಲನ್‌ಗಳು ಹಲವರಿದ್ದಾರೆ. ಅವರಲ್ಲಿ ಮುಖ್ಯವಾಗಿ ಹಿಂದಿಯಲ್ಲಿಅಮ್ಜದ್ ಖಾನ್, ಅಮರೀಶ್ ಪುರಿ, ಪ್ರಾಣ್, ಸಂಜಯ್ ದತ್, ಸೈಫ್ ಅಲಿ ಖಾನ್ ಮುಂತಾದ ಹೆಸರುಗಳು ಕಣ್ಣ ಮುಂದೆ ನಿಲ್ಲುತ್ತವೆ. ಕನ್ನಡದಲ್ಲಿ ವಜ್ರಮನಿ, ಧೀರೇಂದ್ರ ಗೋಪಾಲ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ರವಿಶಂಕರ್, ಕಿಶೋರ್ ಮೊದಲಾದ ಹೆಸರುಗಳು ಮನಸ್ಸಿಗೆ ಹೊಳೆಯುತ್ತವೆ. 

Tap to resize

Latest Videos

ಕನ್ನಡ ಮೂಲದ ಪ್ರಕಾಶ್ ರಾಜ್ (ಪ್ರಕಾಶ್ ರೈ) ಬಹಳಷ್ಟು ಭಾಷೆಗಳಲ್ಲಿ ಮಿಂಚುತ್ತಿರುವ ಭಾರತದ ಭಯಂಕರ ವರ್ಚಸುಳ್ಳ ಖಳ ನಟ.  ಇದೇ ಲಿಸ್ಟ್‌ನಲ್ಲಿ ಸೋನು ಸೂದ್, ಜಗಪತಿ ಬಾಬು, ರಘುವರನ್, ಗೋಪಿಚಂದ್, ರಾಣಾ ದಗ್ಗುಬಾಟಿ ಅವರನ್ನು ಸಹ ಸೇರಿಸಬಹುದು. ಅವರನ್ನು ಹೊರತುಪಡಿಸಿ ಕೂಡ ಬಹಳಷ್ಟು ಖಳನಟರು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

ಆದರೆ, ಇತ್ತೀಚೆಗೆ ನಾಯಕರು ಸಹ ತಮ್ಮ ಮಾತೃ ಭಾಷೆ ಹೊರತುಪಡಿಸಿ ಬೇರೆ ಭಾಷೆಯ ಚಿತ್ರಗಳಲ್ಲಿ ವಿಲನ್‌ಗಳಾಗಿ ಮಿಂಚುತ್ತಿದ್ದಾರೆ. ಈ ಸಾಲಿನಲ್ಲಿ ಹಲವು ನಟರಿದ್ದಾರೆ. ಕನ್ನಡದ ಸುದೀಪ್, ಶಿವರಾಜ್‌ ಕುಮಾರ್, ದುನಿಯಾ ವಿಜಯ್, ಧನಂಜಯ್, ಅರವಿಂದ ಸ್ವಾಮಿ ಮುಂತಾದವರನ್ನು ಹೆಸರಿಸಬಹುದು. ಮೋಹನ್‌ ಲಾಲ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ತಮಿಳು ನಟ ನಟ ಸೂರ್ಯ ಸಹ ಕಮಲ್ ಹಾಸನ್ ಚಿತ್ರದಲ್ಲಿ ವಿಲನ್ ರೋಲ್ ನಲ್ಲಿ ಮಿಂಚಿದ್ದಾರೆ. ಇನ್ನೊಬ್ಬ ತಮಿಳು ನಟ ವಿಕ್ರಮ್ ಕೂಡ ವಿಲನ್ ಆಗಿ ಸಖತ್ ಮಿಂಚಿದ್ದಾರೆ. 

ಎಲ್ಲರಿಗಿಂತ ವಿಲನ್ ರೋಲ್‌ನಲ್ಲಿ ಇತ್ತೀಚೆಗೆ ಹೆಚ್ಚು ಸುದ್ದಿಗೆ ಸಿಕ್ಕ ನಟ ತಮಿಳು ಮೂಲದ ವಿಜಯ್ ಸೇತುಪತಿ. ಇವರು ಬಿಗ್ ಬಜೆಟ್ ಚಿತ್ರದ ಮೋಸ್ಟ್ ವಾಂಟೆಡ್ ವಿಲನ್ ಎಂದರೆ ತಪ್ಪಿಲ್ಲ. ನಾಯಕರಾಗಿ ಚಿತ್ರರಂಗಕ್ಕೆ ಬಂದರೂ ವಿಜಯ್ ಸೇತುಪತಿಗೆ ಹೆಚ್ಚು ಅಂಟಿಕೊಂಡಿದ್ದು ವಿಲನ್ ರೋಲ್! ಸದ್ಯಕಂತೂ ವಿಜಯ್ ಸೇತುಪತಿ ಭಾರತದ ನಂಬರ್ ಒನ್ ಸ್ಥಾನದಲ್ಲಿರುವ ವಿಲನ್! ಸಂಭಾವನೆ ವಿಷಯದಲ್ಲಿಯೂ ಅವರೇ ಟಾಪ್ ವಿಲನ್ ಸ್ಟಾರ್ ಎಂಬ ಹೆಗ್ಗಳಿಕೆ ಹೊಂದಿದ್ದರು. 

ಧ್ರುವ ಸರ್ಜಾ 'ಕೆಡಿ'ಗೆ ಭರ್ಜರಿ ಎಂಟ್ರಿ ಕೊಟ್ಟ ಕನ್ನಡದ ಮತ್ತೊಬ್ಬ ಸ್ಟಾರ್ ನಟ!

ಆದರೆ, ಇದೀಗ ಚಿತ್ರರಂಗದಿಂದ ಹೊಸದೊಂದು ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಅದು ಕಮಲ್ ಹಾಸನ್ ಕುರಿತಾಗಿ ಹಬ್ಬಿರುವ ಸುದ್ದಿ. ಭಾರತದ ಎಲ್ಲಾ ವಿಲನ್‌ಗಳ ಸಂಭಾವನೆಯನ್ನು ಮೀರಿದ ಸಂಭಾವನೆ ಪಡೆದಿದ್ದಾರಂತೆ ಕಮಲ್ ಹಾಸನ್. ಹೊರಬಂದಿರುವ ಮಾಹಿತಿ ಪ್ರಕಾರ, ಕಮಲ್ ಹಾಸನ್ ಅವರಿಗೆ ಹೊಸದೊಂದು ಚಿತ್ರದ ವಿಲನ್ ರೋಲ್‌ಗೆ ಬರೋಬ್ಬರಿ 25 ಕೋಟಿ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ಈ ಮೂಲಕ ಕಮಲ್ ಹಾಸನ್ ವಿಜಯ್ ಸೇತುಪತಿಯನ್ನು ಸೈಡ್‌ಗೆ ತಳ್ಳಿದ್ದಾರೆ.

ಉಪೇಂದ್ರ ಪುತ್ರಿ ನೋಡಿ ಬಾರ್ಬಿ ಡಾಲ್ ಎಂತಿದ್ದಾರೆ ನೆಟ್ಟಿಗರು! 

ಪ್ರಭಾಸ್-ದೀಪಿಕಾ ಪಡುಕೋಣೆ ಜೋಡಿಯ ನಾಗ್ ಅಶ್ವಿನ್ ನಿರ್ದೇಶನದ ಹೊಸ ಚಿತ್ರ 'K'ಗೆ ಕಮಲ್ ಹಾಸನ್ ವಿಲನ್ ಆಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಅವರಿಗೆ ಭಾರತದಲ್ಲಿ ಅತಿ ಹೆಚ್ಚು ಎನ್ನುವ 25 ಕೋಟಿ ಸಂಭಾವನೆ ದೊರಕಿದೆ ಎಂಬ ಮಾಹಿತಿಯಿದೆ. ಈ ಚಿತ್ರದಲ್ಲಿ ಘಟಾನುಘಟಿ ತಾರಾಬಳಗವೇ ಇದೆ. ಪ್ರಭಾಸ್-ದೀಪಿಕಾ ಜತೆ ಅಮಿತಾಬ್ ಬಚ್ಚನ್, ದಿಶಾ ಪಠಾನಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. 

click me!