ಚಿಕಿತ್ಸೆ ಸಿಕ್ಕಿದರೆ ನಾನು ಬದುಕುಳಿಯುತ್ತಿದ್ದೆ; ಸಾವಿಗೂ ಮುನ್ನ ನಟ ರಾಹುಲ್ ಬರೆದ ಸಾಲುಗಳು

By Suvarna News  |  First Published May 10, 2021, 10:25 AM IST

ಕೊರೋನಾ ವೈರಸ್‌ಗೆ ಬಾಲಿವುಡ್ ನಟ ರಾಹುಲ್‌ ವೊಹ್ರಾ (35) ತುತ್ತಾಗಿದ್ದು, ಕೊನೇ ಕ್ಷಣದಲ್ಲಿ ಬರೆದ ಸಾಲುಗಳು ಎಲ್ಲೆಡೆ ವೈರಲ್ ಆಗುತ್ತಿದೆ. 


ಬಾಲಿವುಡ್ ನಟ ಹಾಗೂ ಯುಟ್ಯೂಬ್ ಸ್ಟಾರ್ ರಾಹುಲ್ ವೊಹ್ರಾಗೆ ಕೊರೋನಾ ಸೋಂಕು ತಗುಲಿತ್ತು. ಡೆಲ್ಲಿಯ ತಾಹಿರ್ ಪುರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ  ಪೋಸ್ಟ್ ಮಾಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡುತ್ತಿದ್ದರು. ಸಾವಿಗೂ ಮುನ್ನ ರಾಹುಲ್ ಬರೆದ ಸಾಲು ಮನಕಲಕುವಂತಿದೆ.

ನಿರ್ಮಾಪಕ ಸ್ವಾತಿ ಅಂಬರೀಶ್‌ ಕೋವಿಡ್‌ಗೆ ಬಲಿ 

Tap to resize

Latest Videos

ರಾಹುಲ್ ಪೋಸ್ಟ್:

'ಉತ್ತಮ ಚಿಕಿತ್ಸೆ ಸಿಕ್ಕಿದ್ದರೆ ಬಹುಶಃ ನಾನೂ ಬದುಕುಳಿಯುತ್ತಿದ್ದೆ. ನರೇಂದ್ರ ಮೋದಿ, ಮನೀಶ್‌ ಸಿಸೋಡಿಯಾ ಅವರೇ ಅತೀ ಶೀಘ್ರದಲ್ಲೇ ಮತ್ತೆ ಜನಿಸಿ ಬರುತ್ತೇನೆ. ಉತ್ತಮ ಕೆಲಸ ಮಾಡುತ್ತೇನೆ. ನನಗಿದ್ದ ಎಲ್ಲಾ ರೀತಿಯ ಧೈರ್ಯವನ್ನು ಕಳೆದುಕೊಂಡಿರುವೆ,' ಎಂದು ಬರೆದುಕೊಂಡಿದ್ದಾರೆ. 

ಜೊತೆಗೆ ರಾಹುಲ್ ಫೇಸ್‌ಬುಕ್‌ನಲ್ಲಿ ತಮ್ಮ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಸರು: ರಾಹುಲ್ ವೊಹ್ರಾ
ವಯಸ್ಸು: 35
ಆಸ್ಪತ್ರೆ ಹೆಸರು: ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಡೆಲ್ಲಿ.
ಬೆಸ್‌ ಸಂಖ್ಯೆ: 6554
6ನೇ ಮಹಡಿ, B ವಿಂಗ್

ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾಗೆ ಬಲಿ 

ರಾಹುಲ್ ಮೂಲತಃ ಉತ್ತರಾಖಂಡ್‌ನವರು. ನೆಟ್‌ಫ್ಲಿಕ್ಸ್‌ ಸರಣಿಯಲ್ಲಿ 'ಅನ್‌ ಫ್ರೀಡಂ'ನಲ್ಲಿ ಅಭಿನಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಸಾಕಷ್ಟು ಹೆಸರು ಮಾಡಿದ್ದಾರೆ. ರಾಹುಲ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!