
ಕೊರೋನಾ ವಿರುದ್ಧ ಭಾರತದ ಹೋರಾಟಕ್ಕೆ ನೆರವು ನೀಡಲು ನಿಧಿಸಂಗ್ರಹವನ್ನು ಪ್ರಾರಂಭಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಅಪಾರ ಬೆಂಬಲ ಸಿಕ್ಕಿದೆ.
ಕೇವಲ ಒಂದು ದಿನದಲ್ಲಿ ಈ ಜೋಡಿ 3.5 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದ್ದಾರೆ. ಒಟ್ಟು 7 ಕೋಟಿ ರೂ. ಸಂಗ್ರಹಕ್ಕೆ ಇವರು ಗುರಿ ಇರಿಸಿದ್ದರು. ಇದಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿ ಅಭಿಮಾನಿಗಳ ಉದಾರ ಕೊಡುಗೆಗಾಗಿ ಧನ್ಯವಾದ ಹೇಳಿದ್ದಾರೆ.
ಕೋವಿಡ್ ಪರಿಹಾರ ನಿಧಿಗೆ ವಿರುಷ್ಕಾ 2 ಕೋಟಿ ರೂ ದೇಣಿಗೆ, 7 ಕೋಟಿ ಸಂಗ್ರಹಿಸುವ ಗುರಿ
ಇಲ್ಲಿಯವರೆಗೆ ದೇಣಿಗೆ ನೀಡಿದ ಎಲ್ಲರಿಗೂ ಕೃತಜ್ಞತೆ. ನಿಮ್ಮ ಕೊಡುಗೆಗೆ ಧನ್ಯವಾದಗಳು. ನಾವು ಅರ್ಧ ದಾರಿಯನ್ನು ದಾಟಿದ್ದೇವೆ. ಮುಂದುವರಿಯೋಣ ಎಂದು ಅನುಷ್ಕಾ ಬರೆದಿದ್ದಾರೆ.
ವಿರುಷ್ಕಾ ನಿಧಿಸಂಗ್ರಹಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ದೇಶದ ಹೋರಾಟವನ್ನು ಬೆಂಬಲಿಸಲು ಒಟ್ಟು 7 ಕೋಟಿ ರೂ ಸಂಗ್ರಹಿಸಲು ಯೋಜಿಸಿದ್ದಾರೆ.
ಈ ಅಭಿಯಾನವು ಏಳು ದಿನಗಳವರೆಗೆ ನಡೆಯಲಿದ್ದು, ಅದರ ಆದಾಯವು ಎಸಿಟಿ ಗ್ರಾಂಟ್ಸ್‌ಗೆ ಹೋಗುತ್ತದೆ. ಇದು ಆಕ್ಸಿಜನ್, ವ್ಯಾಕ್ಸಿನೇಷನ್ ಜಾಗೃತಿ, ವೈದ್ಯಕೀಯ ಮಾನವಶಕ್ತಿ ಮತ್ತು ಟೆಲಿಮೆಡಿಸಿನ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.