
ಮುಂಬೈ (ಜೂ. 14) ಆತ್ಮಹತ್ಯೆಗೆ ಶರಣಾಗಿರುವ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಸೋಶಿಯಲ್ ಮೀಡಿಯಾದಲ್ಲಿ ಕೊನೆಯದಾಗಿ ಬರೆದಿದ್ದ ಪೋಸ್ಟ್ ನಮ್ಮ ಕಣ್ಣುಗಳನ್ನು ತೇವ ಮಾಡುತ್ತದೆ. ಜೂನ್ 3ರಂದು ಇನ್ಸ್ಟಾಗ್ರಾಮ್ ನಲ್ಲಿ ದಿವಂಗತ ತಾಯಿ ನೆನೆದು ಬರೆದುಕೊಂಡಿದ್ದರು.
ಸುಶಾಂತ್ ತಾವು ಮತ್ತು ತಮ್ಮ ತಾಯಿಯ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಹಿಂದಿನ ಘಟನೆಗಳೆಲ್ಲ ಕಣ್ಣೀರಿನ ಹನಿಗಳಿಂದ ಆವಿಯಾಗಿದೆ. ಅಂತ್ಯವಿಲ್ಲದ ಕನಸುಗಳ ನಗೆಯಲ್ಲಿ ಕಾಣುತ್ತಿವೆ. ಇಬ್ಬರ (ತಾಯಿ ಮತ್ತು ತಾನು) ನಡುವೆ ಚೌಕಾಶಿ ಮಾಡುವುದೇನು? ಎಂಬುದನ್ನು ಬರೆದುಕೊಂಡಿದ್ದರು. ಒಂದರ್ಥದಲ್ಲಿ ಜೀವನ ಕ್ಷಣಿಕ ಎಂಬ ಮಾತುಗಳನ್ನೇ ಆಡಿದ್ದರು.
ಧೋನಿ ಅನ್ ಟೋಲ್ಡ್ ಸ್ಟೋರಿ ಹೇಳಿ ಯಾರಿಗೂ ಹೇಳದೆ ಹೋದ ಸುಶಾಂತ್
ಸುಶಾಂತ್ ಇಂಥ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿಯುತ್ತಿದೆ. ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆ ಮಾತಾಗಿದ್ದ ನಟ ಇನ್ನು ನೆನಪು ಮಾತ್ರ.
ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಭಾನುವಾರ ಬೆಳಗ್ಗೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸುಶಾಂತ್ ಪತ್ತೆಯಾಗಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.