ಸಿನಿಮಾ ರಿಲೀಸ್‌ಗೂ ಮುನ್ನವೇ ಪಾರ್ಶ್ವವಾಯುದಿಂದ ನಿರ್ದೇಶಕ ನಿಧನ!

Suvarna News   | Asianet News
Published : Jun 14, 2020, 05:09 PM IST
ಸಿನಿಮಾ ರಿಲೀಸ್‌ಗೂ ಮುನ್ನವೇ ಪಾರ್ಶ್ವವಾಯುದಿಂದ  ನಿರ್ದೇಶಕ ನಿಧನ!

ಸಾರಾಂಶ

ಕಾಲಿವುಡ್‌ ನಿರ್ದೇಶಕ ಬಾಲಮಿತ್ರನ್‌ ಪಾರ್ಶ್ವವಾಯು ಹಾಗೂ ಉಸಿರಾಟದ ತೊಂದರೆಯಿಂದ ಕೊನೆ ಉಸಿರೆಳೆದಿದ್ದಾರೆ.

ತಮಿಳು ಚಿತ್ರರಂಗದ ಹೆಸರಾಂತ ನಿರ್ದೇಶಕ ಬಾಲಮಿತ್ರನ್‌ ತಮ್ಮ ಮುಂದಿನ ಸಿನಿಮಾ 'ಉಡುಕ್ಕೈ' ನಿರ್ದೇಶನ ಮಾಡುತ್ತಿದ್ದು ರಿಲೀಸ್‌ಗೂ ಮುನ್ನವೇ ನಿಧನರಾಗಿದ್ದಾರೆ.

'ಉಡುಕ್ಕೈಲ್' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿದಿದ್ದು ಲಾಕ್‌ಡೌನ್‌ನಿಂದಾಗಿ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ಮುಂದೂಡಲಾಗಿತ್ತು. ಈ ನಡುವೆ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದ ಬಾಲಮಿತ್ರನ್‌ಗೆ ಇದಕ್ಕಿದಂತೆ ಪಾರ್ಶ್ವವಾಯುವಾಗಿ ಉಸಿರಾಡಲು ತೊಂದರೆಯಾಗಿತ್ತು ಎನ್ನಲಾಗಿದೆ. 

'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು! ...

ತಕ್ಷಣವೇ ಚೆನ್ನೈನ ಆಸ್ಪತ್ರೆವೊಂದಕ್ಕೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.  ಈ ಹಿಂದೆಯೂ ಪಾರ್ಶ್ವವಾಯುಗೆ ತುತ್ತಾಗಿದ್ದು ಚೇತರಿಸಿಕೊಂಡಿದ್ದರು. ಮೊದಲು ವಡಪಳನಿ ಎಂದು ಆಸ್ಪತ್ರೆಗೆ ಸೇರಿಸಲಾಗಿತ್ತು ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ ಕಟ್ಟಂಕುಲತೂರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಚಿಕಿತ್ಸೆ ವಿಫಲವಾಗಿ ಬಾಲಮಿತ್ರನ್ ಸಾವನಪ್ಪಿದ್ದಾರೆ. 

ನಿರ್ದೇಶಕ ಬಾಲಮಿತ್ರನ್‌ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. 'ಉಡುಕ್ಕೈ' ಚಿತ್ರದ ನಟಿ ಸಂಜನಾ ತನ್ನ ಬಾಲಮಿತ್ರನ್ ಇನ್ನಿಲ್ಲ ಎಂದು ಟ್ಟೀಟ್‌ ಮಾಡಿದ್ದರು. 'ಎಂದೂ ಊಹಿಸಿರದ  ಸುದ್ದಿ ಕೇಳಿ ಶಾಕ್ ಆಗಿರುವೆ. ನಮ್ಮ ಸಿನಿಮಾ ನಿರ್ದೇಶಕರು ಬಾಲಮಿತ್ರನ್ ಇನ್ನಿಲ್ಲ' ಎಂದು ಬರೆದುಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬರಸನ್ ಉತ್ತರಕ್ಕೆ ಆಂಕರ್ ಏನಂದ್ರು?