ಖಿನ್ನತೆಗೆ ಒಳಗಾಗಿರುವುದಾಗಿ ಶೀಜಾನ್ ಮೊಹಮ್ಮದ್ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.
ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಕೆಲವು ದಿನಗಳ ಹಿಂದೆ ಚಿತ್ರೀಕರಣ ಮಾಡುತ್ತಿದ್ದ ಸ್ಥಳದಲ್ಲಿ ಮೇಕಪ್ ಮಾಡಿಸಿಕೊಂಡು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಪ್ರಕರಣ ಇದಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಆಕೆಯ ಸಹನಟ ಕಮ್ ಎಕ್ಸ್ ಬಾಯ್‌ಫ್ರೆಂಡ್ ಆಗಿದ್ದ ಶ್ರೀಜಾನ್ ಮೊಹಮ್ಮದ್ ಖಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ವಸಾಯಿ ನ್ಯಾಯಾಲಯಕ್ಕೆ ಪೊಲೀಸರು ಶ್ರೀಜಾನ್‌ನ ಹಾಜರು ಪಡಿಸಿದರು. ಮೊಹಮ್ಮದ್ ಖಾನ್‌ನ ನಾಲ್ಕು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ಕಳುಹಿಸಿದ ನ್ಯಾಯಲಯ ಮತ್ತೊಬ್ಬ ಸಹ ನಟ ಪಾರ್ಥ್ ಜುಟ್ಶಿ ಅವರನ್ನು ಕೂಡ ವಿಚಾರಣೆ ಕರೆದಿದ್ದಾರೆ.
ಪೊಲೀಸರು ಕಠಿಣ ತನಿಖೆ ಮಾಡುತ್ತಿದರೆ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಶ್ರೀಜಾನ್ ಮಾತನಾಡಿರುವ ಹಳೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟೆಡ್ ಟಾಕ್‌ನಲ್ಲಿ ಖಿನ್ನತೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದರ ಬಗ್ಗೆ ಮಾತನಾಡಿದ್ದಾರೆ. ತಮ್ಮ ತಂದೆ ತಾಯಿ ನಡುವೆ ಆಗುತ್ತಿದ್ದ ಜಗಳವನ್ನು ವಿಚರಿಸಿದ್ದಾರೆ.
ಶ್ರೀಜಾನ್ ಮಾತು:
'ಮಕ್ಕಳಿಗೆ ಸುರಕ್ಷತೆ, ನೆಮ್ಮದಿ ಮತ್ತು ಖುಷಿ ಸಿಗುವುದು ಮನೆಯಲ್ಲಿ ಮಾತ್ರ. ಆದರೆ ಎಲ್ಲರ ಜೀವನದಲ್ಲೂ ಈ ರೀತಿ ಇರುವುದಿಲ್ಲ. ನಾನು 7 ವರ್ಷವಿದ್ದಾಗ ನನ್ನ ತಂದೆ, ತಾಯಿ ಮತ್ತು ಸಹೋದರಿ ಜೊತೆ ವಾಸಿಸುತ್ತಿದ್ದೆ. ನನಗೆ ಸರಿಯಾದ ಒಂಟು ಕುಟುಂಬ ಇರಲಿಲ್ಲ ಅದು ಬಿಡಿ ನನ್ನ ತಂದೆ-ತಾಯಿ ಜೊತೆ ಸರಿಯಾದ ಸಂಬಂಧವಿರಲಿಲ್ಲ. ತಂದೆ-ತಾಯಿ ಸದಾ ಜಗಳವಾಡುತ್ತಿದ್ದರು ಹೀಗಾಗಿ ಜೀವನದಲ್ಲಿ ಸುಖ ಪರಿವಾರ ನೋಡಿಲ್ಲ. ಅವರು ಖುಷಿಯಾಗಿರಲಿಲ್ಲ ಎಷ್ಟ ಮಟ್ಟಕ್ಕೆ ಜಗಳು ಮತ್ತು ಬೇಸರ ಅಂದ್ರೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಗುತ್ತಿರಲಿಲ್ಲ' ಎಂದು ಶ್ರೀಜಾನ್ ಮಾತನಾಡಿದ್ದಾರೆ.
'ನಮ್ಮ ಮನೆ ಪರಿಸ್ಥಿತಿಯನ್ನು ಮನೆ ಮಾಲೀಕರು ದುರುಪಯೋಗ ಪಡೆಸಿಕೊಂಡರು. ಒಂದು ದಿನ, ಮನೆಯಲ್ಲಿ ನಡೆಯುತ್ತಿದ್ದ ಘನಟೆಯಿಂದ ಬೇಸರಗೊಂಡು ನಾನು ಅಳುತ್ತಿದ್ದೆ. ನನ್ನ ತಂದೆ ಪ್ರತಿ ಸಲವೂ ತಾಯಿ ಮೇಲೆ ಅಟ್ಯಾಕ್ ಮಾಡುತ್ತಿದ್ದರು. ಆಗ ಮನೆ ಮಾಲೀಕರು ನನ್ನನ್ನು ಕರೆದುಕೊಂಡು ಹೋಗಿ ಐಸ್ ಕ್ರೀಮ್ ಕೊಡಿಸಿದ್ದರು, ಆಗ ನನಗೆ ಐಸ್ ಕ್ರೀಮ್ ತುಂಬಾನೇ ಇಷ್ಟ. ಕೊಡಿಸಿಕೊಳ್ಳುತ್ತಿದ್ದ ಐಸ್ ಕ್ರೀಮ್‌ಗಳಿಗೆ ನಾನು ಆನಂತರ ಹಣ ಕೊಡಬೇಕಿತ್ತು. ಅಂಗಡಿ ಬಳಿ ಇದ್ದ ಪಬ್ಲಿಕ್ ಟಾಯ್ಲೆಟ್‌ಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದರು, ಕಲ್ಪನೆಯೂ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಅದನ್ನು ಪದಗಳಲ್ಲಿ ವರ್ಣಿಸಲು ಬರುವುದಿಲ್ಲ. ಆ ಟಾಯ್ಲೆಟ್‌ನಿಂದ ನಾನು ಮನೆಗೆ ನಾನ್ ಸ್ಟಾಪ್ ಓಡಲು ಶುರು ಮಾಡಿದೆ ಇಲ್ಲದಿದ್ದರೆ ಅವರ ಕಾಟ ಮತ್ತೆ ಹೆಚ್ಚುತ್ತಿತ್ತು. ಮನೆಗೆ ಹೋಗುತ್ತಿದ್ದಂತೆ ತಣ್ಣೀರಿನ ಸ್ನಾನ ಮಾಡಿದೆ. ನನ್ನ ಜೀವನದಲ್ಲಿ ಎಂದೂ ಅಷ್ಟು ಆತಂಕ ಆಗಿರಲಿಲ್ಲ. ತುಂಬಾ ಭಯವಾಗಿತ್ತು ಹಾಗೂ ಒಂಟಿಯಾಗಿದ್ದೆ' ಎಂದು ಶ್ರೀಜಾನ್ ಹೇಳಿದ್ದಾರೆ.
15 ದಿನಗಳ ಹಿಂದೆ ಬ್ರೇಕಪ್; ಕಿರುತೆರೆ ನಟಿ ತುನಿಷಾ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್
ತನುಷಾ ತನಿಖೆ:
20 ವರ್ಷ ವಯಸ್ಸಿನ ನಟಿ ತುನಿಷಾ ಶೂಟಿಂಗ್ ನಡುವೆ ಚಹಾ ವಿರಾಮದ ವೇಳೆ ವಾಶ್‌ರೂಮ್‌ಗೆ (wash room) ತೆರಳಿದ್ದು, ಅಲ್ಲೇ ನೇಣು ಹಾಕಿಕೊಂಡಿದ್ದರು. ಶೌಚಾಲಯಕ್ಕೆ ಹೋದ ಆಕೆ ಎಷ್ಟೇ ಹೊತ್ತಾದರೂ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳ ಹೋದಾಗ ಅವರ ದೇಹ ನೇತಾಡುತ್ತಿರುವುದು ಕಾಣಿಸಿದೆ. ಕೂಡಲೇ ಶೂಟಿಂಗ್ ಸಿಬ್ಬಂದಿ ಅವಳನ್ನು ಮಧ್ಯರಾತ್ರಿ 1:30 ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.