Sushant Singh; ದೇಹದ ಮೇಲಿತ್ತು ಹಲವಾರು ಗಾಯ; ಎರಡೂವರೆ ವರ್ಷದ ಬಳಿಕ ಶವಪರೀಕ್ಷೆ ಸಿಬ್ಬಂದಿ ಆಘಾತಕಾರಿ ಹೇಳಿಕೆ

By Shruthi KrishnaFirst Published Dec 26, 2022, 3:13 PM IST
Highlights

ಸುಶಾಂತ್ ಸಿಂಗ್ ದೇಹದ ಮೇಲಿತ್ತು ಹಲವಾರು ಗಾಯ ಎಂದು ಎರಡೂವರೆ ವರ್ಷಗಳ ಬಳಿಕ ಶವಪರೀಕ್ಷೆ ಸಿಬ್ಬಂದಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. 

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಎರಡೂವರೆ ವರ್ಷಗಳ ಮೇಲಾದರೂ ಅಂತಿಮ ವರದಿ ಇನ್ನೂ ಬಂದಿಲ್ಲ. ಬಾಲಿವುಡ್ ಅನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಸುಶಾಂತ್ ಸಿಂಗ್ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಾ ಭಾರಿ ಚರ್ಚೆಗೆ ಕಾರಣವಾಗಿದ್ದ ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ಮತ್ತೊಂದು ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಶವ ಪರೀಕ್ಷೆ ಮಾಡಿದ ಸಿಬ್ಬಂದಿಯಲ್ಲಿ ಒಬ್ಬರು ನೀಡಿದ ಹೇಳಿಕೆ ಈಗ ಅಚ್ಚರಿ ಮೂಡಿಸಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಅಲ್ಲ, ಕೊಲೆ ಎಂದು ಅನಿಸುತ್ತೆ ಎಂದು ಹೇಳಿದ್ದಾರೆ. 

ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ ರೂಪ ಕುಮಾರ್ ಶಾ ಎರಡೂವರೆ ವರ್ಷಗಳ ಬಳಿಕ ಮಾತನಾಡಿದ್ದಾರೆ. 'ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗ ಕೂಪರ್ ಆಸ್ಪತ್ರೆಯಲ್ಲಿ ನಾವು ಐದು ದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ವಿ. ಐದು ದೇಹಗಳಲ್ಲಿ ಒಂದು ವಿಐಪಿ ಶವವಾಗಿತ್ತು. ಮರಣೋತ್ತರ ಪರೀಕ್ಷೆ ಹೋದಾಗ ನಮಗೆ ಸುಶಾಂತ್ ಸಿಂಗ್ ಶವ ಎಂದು ಗೊತ್ತಾಯಿತು. ದೇಹದ ಮೇಲೆ ಹಲವು ಗುರುತುಗಳಿದ್ದವು. ಕುತ್ತಿಗೆ ಮೇಲೆ ಎರಡರಿಂದ ಮೂರು ಗುರುತುಗಳಿವೆ. ಪೋಸ್ಟ್ ಮಾರ್ಟಮ್ ಅನ್ನು ರೆಕಾರ್ಡ್ ಮಾಡಬೇಕಿತ್ತು. ಆದರೆ ಉನ್ನತ ಅಧಿಕಾರಿಗಳು ದೇಹದ ಚಿತ್ರಗಳನ್ನು ಮಾತ್ರ ಕ್ಲಿಕ್ ಮಾಡುವಂತೆ ಹೇಳಿದರು. ಅದರಂತೆ ಮಾಡಿದೆವು. 

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ 2 ವರ್ಷದಿಂದ ಖಾಲಿ; ತಲೆ ಕೆಡಿಸಿಕೊಂಡ ಓನರ್

'ನಾನು ಸುಶಾಂತ್‌ನ ಶವವನ್ನು ಮೊದಲ ಬಾರಿಗೆ ನೋಡಿದಾಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನಿಸಿತ್ತು. ಅದನ್ನು ನಾನು ಹಿರಿಯ ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ನಾನು ನಿಯಮದ ಪ್ರಕಾರ ಕೆಲಸ ಮಾಡಬೇಕು. ಹಿರಿಯರ ಅಧಿಕಾರಿ ನನಗೆ ಫೋಟೋ ಕ್ಲಿಕ್ ಮಾಡಲು ಹೇಳಿದರು. ಆದಷ್ಟು ಬೇಗ ಶವ ಪರೀಕ್ಷೆ ಮಾಡಿ ಪೊಲೀಸರಿಗೆ ನೀಡಿ ಎಂದರು. ಹಾಗಾಗಿ ನಾವು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ' ಎಂದು ಹೇಳಿದರು. 

34 ವರ್ಷದ ನಟ ಸುಶಾಂತ್ ಸಿಂಗ್ ಜೂನ್ 2020 ಬಾಂದ್ರಾದಲ್ಲಿ ಅವರ ಆಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಮೊದಲು ಆತ್ಮಹತ್ಯೆ ಎಂದು ವರದಿ ಮಾಡಿದ್ದರು. ಬಳಿಕ ಈ ಪ್ರಕರಣ ಸಿಬಿಐಗೆ ಹಸ್ತಾಂತರ ಮಾಡಲಾಯಿತು. ಸುಶಾಂತ್ ಸಾವಿನ ಪ್ರಕರಣವನ್ನು ವಿವಿಧ ಕೋನಗಳಲ್ಲಿ ತನಿಖೆ ಮಾಡಲಾಗಿದೆ.  

ಮತ್ತೆ ಪ್ರೀತಿ ಕಂಡುಕೊಂಡ ಸುಶಾಂತ್‌ ಗರ್ಲ್‌ಫ್ರೆಂಡ್‌ ರಿಯಾ ಚಕ್ರವರ್ತಿ; ಯಾರಿದು ಬಂಟಿ ಸಜ್ದೇಹ್?

ಇತ್ತೀಚೆಗೆ, ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆಕೆ ಸಿಂಗ್, ದರ್ಶನವೊಂದರಲ್ಲಿ 'ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪ್ರಬಲ ರಾಜಕೀಯ ಕುಟುಂಬವು ತನ್ನ ಮಗನ ಸಾವಿನಲ್ಲಿ ಭಾಗಿಯಾಗಿದೆ' ಎಂದು ಆರೋಪಿಸಿದ್ದರು. 

click me!