Snake Bite: ಟೈಗರ್‌ ಹಾಗೂ ಹಾವು ಎರಡೂ ಚೆನ್ನಾಗಿವೆ ಎಂದ ಸಲ್ಮಾನ್‌ ಖಾನ್‌

By Suvarna News  |  First Published Dec 28, 2021, 8:15 AM IST

ನಟ ಸಲ್ಮಾನ್‌ ಖಾನ್‌ ತಮಗೆ ವಿಷಕಾರಿಯಲ್ಲದ ಹಾವು ಮೂರು ಬಾರಿ ಕಡಿದರೂ ತಾವು ಸುರಕ್ಷಿತವಾಗಿರುವುದಾಗಿ ಸೋಮವಾರ ಹೇಳಿದ್ದಾರೆ. ಜೊತೆಗೆ ಶನಿವಾರ ರಾತ್ರಿ ನಡೆದ ಇಡೀ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.


ಮುಂಬೈ: ನಟ ಸಲ್ಮಾನ್‌ ಖಾನ್‌ (Salman Khan) ತಮಗೆ ವಿಷಕಾರಿಯಲ್ಲದ ಹಾವು (Snake Bite) ಮೂರು ಬಾರಿ ಕಡಿದರೂ ತಾವು ಸುರಕ್ಷಿತವಾಗಿರುವುದಾಗಿ ಸೋಮವಾರ ಹೇಳಿದ್ದಾರೆ. ಜೊತೆಗೆ ಶನಿವಾರ ರಾತ್ರಿ ನಡೆದ ಇಡೀ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

'ಫಾರ್ಮ್‌ಹೌಸ್‌ನ ಕೊಠಡಿಯೊಂದಕ್ಕೆ ಹಾವು ನುಗ್ಗಿದ್ದು ನೋಡಿ, ಮಕ್ಕಳು ಹೆದರಿದ್ದವು. ನಾನು ಉದ್ದನೆಯ ಕೋಲಿನ ಸಹಾಯದಿಂದ ಹಾವನ್ನು ಎತ್ತಿದೆ. ಹಾಗೂ ಅತ್ಯಂತ ಕಾಳಜಿಯಿಂದ ಅದನ್ನು ಕೋಣೆಯಿಂದ ಹೊರಗಡೆ ತಂದೆ. ಹಾವು ಕೋಲಿಗೆ ಸುತ್ತಿಕೊಂಡಿತ್ತು. ಹಾಗೆಯೇ ಮುಂದುವರೆಯುತ್ತ ನನ್ನ ಕೈಯನ್ನು ಸಮೀಪಿಸಿತು. ನಾನು ನಿಧಾನವಾಗಿ ಹಾವನ್ನು ಕೆಳಗಿಳಿಸಿ ಕಾಡಿಗೆ ಬಿಡಬೇಕೆಂದುಕೊಂಡಿದ್ದೆ. ಅದು ಕಂಧಾರಿ ಪ್ರಭೇದದ ಹಾವಾಗಿತ್ತು. ಜನರು ಹಾವನ್ನು ಕಂಡು ಭಯಭೀತರಾಗಿ ಕಂಧಾರಿ, ಕಂಧಾರಿ ಎಂದು ಕಿರುಚಿದಾಗ ಹಾವು ಕಚ್ಚಿತು. ಜನರ ಗದ್ದಲ ಹೆಚ್ಚಿದಂತೆ ಹಾವು ಇನ್ನೆರಡು ಬಾರಿ ನನ್ನನ್ನು ಕಚ್ಚಿತು'.

Tap to resize

Latest Videos

'ಕೂಡಲೇ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಹಾವು ವಿಷಕಾರಿಯಲ್ಲ ಎಂದು ತಿಳಿದುಬಂತು. ಅಲ್ಲಿ ವಿಷ ವಿರೋಧಿ ಚುಚ್ಚುಮದ್ದನ್ನು ನೀಡಿ ಆರು ಗಂಟೆಗಳ ಕಾಲ ನನ್ನನ್ನು ವೀಕ್ಷಣೆಯಲ್ಲಿರಿಸಲಾಯಿತು. ಸಂಪೂರ್ಣ ಚೇತರಿಕೆ ನಂತರ ನಾನು ಫಾರ್ಮಹೌಸಿಗೆ ಮರಳಿದೆ ಎಂದರು. ಅಲ್ಲದೇ ಹಾವನ್ನು ಈಗಾಗಲೇ ಕಾಡಿಗೆ ಬಿಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಘಟನೆ ಕೇಳಿ ಚಿಂತಿತರಾದ ತಂದೆ ಸಲೀಂ ಖಾನ್‌ (Salim Khan), ಸಲ್ಮಾನ್‌ ಅರೋಗ್ಯ ವಿಚಾರಿಸಿದ್ದು ಮಾತ್ರವಲ್ಲದೇ ಹಾವು ಜೀವಂತವಾಗಿದೆಯೇ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಲ್ಮಾನ್‌ 'ಏಕ್‌ ಥಾ ಟೈಗರ್‌' (Ek Tha Tiger) ಹಾಗೂ 'ಟೈಗರ್‌ ಜಿಂದಾ ಹೈ' (Tiger Zinda Hai) ಚಲನಚಿತ್ರದಲ್ಲಿ ತಮ್ಮ ಪಾತ್ರದ ಹೆಸರನ್ನು ಉಲ್ಲೇಖಿಸಿ 'ಟೈಗರ್‌ ಹಾಗೂ ಹಾವು ಎರಡೂ ಚೆನ್ನಾಗಿವೆ' ಎಂದು ಹೇಳಿದ್ದಾರೆ.

Alia Bhatt Helps Button Up Salman Khan: ಸಲ್ಲು ಶರ್ಟ್ ಬಟನ್ ಹಾಕಿದ ಆಲಿಯಾ

undefined

ಫಾರ್ಮ್ ಹೌಸ್ ವಿಶೇಷತೆ: ಸಲ್ಮಾನ್ ಖಾನ್ ಜೀವನ ಅನ್‌ಸ್ರ್ಕೀನ್‌ ಹಾಗೂ ಅಫ್‌ಸ್ರ್ಕೀನ್‌ ಎರಡೂ ಇಂಟರೆಸ್ಟಿಂಗ್‌. ಸಲ್ಲು ಬಾಯಿ ಲೈಫನ್ನು ಸಂಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ. ಬಾಲಿವುಡ್‌ನ ಈ ಸೂಪರ್‌ ಸ್ಟಾರ್‌ ಕಳೆದ 40 ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಒಂದು ಸಣ್ಣ ಕೋಣೆಯಲ್ಲಿ ವಾಸಿಸುತ್ತಿರುವುದು ಎಲ್ಲಿರಿಗೂ ತಿಳಿದಿದೆ. ಆದರೆ ಪನ್‌ವೆಲ್‌ನಲ್ಲಿ ಅವರು ಒಂದು ದೊಡ್ಡ ಫಾರ್ಮ್ ಹೌಸ್ ಹೊಂದಿರುವುದಿನ್ನೂ ಹಲವರಿಗೆ ತಿಳಿದಿಲ್ಲ, ಅಲ್ಲಿ  ಹೆಚ್ಚಾಗಿ ದೊಡ್ಡ ಪಾರ್ಟಿ ಮತ್ತು ಫ್ಯಾಮಿಲಿಯೊಂದಿಗೆ ಫ್ರೀ ಟೈಮ್‌ ಕಳೆಯುತ್ತಾರೆ ಬಾಲಿವುಡ್‌ ಸುಲ್ತಾನ್‌.

Snake Bite: ಫಾರ್ಮ್‌ಹೌಸಲ್ಲಿದ್ದ ಸಲ್ಮಾನ್ ಖಾನ್‌ ಅಪಾಯದಿಂದ ಪಾರು

ಮುಂಬೈನ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾದ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ ಹೌಸ್ ಐಷಾರಾಮಿಗೆ ಮತ್ತೊಂದು ಹೆಸರು. 150 ಎಕರೆ ಪ್ರದೇಶದಲ್ಲಿ ಹರಡಿರುವ ಹಚ್ಚ ಹಸಿರಿನ ತೋಟದಮನೆ ಸಲ್ಲುಗೆ ಅಚ್ಚುಮೆಚ್ಚು. ಸುಂದರವಾದ ಫಾರ್ಮ್ ಹೌಸ್‌ನಲ್ಲಿ ಸ್ವೀಮಿಂಗ್‌ ಪೂಲ್‌ , ಜಿಮ್‌ ಮತ್ತು  ಸಲ್ಮಾನ್ ಖಾನ್ ಅವರ ಪೆಟ್‌ಗಳಿಗೆ ಪ್ರತ್ಯೇಕ ಜಾಗವಿದೆ. ಸಲ್ಮಾನ್ ಖಾನ್ ತನ್ನ ತಂಗಿ ಅರ್ಪಿತಾ ಖಾನ್ ಎಂದರೆ ತುಂಬಾ ಪ್ರೀತಿ , ಪನ್ವೆಲ್ ಫಾರ್ಮ್ ಹೌಸ್ ಅನ್ನು  ಅರ್ಪಿತಾ ಫಾರ್ಮ್ಸ್ ಎಂದೇ ಹೆಸರಿಸಿದ್ದಾರೆ. ಸಲ್ಮಾನ್ ಖಾನ್ ತಮ್ಮ 50ನೇ ಹುಟ್ಟುಹಬ್ಬವನ್ನು ಅವರ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ತಮ್ಮ ಪನ್ವೆಲ್ ಫಾರ್ಮ್ ಹೌಸ್‌ನಲ್ಲಿ ಆಚರಿಸಿಕೊಂಡಿದ್ದರು.

click me!