Round up 2021: ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆದ ಭಾರತೀಯ ಚಿತ್ರಗಳು

Suvarna News   | Asianet News
Published : Dec 27, 2021, 07:03 PM IST
Round up 2021: ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆದ ಭಾರತೀಯ ಚಿತ್ರಗಳು

ಸಾರಾಂಶ

2021ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ವೀಕ್ಷಣೆ, ಬಾಕ್ಸ್ ಆಫೀಸ್ ಕಲೆಕ್ಷನ್‌ ಮತ್ತು ವೀಕ್ಷಕರ ಬೆಸ್ಟ್‌ ವಿಮರ್ಶೆ ಪಡೆದುಕೊಂಡ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ....  

ಕೊರೋನಾ ಲಾಕ್‌ಡೌನ್‌ (Covid19) ಅಂತ ಅರ್ಧ ವರ್ಷ ಚಿತ್ರಮಂದಿರಗಳು ಬಂದ್ ಆಗಿದ್ದವು. ಈ ವೇಳೆ ನಿರ್ಮಾಪಕರು ಯಾವ ಟೆನ್ಷನ್ ಇಲ್ಲದೆ ಸಿನಿಮಾವನ್ನು ಓಟಿಟಿಯಲ್ಲಿ (OTT) ಬಿಡುಗಡೆ ಮಾಡಿದ್ದರೂ, ಇನ್ನೂ ಕೆಲವರು ಚಿತ್ರಮಂದಿಗಳೇ ಬೇಕು ಎಂದು ಕಾದರು. ಈ  ಬೇಕು ಬೇಡ ನಡುವೆ 5 ಸಿನಿಮಾ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿವೆ, ಜನರಿಗೆ ಮನೋರಂಜನೆ ಜೊತೆ ಒಳ್ಳೆಯ ಸಂದೇಶ ಸಾರುವ ಕೆಲಸ ಮಾಡಿದೆ. ಸಿನಿ ಪ್ರೇಕ್ಷಕರು ಈ ಚಿತ್ರಗಳು ಬಗ್ಗೆ ಗೂಗಲ್‌ನಲ್ಲಿ ಹೆಚ್ಚು ಗೂಗಲ್ ಮಾಡಿದ್ದಾರೆ.

1. ಜೈ ಭೀಮ್ (Jai Bhim)
ಕಾಲಿವುಡ್ (Kollywood) ಸಿಂಪಲ್ ಸ್ಟಾರ್ ಸೂರ್ಯ (Suriya) ನಟಿಸಿರುವ ಸಿನಿಮಾ ಜೈ ಭೀಮ್. ಸೂರ್ಯ ಮತ್ತು ಜೋತಿಕಾ (Jyothika) ಇಬ್ಬರೂ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು  ಜ್ಞಾನವೇಲ್ ನಿರ್ದೇಶನ ಮಾಡಿದ್ದಾರೆ. ಟ್ರೈಬಲ್ ಕಮ್ಯೂನಿಟಿ (Tribal Community) ಉಳಿಸಿಕೊಳ್ಳಲು ವಕೀಲ ಸೂರ್ಯ ಎಷ್ಟೆಲ್ಲಾ ಕಷ್ಟ ಎದುರಿಸುತ್ತಾರೆ, ಎಂದು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ  ಭಾಷೆಗಳಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಸಿನಿಮಾ ಬಿಡುಗಡೆ ಆಗಿತ್ತು.  ಚಿತ್ರದಲ್ಲಿ ಪ್ರಕಾಶ್ ರಾಜ್, ರಾವ್ ರಮೇಶ್ ಸೇರಿದಂತೆ ಅನೇಕ ಸ್ಟಾರ್ ನಟರಿದ್ದಾರೆ. 

Jai Bhim Controversy: ನಟ ಸೂರ್ಯನ ಮನೆಗೆ ಸಶಸ್ತ್ರ ಪೊಲೀಸ್ ಭದ್ರತೆ

2. (ಶೇರ್ಷಾ) Shershaah
ವಿಷ್ಣು ವರ್ಧನ್ ನಿರ್ದೇಶನ ಮಾಡಿರುವ ಬಾಲಿವುಡ್ ಬಯೋಗ್ರಾಫಿಕಲ್ ಡ್ರಾಮ್ ಇದಾಗಿದ್ದು ಸಿದ್ಧಾರ್ಥ್ ಮಲೋತ್ಹ್ರಾ (Siddhartha Malothra) ಮತ್ತು ಕಿಯಾರ ಆಡ್ವಾಣಿ (Kiara advani) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಆರ್ಮಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ (Vikram Batra) ಅವರ ಜೀವನಧಾರಿತ ಚಿತ್ರವಿದು. 2 ಗಂಟೆ 20 ನಿಮಿಷ ಇರುವ ಈ ಸಿನಿಮಾ ಬಗ್ಗೆ ಸಾಕಷ್ಟು ನೆಟ್ಟಿಗರು ವಿಮರ್ಶೆ ಮಾಡಿದ್ದಾರೆ. ಕಾರ್ಗಿಲ್ ವಾರ್ (Kargil War) ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಿಗಿದ್ದರೆ ದಯವಿಟ್ಟು ಈ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದರು. 

Raataan Lambiyan song: 'ಶೇರ್ಷಾ' ಚಿತ್ರದ ಹಾಡಿಗೆ ಲಿಪ್ ಸಿಂಕ್ ಮಾಡಿದ ಆಫ್ರಿಕಾದ ಅಣ್ಣ-ತಂಗಿ

3. ರಾಧೆ(Radhe)
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ಮತ್ತು ದಿಶಾ ಪಟಾಣಿ (Disha Patani) ನಟಿಸಿರುವ ಸಿನಿಮಾ ರಾಧೆ. ಸಿಟಿಯಲ್ಲಿ ನಡೆಯುವ ಕ್ರಿಮಿನಲ್ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಸಲ್ಮಾನ್ ಖಾನ್ Undercover Cop ಆಗಿ ಕಾಣಿಸಿಕೊಂಡಿದ್ದಾರೆ.  ರಣದೀಪ್ (Randeep) ಮಲನ್ ಪಾತ್ರಕ್ಕೆ ಹೆಚ್ಚಿನ ಪ್ರಮುಖ್ಯತೆ ನೀಡಲಾಗಿದೆ. ಓಟಿಟಿಯಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾಗೆ ನಾಲ್ಕು ನಿರ್ಮಾಪಕರು. ಚಿತ್ರದ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು ಈ ಚಿತ್ರದ ಬಗ್ಗೆ ಜನರಿಗೆ ಸಿಕ್ಕಾಪಟ್ಟೆ ಕುತೂಹಲವಿತ್ತು. ಅದಕ್ಕೆ ಹೆಚ್ಚಿಗೆ ಸರ್ಚ್ ಮಾಡಿದ್ದಾರೆ.

ರಾಧೆ ಅಂಥಾ ಗ್ರೇಟ್ ಫಿಲ್ಮ್ ಏನಲ್ಲ: ಮಗನ ಸಿನಿಮಾ ಬಗ್ಗೆ ಹೀಗಂದ್ರು ಸಲ್ಮಾನ್ ಖಾನ್ ತಂದೆ

    4. (ಬೆಲ್ ಬಾಟಮ್)Bell Bottom
    ಜಯತೀರ್ಥ ನಿರ್ದೇಶನ ಮಾಡಿ, ಸಂತೋಷ್ ಕುಮಾರ್ ನಿರ್ಮಾಣ ಮಾಡಿರುವ ಬೆಲ್ ಬಾಟಲ್ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ (Akshay Kumar) ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ (Romantic thriller) ಸಿನಿಮಾ ಆಗಿದ್ದು, ಕನ್ನಡದ ಬೆಲ್ ಬಾಟಮ್ ಚಿತ್ರದ ರಿಮೇಕ್. ಮಕ್ಕಳ ಶಾಲೆ (School) ಉಳಿಸುವುದಕ್ಕೆ ಏನೆಲ್ಲಾ ಪ್ಲಾನ್ ಮಾಡುತ್ತಾರೆ, ಡಿಟೆಕ್ಟಿವ್ ಕೆಲಸ ಮಾಡುವ ದಿವಾಕರ್ ತಂದೆ ಹಿಂದೆ ಯಾರೆಲ್ಲಾ ಇದ್ದಾರೆ, ಎಂದು ಸಿನಿಮಾವನ್ನು ಸಾಗಿಸಿಕೊಂಡು ಹೋಗುತ್ತಾ ಒಳ್ಳೆಯ ಸಂದೇಶ ಸಾರುತ್ತಾರೆ. 

    5. Eternals
    ಹಾಲಿವುಡ್ ಜನಪ್ರಿಯ ಮಾರ್ವಲ್ ಕಾಮಿಕ್ (Marvel Comic) ಆಧಾರಿತ  ಸಿನಿಮಾವೇ ಎಟರ್ನಲ್ಸ್‌. ಮಾರ್ವೆಲ್ ಸಿನಿಮ್ಯಾಟಿಕ್ ಯ್ಯೂನಿವರ್ಸ್‌ ಮತ್ತು ಮಾರ್ವಲ್ ಸ್ಟುಡಿಯೋ ನಿರ್ಮಾಣ ಮಾಡಿರುವ 25ನೇ ಸಿನಿಮಾ ಇದಾಗಿದ್ದು, ಏಂಜಲೀನಾ ಜೋಲೀ, ರಿಚರ್ಡ್ ಮ್ಯಾಡೆನ್, ಕುಮೈಲ್ ನಂಜಿಯಾನಿ, ಲಾರೆನ್ ರಿಡ್ಲೋಫ್, ಬ್ರಿಯಾನ್ ಟೈರಿ ಹೆನ್ರಿ, ಸಲ್ಮಾ ಹಯೆಕ್ ಮತ್ತು ಕಿಟ್ ಹ್ಯಾರಿಂಗ್ಟನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
    ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?