'ಮಹಾನಟಿ'ಗೆ ಬಂದ ನಟ ರಿಷಬ್​ ಶೆಟ್ಟಿ: ಯಶಸ್ಸು, ಕೀರ್ತಿ, ಸಕ್ಸಸ್​ ರೇಟ್ ಕುರಿತು ಮಾತುಕತೆ...

Published : Jun 16, 2024, 03:14 PM ISTUpdated : Jun 16, 2024, 03:16 PM IST
'ಮಹಾನಟಿ'ಗೆ ಬಂದ ನಟ ರಿಷಬ್​ ಶೆಟ್ಟಿ: ಯಶಸ್ಸು, ಕೀರ್ತಿ, ಸಕ್ಸಸ್​ ರೇಟ್ ಕುರಿತು ಮಾತುಕತೆ...

ಸಾರಾಂಶ

ಮಹಾನಟಿ ರಿಯಾಲಿಟಿ ಷೋನಲ್ಲಿ ನಟ ರಿಷಬ್​ ಶೆಟ್ಟಿ ಅತಿಥಿಯಾಗಿ ಆಗಮಿಸಿದ್ದು, ಈ ಸಂದರ್ಭದಲ್ಲಿ ಅವರು ಮಾತನಾಡಿದ್ದೇನು?  

ಜೀ ಕನ್ನಡ ವಾಹಿನಿಯಲ್ಲಿ ಕೆಲ ವಾರಗಳಿಂದ ಪ್ರಸಾರ ಆಗ್ತಿರೋ ಮಹಾನಟಿ ಡ್ಯಾನ್ಸ್​ ರಿಯಾಲಿಟಿ ಷೋನಲ್ಲಿ ಕಾಂತಾರ ನಟ ರಿಷಬ್​ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತೀರ್ಪುಗಾರರು ಮತ್ತು ನಟನ ಮಧ್ಯೆ ಯಶಸ್ಸು, ಕೀರ್ತಿ, ಸಕ್ಸಸ್​ ರೇಟ್ ಕುರಿತು ಒಂದಿಷ್ಟು ಮಾತುಕತೆ ನಡೆದಿದೆ. ಅಷ್ಟಕ್ಕೂ ನಟ ಈ ಷೋನಲ್ಲಿ ಕಾಣಿಸಿಕೊಳ್ಳಲು ಕಾರಣ, ಮೊನ್ನೆ ಬಿಡುಗಡೆಯಾಗಿರುವ ಶಿವಮ್ಮ ಸಿನಿಮಾ ಕುರಿತು ಪ್ರಚಾರಕ್ಕಾಗಿ. ಖುದ್ದು ಬರಬೇಕಿದ್ದ ಅವರು, ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ್ದಾರೆ. ತೀರ್ಪುಗಾರರಲ್ಲಿ ಒಬ್ಬರಾಗಿರುವ ಖ್ಯಾತ ನಿರ್ದೇಶಕ ತರುಣ್​ ಸುಧೀರ್ ಅವರು ರಿಷಬ್​ ಶೆಟ್ಟಿಯವರ ಗುಣಗಾನ ಮಾಡುತ್ತಾ 100 ಪರ್ಸೆಂಟ್​ ಸಕ್ಸಸ್​ ರೇಟ್​ ಇರುವ ತಾರೆ ಎಂದು ಬಣ್ಣಿಸಿದ್ದಾರೆ.

ಇನ್ನು ಶಿವಮ್ಮ ಚಿತ್ರದ ಕುರಿತು ಹೇಳುವುದಾದರೆ, ‘ರಿಷಬ್​ ಶೆಟ್ಟಿ ಫಿಲ್ಮ್ಸ್’ ಮೂಲಕ ಅವರು ‘ಶಿವಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರ ಮೊನ್ನೆ ಜೂನ್​ 14ರಂದು ಬಿಡುಗಡೆಯಾಗಿದೆ. . ಈ ಸಿನಿಮಾ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ಪ್ರಪಂಚದ 17ಕ್ಕೂ ಅಧಿಕ ಫಿಲ್ಮ್​ ಫೆಸ್ಟ್​ಗಳಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೇ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇದರ ಕುರಿತು ಈ ಹಿಂದೆ ಹೇಳಿದ್ದ ರಿಷಬ್​ ಶೆಟ್ಟಿಯವರು, ‘ ಸಿನಿಮಾ ನಿರ್ದೇಶಕ ಜೈಶಂಕರ್ ಅವರು ‘ಶಿವಮ್ಮ’ ಚಿತ್ರದ ಕಥೆ ಬಗ್ಗೆ ಹೇಳಿದರು. ಅದು ನನಗೆ ಇಷ್ಟವಾಯ್ತು. ನಿರ್ಮಾಣ ಶುರು ಮಾಡಿದೆವು. ಕೋವಿಡ್​ ಬರುವುದಕ್ಕೂ ಮುನ್ನ ಆರಂಭವಾದ ಸಿನಿಮಾ ಇದು. ಈ ಸಿನಿಮಾದಲ್ಲಿ ಅಭಿನಯಿಸಿರುವ ಶಿವಮ್ಮ ಪಾತ್ರಧಾರಿ ಶರಣಮ್ಮ ಚಟ್ಟಿ ಅವರು ಉತ್ತರ ಕರ್ನಾಟಕದ ಯರೇಹಂಚಿನಾಳ ಊರಿನವರು. ಜನರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂದಿದ್ದರು. ಅದರಂತೆ ಈ ಚಿತ್ರ ಹಲವರ ಗಮನ ಸೆಳೆಯುತ್ತಿದೆ.

ಕಿರುತೆರೆ ಕಲಾವಿದರ ಜೊತೆ ಮೈಚಳಿ ಬಿಟ್ಟು ರೊಮ್ಯಾನ್ಸ್ ಮಾಡಿದ ಮಹಾನಟಿಯರು: ಉಫ್​ ಎಂದ ಫ್ಯಾನ್ಸ್​

ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ,  ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಶಿವಮ್ಮನ ಬದುಕು ಯಾವೆಲ್ಲಾ ರೂಪು ಪಡೆಯುವುದು, ಬದುಕಿನ ವಿವಿಧ ಆಯಾಮಗಳ ಒಳಸುಳಿಗೆ ಶಿವಮ್ಮ ಹೇಗೆ ಸಿಲುಕುತ್ತಾರೆ, ಕೊನೆಗೆ ಏನಾಗುತ್ತದೆ ಎನ್ನುವುದಾಗಿದೆ.  ಕುಟುಂಬದ ಹೊಣೆ ಹೊತ್ತ ಶಿವಮ್ಮ, ಎಲ್ಲೆಡೆ ಸಾಲಸೋಲ ಮಾಡಿ  ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡುತ್ತಾಳೆ. ಅಲ್ಲಿಂದಲೇ ಸಮಸ್ಯೆ ಎದುರಾಗುತ್ತದೆ. ಕೊನೆಗೆ  ನೆಟ್​ವರ್ಕ್​ ಮಾರ್ಕೆಟಿಂಗ್ ವ್ಯಾಪಾರ ಮಾಡಿ ಕೈಸುಟ್ಟಿಕೊಳ್ಳುತ್ತಾಳೆ.  ಒಂದು ಪೌಡರ್ ಮಾಡಿ ಇದು ಎಲ್ಲ ರೋಗಕ್ಕೂ ಔಷಧ ಎಂದು ಹಂಚುತ್ತಾಳೆ. ಇದರ ನಡುವೆಯೇ,  ಮಗಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿ ಮತ್ತೊಂದು ತಲೆನೋವು ಶುರುವಾಗುತ್ತದೆ. ಹೀಗೆ ಶಿವಮ್ಮನ ಸುತ್ತ ಈ ಚಿತ್ರ ಸುತ್ತತ್ತದೆ. 

‘ನಾನು ಈ ಸಿನಿಮಾ ನೋಡಿದ್ದೇನೆ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರಕ್ಕೆ ಸಿಕ್ಕ ಪ್ರಶಂಸೆ ನೋಡಿ ಖುಷಿಯಾಯಿತು. ಈಗ ಇದನ್ನು ಜನರ ಮುಂದೆ ತರುತ್ತಿದ್ದೇವೆ ಎಂದು ರಿಷಬ್​ ಹೇಳಿದ್ದರು. ಜೂನ್ 14ರಂದು ಕರ್ನಾಟಕದಾದ್ಯಂತ ಸಿನಿಮಾ ಬಿಡುಗಡೆ ಆಗಿದೆ.  ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಂಡಿವೆ.    ಸಿನಿಮಾವನ್ನು ಜಯಶಂಕರ್ ಆರ್ಯರ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶರಣಮ್ಮ ಚಟ್ಟಿ ಎಂಬುವವರು ಟೈಟಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚೆನ್ನಮ್ಮ ಅಬ್ಬೆಗೆರೆ, ಶಿವು ಅಬ್ಬೆಗೆರೆ, ಶ್ರುತಿ ಕೊಂಡೇನಹಳ್ಳಿ, ಚೆನ್ನಪ್ಪ ಹನ್ಸಿ, ಶಿವಾನಂದ್ ಸಾದರ್ ಚಿತ್ರದ ತಾರಾಗಣದಲ್ಲಿದ್ದಾರೆ.  

ನಕಲಿ ರಮೇಶ್​, ಪ್ರೇಮಾ, ನಿಶ್ವಿಕಾರನ್ನು ನೋಡಿ ಅಸಲಿ ನಟರು ಸುಸ್ತೋ ಸುಸ್ತು- ನಕ್ಕು ನಲಿದಾಡಿದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?