ವೀರ್ ಸಾವರ್ಕರ್ ಬಯೋಪಿಕ್; ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ

Published : Mar 23, 2022, 04:31 PM IST
ವೀರ್ ಸಾವರ್ಕರ್ ಬಯೋಪಿಕ್; ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಬಯೋಪಿಕ್ ಘೋಷಣೆಯಾಗಿದೆ. ಸಾವರ್ಕರ್ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ರಣದೀಪ್ ಹೂಡ ಕಾಣಿಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಮಹೇಶ್ ಮಂಜ್ರೇಕರ್ ಆಕ್ಷನ್ ಹೇಳುತ್ತಿದ್ದಾರೆ. 

ಬಾಲಿವುಡ್ ನಲ್ಲಿ ಸಾಕಷ್ಟು ಬಯೋಪಿಕ್ ಗಳು ನಿರ್ಮಾಣವಾಗುತ್ತಿವೆ. ಈಗಾಗಲೇ ಅನೇಕ ಬಯೋಪಿಕ್ ಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಹ ಪಡೆದುಕೊಂಡಿವೆ. ಕ್ರೀಡೆ, ಸಿನಿಮಾ, ಸ್ವಾತಂತ್ರ ಹೋರಾಟಗಾರರು, ಅಪ್ರತಿಮ ಸಾಧನೆ ಮಾಡಿದ ಅನೇಕ ವ್ಯಕ್ತಿಗಳ ಬಯೋಪಿಕ್ ಈಗಾಗಲೇ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿವೆ. ಇದೀಗ ಬಾಲಿವುಡ್ ನಲ್ಲಿ ಮತ್ತೊಂದು ಬಯೋಪಿಕ್ ಅನೌನ್ಸ್ ಆಗಿದೆ. ಅದು ಮತ್ಯಾರು ಅಲ್ಲ ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಬಯೋಪಿಕ್(Veer Savarkar biopic). ವೀರ್ ಸಾವರ್ಕರ್ ಎಂದೇ ಜನಪ್ರಿಯರಾಗಿದ್ದಾರೆ.

ವಿಶೇಷ ಎಂದರೆ ಸಾವರ್ಕರ್ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ರಣದೀಪ್ ಹೂಡ(Randeep Hooda) ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಹೇಶ್ ಮಂಜ್ರೇಕರ್(Mahesh Manjrekar) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಹಾಗೆ ಚಿತ್ರಕ್ಕೆ ಸ್ವತಂತ್ರ ವೀರ್ ಸಾವರ್ಕರ್ ಎಂದು ಟೈಟಲ್ ಇಡಲಾಗಿದೆ. ಚಿತ್ರದ ಬಗ್ಗೆ ನಿರ್ದೇಶಕ ಮಹೇಶ್ ಮಂಜ್ರೇಕರ್, ನಟ ರಣದೀಪ್ ಹೂಡ ಮತ್ತು ನಿರ್ಮಾಪಕ ಮಾಹಿತಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿರುವ ನಟ ರಣದೀಪ್ ಹೂಡ, ಸಾವರ್ಕರ್ ಸಿನಿಮಾದ ಭಾಗವಾಗಿರುವುದಕ್ಕೆ ಕೃತಜ್ಞತೆ. ಚಿತ್ರದ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮಾಹಿತಿ ಶೇರ್ ಮಾಡಿರುವ ಸಿನಿಮಾ ವಿಶ್ಲೇಶಕ ತರಣ್ ಆದರ್ಶ್, ರಣದೀಪ್ ಹೂಡ ಸ್ವತಂತ್ರ ವೀರ್ ಸಾವರ್ಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಮಂಜ್ರೇಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ ಸಿಂಗ್ ಮತ್ತು ಆನಂದ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಎಂದು ಬಹಿರಂಗ ಪಡಿಸಿದ್ದಾರೆ.

10 ವರ್ಷಗಳಿಂದ ಲೇಖಕಿಗೆ ಕಿರುಕುಳ; ನಟ ರಣದೀಪ್ ಹೂಡಾ ವಿರುದ್ಧ ದೂರು, 10 ಕೋಟಿ ಪರಿಹಾರ ಬೇಡಿಕೆ

ಈ ಬಗ್ಗೆ ಆಂಗ್ಲ ಮಾಧ್ಯಮದ ಜೊತೆ ಮಾತನಾಡಿದ ನಟ ರಣದೀಪ್, ನಮಗೆ ಸ್ವಾತಂತ್ರ ದೊರಕಿಸಿಕೊಡುವಲ್ಲಿ ಅನೇಕ ವೀರರು ಕಾರಣರಾಗಿದ್ದಾರೆ. ಆದರೆ ಅವರಲ್ಲಿ ಎಲ್ಲರು ಅಷ್ಟಾಗಿ ಗುರುತಿಸಲ್ಪಟ್ಟಿಲ್ಲ. ಆದರೆ ಸಾವರ್ಕರ್ ಅವರ ಬಗ್ಗೆ ಸಾಕಷ್ಟು ತಪ್ಪಾದ ಚರ್ಚೆ ನಡೆಯುತ್ತಿದೆ. ಅವರ ಬಗ್ಗೆ ಜನರಿಗೆ ಹೇಳಬೇಕು. ತುಂಬಾ ಪ್ರಭಾವಶಾಲಿ ವ್ಯಕ್ತಿ ಎಂದು ಹೇಳಿದ್ದಾರೆ. ಸಾವರ್ಕರ್ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರಾಗಿದ್ದರು. ಹಿಂದೂ ರಾಷ್ಟ್ರೀಯವಾದಿ, ರಾಜಕೀಯ ಸಿದ್ಧಾಂತದ ಅಗ್ರಗಣ್ಯ ಪ್ರವರ್ತಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಕ್ರಾಂತಿಕಾರಿ ಗ್ರೂಪ್ ಇಂಡಿಯಾ ಹೌಸ್ ಜೊತೆಗಿನ ಅವರ ಸಂಪರ್ಕಕ್ಕಾಗಿ ಅವರನ್ನು 1910ರಲ್ಲಿ ಬಂಧಿಸಲಾಯಿತು. ಬಳಿಕ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಜೈಲಿನಲ್ಲಿ ಬಂಧಿಸಲಾಯಿತು. ನಂತರ ರತ್ನಗಿರಿಗೆ ಸ್ಥಳಾಂತರಿಸಲಾಯಿತು ಈ ಎಲ್ಲಾ ಘಟನೆಗಳು ಬಯೋಪಿಕ್ ನಲ್ಲಿ ಇರಲಿದೆ.

ಅಂದಹಾಗೆ ಜೂನ್ ತಿಂಗಳಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಲಂಡನ್, ಮಹಾರಾಷ್ಟ್ರ, ಅಂಡಮಾನ್ ಮತ್ತು ನಿಕೋಬಾರ್ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಗುಡ್‌ನ್ಯೂಸ್‌ : ಮದ್ವೆಯಾಗದ ರಣದೀಪ್‌ ಹೂಡಾ ತಂದೆಯಾಗುತ್ತಿದ್ದಾರೆ!

ನಟ ರಣದೀಪ್ ಹೂಡ ಕೊನೆಯದಾಗಿ ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಬಯೋಪಿಕ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!