ಮಹಾಭಾರತದಲ್ಲಿ ನಟಿಸಿದ್ದ ರಿಯಲ್‌ ತಂದೆಯನ್ನೇ ತನ್ನ ಮದುವೆಗೆ ಆಹ್ವಾನಿಸದ ಮಗ! ಯಾರಿದು?

Published : Feb 16, 2025, 01:52 PM ISTUpdated : Feb 16, 2025, 02:43 PM IST
ಮಹಾಭಾರತದಲ್ಲಿ ನಟಿಸಿದ್ದ ರಿಯಲ್‌ ತಂದೆಯನ್ನೇ ತನ್ನ ಮದುವೆಗೆ ಆಹ್ವಾನಿಸದ ಮಗ! ಯಾರಿದು?

ಸಾರಾಂಶ

ಮಹಾಭಾರತʼ ಧಾರಾವಾಹಿಯಲ್ಲಿ ನಟಿಸಿದ್ದ ತಂದೆಯನ್ನು ತನ್ನ ಅಸಲಿ ಮದುವೆಗೆ ಮಗ ಕರೆದಿಲ್ಲ. ಹೌದು, ನಟ ಪ್ರತೀಕ್‌ ಬಬ್ಬರ್‌ ಅವರು ತಂದೆ ರಾಜ್‌ ಬಬ್ಬರ್‌ರನ್ನು ಮದುವೆಗೆ ಕರೆದಿಲ್ಲ. ಇದಕ್ಕೆ ಕಾರಣ ಏನು?

ಕೆಲ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್‌ ನಟ ಪ್ರತೀಕ್‌ ಬಬ್ಬರ್‌ ಅವರು ತಮ್ಮ ಮದುವೆಗೆ ತಂದೆಯನ್ನೇ ಆಹ್ವಾನಿಸಿಲ್ಲ. ಮೂರು ಬಾರಿ ಲೋಕಸಭೆ ಸದಸ್ಯ, ಎರಡು ಬಾರಿ ರಾಜ್ಯಸಭಾ ಸದಸ್ಯ ಆಗಿರುವ ರಾಜಕಾರಣಿ, ಖ್ಯಾತ ನಟ ರಾಜ್‌ ಬಬ್ಬರ್‌ ಅವರ ಮಗನೇ ಪ್ರತೀಕ್‌ ಬಬ್ಬರ್.‌ ಮದುವೆಗೆ ತಮ್ಮನ್ನು ಆಹ್ವಾನಿಸದೆ ಇರೋ ಬಗ್ಗೆ ಅವರ ಸಹೋದರಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

ರಾಜ್‌ ಬಬ್ಬರ್‌ಗೆ ಎರಡು ಮದುವೆ!
ಮಹಾಭಾರತ ಧಾರಾವಾಹಿ ಸೇರಿದಂತೆ ಹಿಂದಿಯಲ್ಲಿ ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ರಾಜ್‌ ಬಬ್ಬರ್‌ ದಿಗ್ಗಜ ಕಲಾವಿದರು. ‘ಮಹಾಭಾರತ’ ಧಾರಾವಾಹಿಯಲ್ಲಿ ಅವರು ಭರತನ ಪಾತ್ರ ಮಾಡಿದ್ದರು. ರಾಜ್‌ ಬಬ್ಬರ್‌ ಅವರು ಮೊದಲು ನಾದಿರಾ ಜಹೀರ್‌ ಅವರನ್ನು ಮದುವೆಯಾದರು. ಈ ಜೋಡಿಗೆ ಆರ್ಯ ಬಬ್ಬರ್‌, ಜೂಹಿ ಬಬ್ಬರ್‌ ಎಂಬ ಮಕ್ಕಳಿದ್ದಾರೆ. ನಾದಿರಾ ಕೂಡ ರಂಗಭೂಮಿ ಕಲಾವಿದೆ, ನಿರ್ದೇಶಕಿಯೂ ಹೌದು. ಇದಾದ ಬಳಿಕ ಅವರು ನಟಿ ಸ್ಮಿತಾ ಪಾಟೀಲ್‌ರನ್ನು ಮದುವೆಯಾದರು. ಸ್ಮಿತಾ ಹಾಗೂ ರಾಜ್‌ಗೆ ಪ್ರತೀಕ್‌ ಬಬ್ಬರ್‌ ಎಂಬ ಮಗನಿದ್ದಾರೆ. ಸ್ಮಿತಾ ಅವರಿಗೆ ಅನಾರೋಗ್ಯ ಕಾಡಿತ್ತು. ಇದರಿಂದಾಗಿ ಅವರು ಮೂವತ್ತೊಂದನೇ ವಯಸ್ಸಿಗೆ ನಿಧನರಾದರು. ತಾಯಿ ನಿಧನದ ಬಳಿಕ ಪ್ರತೀಕ್‌ ಅವರು ಅಜ್ಜ-ಅಜ್ಜಿ ಆರೈಕೆಯಲ್ಲಿ ಬೆಳೆದರು. ಪ್ರತೀಕ್‌ ಬಬ್ಬರ್‌ಗೆ ಈಗ 38 ವರ್ಷ ವಯಸ್ಸು. 

ರಾಜ್ ಬಬ್ಬರ್‌ಗೆ 2 ವರ್ಷ ಜೈಲು ಶಿಕ್ಷೆ; 1996ರ ಪ್ರಕರಣಕ್ಕೆ ಈಗ ತೀರ್ಪು

ಸಿನಿಮಾಗಳಲ್ಲಿ ಪ್ರತೀಕ್‌ ನಟನೆ!
ಆರಂಭದಲ್ಲಿ ಜಾಹೀರಾತು ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರತೀಕ್‌ ಅವರು ಆಮಿರ್‌ ಖಾನ್‌ ನಿರ್ಮಾಣದ ʼಜಾನೇ ತು ಯಾ ಜಾನೇ ನಾʼ ಸಿನಿಮಾದಲ್ಲಿ ನಟಿಸಿದರು. ಅವರ ನಟನೆಗೆ 54ನೇ ಫಿಲ್ಮ್‌ಫೇರ್‌ ಅವಾರ್ಡ್ಸ್‌ನಲ್ಲಿ ಸ್ಪೆಷಲ್‌ ಜ್ಯೂರಿ ಪ್ರಶಸ್ತಿ ಸಿಕ್ಕಿತು. ʼಧೋಬಿ ಘಾಟ್ʼ‌, ʼಆರಕ್ಷನ್ʼ‌, ʼಮೈ ಫ್ರೆಂಡ್‌ ಪಿಂಟೋʼ, ʼಏಕ್‌ ದೀವಾನಾʼ, ʼಇಸಾಕ್ʼ‌ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ತಂದೆ ಜೊತೆಗೆ ಸಂಬಂಧ ಹೇಗಿದೆ?
ಸಂದರ್ಶನವೊಂದರಲ್ಲಿ ತಂದೆ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದ ಪ್ರತೀಕ್‌ ಅವರು "ನನ್ನ ತಂದೆ ಜೊತೆಗೆ ಬೇರೆಯದೇ ಆದ ಸಂಬಂಧವಿದೆ. ರಾಜ್‌ ಅವರ ಕೆಲಸ ಹಾಗೂ ಇನ್ನೊಂದು ಕುಟುಂಬದ ಜೊತೆಗೆ ಬ್ಯುಸಿಯಿದ್ದಾರೆ" ಎಂದು ಹೇಳಿದ್ದರು. 

ಹೆಂಡತಿ ಮಕ್ಕಳಿದ್ದರೂ ಸ್ಮಿತಾ ಪಾಟೀಲ್‌ನಿಂದ ದೂರವಾಗಲಿಲ್ಲ ರಾಜ್‌ ಬಬ್ಬರ್‌!

ಮರು ಮದುವೆ! 
2011ರಲ್ಲಿ ʼಏಕ್‌ ದೀವಾನಾ ಥಾʼ ಸಿನಿಮಾ ವೇಳೆ ನಟಿ ಆಮಿ ಜಾಕ್ಸನ್‌ ಜೊತೆ ಡೇಟ್‌ ಮಾಡಲು ಆರಂಭಿಸಿದ್ದರು. ಈ ಪ್ರೀತಿ ಬಹುಬೇಗ ಮುರಿಯಿತು. ಇನ್ನು ನಿರ್ಮಾಪಕ ಸಾನ್ಯಾ ಸಾಗರ್‌ ಜೊತೆಗೆ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪ್ರತೀಕ್‌ ಅವರು 2020ರಲ್ಲಿ ಅವರಿಂದ ದೂರ ಆದರು, 2023ರಲ್ಲಿ ವಿಚ್ಛೇದನ ಘೋಷಿಸಿದರು. 2025 ರಲ್ಲಿ ಇವರು ಪ್ರಿಯಾ ಬ್ಯಾನರ್ಜಿ ಜೊತೆಗೆ ಮದುವೆಯಾದರು. 

2ನೇ ಪತ್ನಿಯ ಮರಣದ ನಂತರ ರೇಖಾ ಜೊತೆ ಸಂಬಂಧದಲ್ಲಿದ್ದ ರಾಜ್ ಬಬ್ಬರ್ !

ಸಹೋದರಿ ಏನಂದ್ರು?
ಪ್ರತೀಕ್‌ ಅವರ ಮಲಸಹೋದರಿ ಮಾತನಾಡಿ, “ಏನೇ ಆದರೂ ಪ್ರತೀಕ್‌ ನಮ್ಮ ಸಹೋದರ. ನಮಗೆ ಆಹ್ವಾನ ಕೊಡದೆ ಇರೋದು ಬೇಸರ ತಂದಿದೆ. ಪ್ರತೀಕ್‌ ಸುತ್ತ ಇರುವ ಜನರು ಅವನ ತಲೆ ಹಾಳು ಮಾಡುತ್ತಿದ್ದಾರೆ. ಅವರ ಹೆಸರನ್ನು ತಗೊಳ್ಳಲು ನನಗೆ ಇಷ್ಟ ಇಲ್ಲ. ಪ್ರತೀಕ್‌ ನಮ್ಮ ಸಹೋದರ, ನಾವೆಲ್ಲ ಒಂದೇ ತಂದೆ ಮಕ್ಕಳು ಎನ್ನೋದನ್ನು ಬದಲಾಯಿಸಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?