ತಾಲೀಬಾನ್ ಅಟ್ಟಹಾಸ: ಅಫ್ಘಾನ್ ಕ್ರಿಕೆಟರ್ ಜೊತೆ ಬ್ರೇಕಪ್ ಎಂದ ನಟಿ

Suvarna News   | Asianet News
Published : Aug 24, 2021, 09:32 AM ISTUpdated : Aug 24, 2021, 09:38 AM IST
ತಾಲೀಬಾನ್ ಅಟ್ಟಹಾಸ: ಅಫ್ಘಾನ್ ಕ್ರಿಕೆಟರ್ ಜೊತೆ ಬ್ರೇಕಪ್ ಎಂದ ನಟಿ

ಸಾರಾಂಶ

ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಉಗ್ರರ ದಾಳಿ ಅಫ್ಘಾನ್ ಗೆಳೆಯನ ಜೊತೆ ಬ್ರೇಕಪ್ ಬಗ್ಗೆ ನಟಿ ಮಾತು

ಅಫ್ಘಾನಿಸ್ತಾನ ತಾಲೀಬಾನ್ ಉಗ್ರರ ಪಾಲಾಗಿದೆ. ಈಗಾಗಲೇ ಕಾಬೂಲ್ ವಿಮಾನ ನಿಲ್ದಾಣವನ್ನೂ ವಶಕ್ಕೆ ಪಡೆಯುವ ಹುನ್ನಾರ ನಡೆದಿದೆ. ಅಫ್ಘಾನ್‌ನಲ್ಲಿ ಬದುಕುತ್ತಿದ್ದ ಮಹಿಳೆ, ಮಕ್ಕಳು ಸೇರಿದಂತೆ ಎಲ್ಲ ಜನ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಹೆಣ್ಣಿನ ಪಾಲಿಗಂತೂ ಅಕ್ಷರಶಃ ಅಫ್ಘಾನ್ ನರಕವಾಗಿ ಹೋಗಿದೆ. ಹೆಣ್ಮಕ್ಕಳು ಮರಾಟ, ಬಾಲ್ಯ ವಿವಾಹ ಬರೀ ಭೋಗದ ವಸ್ತುವಾಗಿ ಹೋಗಿದ್ದಾರೆ. ಇಂಥಹ ಸ್ಥಳಕ್ಕೆ ಯಾರಾದರೂ ತಮ್ಮ ಮಗಳನ್ನು ಮದುವೆ ಮಾಡಿ ಕೊಡುತ್ತಾರಾ ?

ಹೌದು. ಖ್ಯಾತ ನಟಿಯೊಬ್ಬರ ವಿವಾಹ ಅಫ್ಘಾನಿಸ್ತಾನದ ಯುವಕನೊಂದಿಗೆ ನಿಶ್ಚಯವಾಗಿತ್ತು. ಆದರೆ ಈಗ ಆ ವಿವಾಹ ನಡೆಯುವ ಸಾಧ್ಯತೆ ಇಲ್ಲ ಎಂದಿದ್ದಾರೆ ನಟಿ. ಅದಕ್ಕೆ ಕಾರಣ ತಾಲೀಬಾನ್ ಉಗ್ರರ ಅಟ್ಟಹಾಸ, ನರಕವಾಗಿ ಬದಲಾಗಿರುವ ಅಫ್ಘಾನಿಸ್ತಾನ.

ಗೋವಾದಲ್ಲಿ ಶವವಾಗಿ ಪತ್ತೆಯಾದ ರಷ್ಯಾದ 'ಕಾಂಚನಾ' ನಟಿ

ನಟಿ ಅರ್ಶಿ ಖಾನ್ ಅವರ ವಿವಾಹ ಅಫ್ಘಾನಿಸ್ತಾನ ಕ್ರಿಕೆಟಿಗನ ಜೊತೆ ನಿಶ್ಚಯವಾಗಿತ್ತು. ಅರ್ಶಿ ಅವರ ಪೋಷಕರೇ ಮಗಳಿಗಾಗಿ ಈ ವರನನ್ನು ಹುಡುಕಿದ್ದರು. ಆದರೆ ಈಗ ಅಫ್ಘಾನಿಸ್ತಾನವನ್ನು ತಾಲೀಬಾನಿಗಳು ವಶಪಡಿಸಿದ್ದು, ತಮ್ಮ ವಿವಾಹ ರದ್ದಾಗುವ ಸಾಧ್ಯತೆ ಇದೆ ಎಂದು ಭಯ ವ್ಯಕ್ತಪಡಿಸಿದ್ದಾರೆ ನಟಿ. ಅಫ್ಘಾನಿಸ್ತಾನ ಕ್ರಿಕೆಟಿಗನ ಜೊತೆ ಅಕ್ಟೋಬರ್‌ನಲ್ಲಿ ನನ್ನ ನಿಶ್ಚಿತಾರ್ಥ ಆಗುವುದಿತ್ತು. ನನ್ನ ತಂದೆಯೇ ವರನನ್ನು ಆರಿಸಿದ್ದರು. ಆದರೆ ಅಫ್ಘಾನ್ ತಾಲೀಬಾನ್ ಉಗ್ರರು ವಶಪಡಿಸಿದ ಹಿನ್ನೆಲೆ ನಮ್ಮ ಪ್ರೀತಿಗೆ ನಾವು ಕೊನೆ ಹಾಡಬೇಕಿದೆ ಎಂದಿದ್ದಾರೆ.

ಸ್ಪಷ್ಟವಾಗಿ ತಮ್ಮ ಎರೇಂಜ್ಡ್ ಸಂಬಂದದ ಬಗ್ಗೆ ಮಾತನಾಡಿ, ಆರ್ಶಿ ತನ್ನ ಭಾವೀ ನಿಶ್ಚಿತ ವರನೊಂದಿಗೆ ಸಂಪರ್ಕದಲ್ಲಿದ್ದರೂ, ತನ್ನ ಕುಟುಂಬವು ನಿಶ್ಚಿತಾರ್ಥವನ್ನು ನಿಲ್ಲಿಸಬೇಕಾಗಬಹುದು ಎಂದು ಹೆದರುತ್ತಾಳೆ ಎಂದು ಉಲ್ಲೇಖಿಸಿದ್ದಾರೆ. ಅವನು ನನ್ನ ತಂದೆಯ ಸ್ನೇಹಿತನ ಮಗ. ನಾವು ಕೂಡ ಮಾತನಾಡುತ್ತಿದ್ದೇವೆ. ಸ್ನೇಹಿತರಂತೆ ಇದ್ದೆವು. ಆದರೆ ಈಗ ನನ್ನ ಪೋಷಕರು ನನಗೆ ಭಾರತೀಯ ವರನನ್ನು ಹುಡುಕುತ್ತಾರೆ ಎಂದಿದ್ದಾರೆ.

ತನ್ನ ಕುಟುಂಬದ ಮೂಲ ಅಫ್ಘಾನಿಸ್ತಾನದಲ್ಲಿವೆ ಎಂದು ಆರ್ಶಿ ಹೇಳಿದ್ದಾರೆ. ನಾನು ಅಫ್ಘಾನಿ ಪಠಾಣ್, ಮತ್ತು ನನ್ನ ಕುಟುಂಬ ಯೂಸುಫ್‌ಜಾಯ್ ಜನಾಂಗಕ್ಕೆ ಸೇರಿದೆ. ನನ್ನ ಅಜ್ಜ ಅಫ್ಘಾನಿಸ್ತಾನದಿಂದ ವಲಸೆ ಬಂದಿದ್ದರು. ಭೋಪಾಲ್‌ನಲ್ಲಿ ಜೈಲರ್ ಆಗಿದ್ದರು. ನನ್ನ ಮೂಲ ಅಫ್ಘಾನಿಸ್ತಾನದಲ್ಲಿವೆ. ಆದರೆ ನಾನು ಭಾರತೀಯ ಪ್ರಜೆ ನನ್ನ ಪೋಷಕರು ಮತ್ತು ಅಜ್ಜಿಯರು ಭಾರತೀಯರು ಎಂದಿದ್ದಾರೆ.

ಆರ್ಶಿ 'ಬಿಗ್ ಬಾಸ್ 11' ನಲ್ಲಿ ಸ್ಪರ್ಧಿಯಾಗಿದ್ದರು. ಅದರ ಸೀಸನ್ 14 ರಲ್ಲಿ ಚಾಲೆಂಜರ್ ಆಗಿ ಕಾರ್ಯಕ್ರಮಕ್ಕೆ ಮರು ಪ್ರವೇಶ ಪಡೆದರು. 'ಸಾವಿತ್ರಿ ದೇವಿ ಕಾಲೇಜು ಮತ್ತು ಆಸ್ಪತ್ರೆ'ಯಂತಹ ಟಿವಿ ಸೀರಿಯಲ್ ಹೊರತಾಗಿ ಅವರು ಹಲವಾರು ರಿಯಾಲಿಟಿ ಶೋಗಳು ಮತ್ತು ವಿಡಿಯೋಗಳಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!