ಕೆಲ ತಿಂಗಳುಗಳಿಂದ ನಟರಾದ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿರುದ್ಧ ಗಾಸಿಪ್ಗಳು ಸುತ್ತಾಡುತ್ತಲೇ ಇವೆ. ಈಗ ನರೇಶ್ ಅವರು ಜಾಲತಾಣಿಗರ ವಿರುದ್ಧ ಆಕ್ರೋಶ ಹೊರಹಾಕಿದ್ದು ದೂರು ದಾಖಲಿಸಿದ್ದಾರೆ. ಏನಿದೆ ಅದರಲ್ಲಿ?
ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಆರೋಪ, ಪ್ರತ್ಯಾರೋಪ, ಗಾಸಿಪ್ಗಳು (Gissip) ಸಾಮಾನ್ಯ. ಅದರಲ್ಲಿಯೂ ಚಿತ್ರ ನಟ-ನಟಿಯರ ವಿಷಯಕ್ಕೆ ಬಂದಾಗಲಂತೂ ಗಾಸಿಪ್ಗಳ ಕಾರುಬಾರು ನಡೆದೇ ಇರುತ್ತದೆ. ಕೆಲವೊಮ್ಮೆ ಇವು ಆ ನಟಿ-ನಟಿಯರ ಖಾಸಗಿ ಬದುಕಿಗೂ ಧಕ್ಕೆಯಾಗುವುದು ಉಂಟು. ಆದರೆ ಸಾರ್ವಜನಿಕ ವ್ಯಕ್ತಿಗಳಿಗೆ ಇವು ಹೊಸತೇನಲ್ಲ. ಅದರ ಜೊತೆಗೆ ಬದುಕುವುದನ್ನು ಕಲಿಯುವ ಅನಿವಾರ್ಯತೆ ಉಂಟಾಗುತ್ತದೆ. ದಾಂಪತ್ಯ ಜೀವನದ ಕುರಿತ ವಿಷಯಗಳಲ್ಲಂತೂ ಚಿತ್ರತಾರೆಯರ ನಡುವೆ ಹಲವಾರು ವಿವಾದಗಳು ಸುತ್ತಾಡುತ್ತಲೇ ಇರುತ್ತವೆ. ಆದರೆ ಒಂದು ಹಂತ ಮೀರಿ ಹೋದರೆ ಅದನ್ನು ಸಹಿಸಿಕೊಳ್ಳುವುದು ಕಷ್ಟ. ಅದೇ ರೀತಿ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಸಂಬಂಧದ ಕುರಿತೂ ಆಗಿದೆ. ಇದಾಗಲೇ ಇವರ ವಿಷಯದಲ್ಲಿ ಕೆಲ ತಿಂಗಳುಗಳಿಂದ ಭಾರಿ ಸುದ್ದಿ ಹರಿದಾಡುತ್ತಿದೆ. ಇವರು ಹೋದಲ್ಲಿ, ಬಂದಲ್ಲಿ ಕ್ಯಾಮೆರಾ ಕಣ್ಣುಗಳು ಹಿಂದೆಯೇ ಹೋಗುತ್ತಿರುತ್ತವೆ.
ಇದೇ ಕಾರಣಕ್ಕೆ ಇದಾಗಲೇ ನರೇಶ್ (Naresh) ಅವರು ತಮ್ಮ ವಿರುದ್ಧ ಪ್ರಚಾರ ಮಾಡುತ್ತಿರುವವರ ಬಗ್ಗೆ ಇದಾಗಲೇ ಆಕ್ರೋಶ ಹೊರಹಾಕಿದ್ದರು. ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಇದಾಗಲೇ ಅವರು ಕೆಲವು ಮಾಧ್ಯಮಗಳು ಹಾಗೂ ಜನರ ವಿರುದ್ಧ ಕಿಡಿ ಕಾರಿದ್ದಾರೆ. ತಮ್ಮ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ವಿಧವಿಧ ರೀತಿಯ ಚಿತ್ರಗಳನ್ನು ಶೇರ್ ಮಾಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ ಎಂದು ದೂರಿದ್ದರು. ಹೋದಲ್ಲಿ, ಬಂದಲ್ಲಿ ತಮ್ಮ ಸಂಬಂಧದ ಕುರಿತು ಪ್ರಶ್ನೆ ಮಾಡುವವರ ಮೇಲೆ ಹರಿಹಾಯ್ದಿದ್ದಾರೆ. ತಮ್ಮ ಸಂಬಂಧದ ಕುರಿತು ಇಲ್ಲಸಲ್ಲದ್ದನ್ನು ಹೇಳಲಾಗುತ್ತಿದೆ ಎಂದು ಆರೋಪಿಸಿದ್ದ ನರೇಶ್, ಈ ಹಿಂದೆ ಕುಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಈ ಬಾಲಿವುಡ್ ನಟಿಯರ ಬೋಲ್ಡ್ ದೃಶ್ಯ ನೋಡಲಾಗದೇ ಕಣ್ಮುಚ್ಚಿಕೊಂಡ ನೆಟ್ಟಿಗರು!
ಇವರ ಆಕ್ರೋಶಕ್ಕೆ ಕಾರಣವಾಗಿದ್ದು, ನರೇಶ್ ಅವರ ಮಲ ತಂದೆ ನಟ ಕೃಷ್ಣ ಅವರು ನಿಧನರಾದ ಸಂದರ್ಭದಲ್ಲಿ ನಡೆದ ಸಂಗತಿ. ಅವರ ಅಂತಿಮ ದರ್ಶನಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh) ಹೋಗಿದ್ದಾಗ ಇವರಿಬ್ಬರೂ ಕಣ್ ಸನ್ನೆಯಲ್ಲೇ ಮಾತನಾಡುತ್ತಿದ್ದುದಾಗಿ ಫೋಟೋ ಹಾಕಿ ಟ್ರೋಲ್ (Troll) ಮಾಡಲಾಗಿತ್ತು. ಇದರ ವಿರುದ್ಧ ಸಿಡಿದೆದ್ದಿದ್ದ ನರೇಶ್ ಅವರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದದರು. ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಮಾಡಲಾಗುತ್ತಿದೆ ಎಮದು ತೆಲಂಗಾಣ (Telangana) ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದು ಇಲ್ಲಿಗೆ ಸುಮ್ಮನಾಗಲಿಲ್ಲ. ಜನರು ಒಂದು ಸಲ ಸಿಕ್ಕರೆ ಬಿಡುತ್ತಾರೆಯೆ? ಈಗಲೂ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್, ಥಹರೇವಾರಿ ಕಮೆಂಟ್ಗಳು, ಫೋಟೋಗಳು ಬರುತ್ತಲೇ ಇವೆ.
ನರೇಶ್, ಪವಿತ್ರಾ ದಂಪತಿಯನ್ನು ಟ್ರೋಲ್ಗಳು ಹೆಚ್ಚುತ್ತಲೇ ಇರುವ ಕಾರಣ ಇನ್ನೊಮ್ಮೆ ಈಗ ದೂರು ದಾಖಲು ಮಾಡಲಾಗಿದೆ. ತಮ್ಮ ಬಗ್ಗೆ ಕೆಟ್ಟದಾಗಿ ಬರೆಯುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಬರೆದಿದ್ದಾರೆ. ಯಾವ್ಯಾವುದೋ ಹೆಸರುಗಳನ್ನು ಇಟ್ಟುಕೊಂಡ ಚಾನೆಲ್ಗಳು ಸಾಮಾಜಿಕ ಜಾಲತಾಣವನ್ನು ವೇದಿಕೆ ಮಾಡಿಕೊಂಡು, ತಮಗೆ ಮಾನಹಾನಿ ಮಾಡುವಂತಹ ವಿಷಯ, ಗಾಸಿಪ್ಗಳನ್ನು ಬರೆಯುತ್ತಿದ್ದಾರೆ. ನಮ್ಮ ಮನೆಯಲ್ಲಿ ನಡೆಯುವ ಖಾಸಗಿ ವಿಷಯಗಳನ್ನು ಮನಸೋ ಇಚ್ಛೆ ಬರೆಯುತ್ತಿದ್ದಾರೆ. ನಮ್ಮ ಮೇಲಿನ ದ್ವೇಷದಿಂದ ಅವರು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ನರೇಶ್ ದೂರಿನಲ್ಲಿ (Complaint) ತಿಳಿಸಿರುವುದಾಗಿ ಹೇಳಲಾಗಿದೆ.
ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್ ಖಾನ್ ಅಪ್ಪನ ಕಣ್ಣು ನಟಿ ಹೆಲೆನ್ ಮೇಲೆ ಬಿದ್ದಾಗ...
ಮಾನಹಾನಿ ಮಾಡುತ್ತಿರುವ ಕೆಲವು ಟ್ರೋಲರ್‌ಗಳು ಮತ್ತು ಮೀಮರ್‌ಗಳು ಯಾರೆಂದು ಗುರುತಿಸಿ ಪೊಲೀಸರಿಗೆ ದೃಢವಾದ ಸಾಕ್ಷ್ಯವನ್ನು ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವೈಯಕ್ತಿಕ ವಿಷಯಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆಯುತ್ತದೆ. ಆದರೆ ತೀರಾ ಖಾಸಗಿ ವಿಷಯಗಳನ್ನು ಇಟ್ಟುಕೊಂಡು, ಒಬ್ಬರ ಜೀವನದಲ್ಲಿ ಆಟವಾಡುವುದು ಸರಿಯಲ್ಲ. ಇನ್ನೊಬ್ಬರ ಖಾಸಗಿ ಜೀವನದ ಮಧ್ಯೆ ಪ್ರವೇಶಿಸಿ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತ (Social worker), ಚಲನಚಿತ್ರ ವಿಮರ್ಶಕರ ಮುಖವಾಡ ಧರಿಸಿ ತಮ್ಮ ಸಂಬಂಧದ ಬಗ್ಗೆ ಅಗ್ಗವಾಗಿ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಎಲ್ಲವನ್ನೂ ಸವಿಸ್ತಾರವಾಗಿ ಹೇಳುತ್ತೇನೆ. ಈ ಕುರಿತು ಸಿಸಿಎಸ್ ಪೊಲೀಸರೊಂದಿಗೆ (CCS police) ಮಾತನಾಡಿದ್ದೇನೆ ಎಂದು ನರೇಶ್ ತಿಳಿಸಿದ್ದಾರೆ.