4 ಕೋಟಿ ರೂ ಬಜೆಟ್, ಒಂದೇ ದಿನದಲ್ಲಿ ದೋಚಿದ್ದು 9 ಕೋಟಿ! ಬಂಗಾರದ ಫಸಲು ಕೊಟ್ಟ ನಾನಿ ಸಿನಿಮಾ ಯಾವುದು?;

ಇಷ್ಟುದಿನಗಳ ಕಾಲ ನಟನಾಗಿ ಗೆದ್ದಿದ್ದ ನಟ ನಾನಿ ಅವರೀಗ ನಿರ್ಮಾಪಕರಾಗಿ ಕೂಡ ಗೆದ್ದಿದ್ದಾರೆ. 
 


ಸಿನಿಮಾ ಥಿಯೇಟರ್‌ಗೆ ಜನರು ಬರ್ತಿಲ್ಲ ಎಂದು ದೂರುತ್ತಿರುವಾಗಲೇ ತೆಲುಗು ಸಿನಿಮಾವೊಂದು ಮೊದಲ ದಿನವೇ ಭರ್ಜರಿ ಗೆಲುವು ಸಾಧಿಸಿದೆ. ಒಂದು ದಿನದಲ್ಲಿ ಸಿನಿಮಾಕ್ಕೆ ಹಾಕಿದ ಬಜೆಟ್‌ ಬಂದಾಯ್ತಂತೆ. ಹೌದು, ʼನ್ಯಾಚುರಲ್‌ ಸ್ಟಾರ್ʼ‌ ನಾನಿ ಅವರು ʼಕೋರ್ಟ್ʼ‌ ಸಿನಿಮಾಕ್ಕೆ ಹಣ ಹೂಡಿದ್ದರು. ಈ ಸಿನಿಮಾ ರಿಲೀಸ್‌ ಆಗಿ ಮೊದಲ ದಿನಕ್ಕೆ ಒಳ್ಳೆಯ ಕಲೆಕ್ಷನ್‌ ಮಾಡಿದೆ. ಅಷ್ಟೇ ಅಲ್ಲದೆ ಬಜೆಟ್‌ ಕೂಡ ವಾಪಸ್‌ ಬಂದಾಯ್ತು ಎನ್ನಲಾಗಿದೆ. 

ತಾರಾಗಣದಲ್ಲಿ ಯಾರಿದ್ದಾರೆ? 
ತೆಲುಗಿನ ಕೋರ್ಟ್‌ರೂಮ್‌ ಡ್ರಾಮಾ ಇದಾಗಿದೆ. ಪ್ರಿಯದರ್ಶಿನಿ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹರ್ಷ್‌ ರೋಶನ್‌, ಶ್ರೀದೇವಿ, ಶಿವಾಜಿ, ಸಾಯಿ ಕುಮಾರ್‌, ಹರ್ಷ್‌ ವರ್ಧನ್‌, ರೋಹಿಣಿ, ಶುಭಲೇಖಾ ಸುಧಾಕರ್‌, ಸುರಭಿ ಪ್ರಭಾವತಿ, ರಾಜಶೇಖರ್‌ ಅನಿಂಗಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Latest Videos

ಕಿಚ್ಚ ಸುದೀಪ ಸಿನಿಮಾದಲ್ಲಿ ನಟಿಸಿ ಪ್ರಸಿದ್ಧಿಯಾದ ನಾನಿಯ ಮೊದಲ ಸಂಬಳ ಒಂದು ಊಟಕ್ಕೂ ಸಾಲೋದಿಲ್ಲ!

ಈ ಸಿನಿಮಾ ಕಥೆ ಏನು?
ವಾಚ್‌ಮ್ಯಾನ್‌ ಮಗ ಚಂದ್ರಶೇಖರ್‌ ವಿವಿಧ ಕೆಲಸ ಮಾಡಿ ಹಣ ಗಳಿಸುತ್ತಾನೆ. ವಿದ್ಯಾರ್ಥಿ ಜಬಿಲಿ ಹಾಗೂ ಚಂದ್ರಶೇಖರ್‌ ಇಬ್ಬರೂ ಪರಿಚಯದ ಬಳಿಕ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ. ಪೋಕ್ಸೋ ಕಾಯ್ದೆಯಡಿ ಚಂದ್ರಶೇಖರ್‌ ವಿರುದ್ಧ ಆರೋಪ ಮಾಡಿ ಪೊಲೀಸರು ವಶಕ್ಕೆ ಪಡೆಯುತ್ತಾರೆ. ಇದನ್ನು ಜಬಿಲಿ ಚಿಕ್ಕಪ್ಪ ಮಾಡಿಸಿರುತ್ತಾನೆ. ಮುಂದೆ ಇದಕ್ಕೆ ಸಂಬಂಧಪಟ್ಟಂತೆ ಏನಾಗುವುದು ಎನ್ನೋದು ಈ ಸಿನಿಮಾದಲ್ಲಿದೆ ಎನ್ನಲಾಗಿದೆ. ನಾಲ್ಕು ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ. 

ಬ್ಲ್ಯಾಕ್‌ ಡ್ರೆಸ್‌ನಲ್ಲಿ ಎದೆಸೀಳು ತೋರಿಸಿದ Mrunal Thakur: ಮೊದ್ಲು ಮೈ ತುಂಬಾ ಬಟ್ಟೆ ಹಾಕಮ್ಮಾ ಎಂದ ಫ್ಯಾನ್ಸ್‌!

ನಾನಿ ಸಿನಿಮಾ ಕಲೆಕ್ಷನ್‌ ಮಾಡಿದ್ದೆಷ್ಟು?
ಈ ಸಿನಿಮಾ ಮಾರ್ಚ್‌ 14ರಂದು ರಿಲೀಸ್‌ ಆಗಿದೆ. ಈ ಚಿತ್ರ ರಿಲೀಸ್‌ ಆಗಿ ಎರಡು ದಿನಕ್ಕೆ ಹದಿನೈದು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ ಎಂದು ತಂಡವೇ ಹೇಳಿಕೊಂಡಿದೆ. ಒಟ್ಟಿನಲ್ಲಿ ನಾನಿ ಹೂಡಿದ ಬಂಡವಾಳ ಎರಡೇ ದಿನಕ್ಕೆ ಬಂದಾಯ್ತು, ಇನ್ನು ಎಷ್ಟು ದಿನಗಳ ಈ ಸಿನಿಮಾ ಚಿತ್ರಮಂದಿರದಲ್ಲಿ ಇರಲಿದೆ ಎಂದು ಕಾದು ನೋಡಬೇಕಿದೆ.

ಯಾಕೆ ಇಷ್ಟ ಆಗುತ್ತದೆ?
ಕೋರ್ಟ್‌ ದೃಶ್ಯಗಳು ಸಾಕಷ್ಟು ಕುತೂಹಲವನ್ನು ಸೃಷ್ಟಿ ಮಾಡುತ್ತವೆ. ಇನ್ನು ರಾಮ್‌ ಜಗದೀಶ್‌ ಎನ್ನುವ ಹೊಸ ನಿರ್ದೇಶಕರು ಅದ್ಭುತವಾಗಿ ಕಥೆ ಕಟ್ಟಿ, ಅದನ್ನು ಬಹಳ ಕುತೂಹಲಭರಿತವಾಗಿ ನಿರ್ದೇಶನ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಂಗೀತದ ಬಗ್ಗೆ ಅಷ್ಟಾಗಿ ಒಳ್ಳೆಯ ಪ್ರತಿಕ್ರಿಯೆ ಇಲ್ಲವಾದರೂ ಕೂಡ ಕಥೆಯೇ ಕಿಂಗ್‌ ಎಂದು ನಿರೂಪಿಸಲಾಗಿದೆ. 

click me!