
ನಾಗಚೈತನ್ಯ, ಶೋಭಿತಾ ಧುಲಿಪಾಲ ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂದಾಗ ಅನೇಕರು ನಂಬಿರಲೇ ಇಲ್ಲ. ನಾಗಚೈತನ್ಯಗೆ ಶೋಭಿತಾ ಜೋಡಿಯಲ್ಲ, ನೋಡಲು ಚೆನ್ನಾಗಿಲ್ಲ ಎಂದು ಟ್ರೋಲ್ ಮಾಡಿದ್ದರು. ಆದರೆ ಒಂದು ದಿನ ನಾಗಚೈತನ್ಯ, ಶೋಭಿತಾ ಇಬ್ಬರೂ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು ʼನಮ್ಮ ಸಂಬಂಧ ಅಧಿಕೃತʼ ಎಂದು ಜಗತ್ತಿಗೆ ಸಾರಿದರು. ಸುಂದರಿ ಸಮಂತಾರಿಗೆ ಡಿವೋರ್ಸ್ ಕೊಟ್ಟ ನಾಗಚೈತನ್ಯ ಯಾಕೆ ಶೋಭಿತಾರನ್ನು ಮದುವೆಯಾದರು ಅಂತ ಅನೇಕರಿಗೆ ಪ್ರಶ್ನೆ ಇತ್ತು.
ಟ್ರೋಲ್ ಆಗ್ತಿರೋ ಸಂದರ್ಶನ!
ಇತ್ತೀಚೆಗೆ ವೋಗ್ ಎನ್ನುವ ಮ್ಯಾಗ್‌ಜೀನ್‌ಗೆ ತೆಗೆದ ಫೋಟೋಶೂಟ್,ಸಂದರ್ಶನವು ಈಗ ಟ್ರೋಲ್ ಆಗ್ತಿದೆ. ಕೆಲವರು ಮಾತ್ರ ಈ ಫೋಟೋಗಳನ್ನು ಇಷ್ಟಪಡುತ್ತಿದ್ದಾರೆ. ಆದರೆ ಸಮಂತಾರ ಅಭಿಮಾನಿಗಳು ಮಾತ್ರ ಈ ಜೋಡಿ ನೀಡಿದ ಸಂದರ್ಶನ, ಪ್ರೇಮಕಥೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಕನ್ನಡದ ಹೊಂಬಾಳೆ ಬ್ಯಾನರ್‌ನಲ್ಲಿ ಪ್ರಭಾಸ್ ಮತ್ತೊಂದು ಸಿನಿಮಾ! ಡೈರೆಕ್ಟರ್ ಹೆಸರು ಗೊತ್ತಾದ್ರೆ ಶಾಕ್!
ಶೋಭಿತಾ ಕಂಡರೆ ನಾಗಚೈತನ್ಯಗೆ ಯಾಕಿಷ್ಟ?
ಶೋಭಿತಾ ಧುಲಿಪಾಲ ಬಗ್ಗೆ ನಾಗಚೈತನ್ಯ ಅಕ್ಕಿನೇನಿಗೆ ಏನು ಇಷ್ಟವಾಗುತ್ತದೆ” ಎಂದು ಪ್ರಶ್ನೆ ಕೇಳಲಾಯ್ತು. ಆಗ ಸಂದರ್ಶನದಲ್ಲಿ ಮಾತನಾಡಿದ ನಾಗಚೈತನ್ಯ, ಶೋಭಿತಾ ತೆಲುಗು ಇಷ್ಟ. ನನ್ನ ಕುಟುಂಬದವರು ಕೂಡ ತೆಲುಗು ಮಾತನಾಡುತ್ತಾರೆ, ಆದರೆ ನಾನು ಚೆನ್ನೈನಲ್ಲಿ ಓದಿದೆ, ತಮಿಳನ್ನು ಹೊರಗೆ ಕಲಿತೆ ಮತ್ತು ಮನೆಯಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದೆ. ಶೋಭಿತಾ ತೆಲುಗಿಗೂ, ನನ್ನ ತೆಲುಗು ಭಾಷೆಗೂ ತುಂಬ ವ್ಯತ್ಯಾಸ ಇದೆ. ಈಗ ಅವಳು ನನಗೆ ತೆಲುಗು ಕಲಿಸಬೇಕು, ಆ ಬುದ್ಧಿವಂತಿಕೆಯನ್ನು ನನಗೆ ವರ್ಗಾಯಿಸಬೇಕು ಎಂದು ನಾನು ತಮಾಷೆ ಮಾಡುತ್ತಿರುತ್ತೇನೆ” ಎಂದು ಹೇಳಿದ್ದಾರೆ.
ಶೋಭೀತಾ ಏನು ಹೇಳ್ತಾರೆ?
ಆಗ ಶೋಭಿತಾ ಮಾತನಾಡಿ, “ಮುಂಬೈನಲ್ಲಿ, ನಾನು ಬೇರೆ ಭಾಷೆಗಳನ್ನು ಮಾತನಾಡುವುದಕ್ಕೆ ಎಷ್ಟು ಒಗ್ಗಿಕೊಂಡಿದ್ದೀನಿ ಅಂದ್ರೆ, ನನ್ನ ಪಾಲಕರು, ಸಂಬಂಧಿಕರನ್ನು ಬಿಟ್ಟು ಬೇರೆಯವರ ಜೊತೆ ತೆಲುಗಿನಲ್ಲಿ ಮಾತನಾಡುವುದು ಹೇಗಿರುತ್ತದೆ ಎಂಬುದನ್ನೇ ಮರೆತುಬಿಟ್ಟಿದ್ದೇನೆ. ಮನೆಯಲ್ಲಿ ಮಾತನಾಡೋ ಭಾಷೆಯಲ್ಲೇ ನಾಗಚೈತನ್ಯ ಜೊತೆ ಮಾತಾಡೋದು ಖುಷಿಯಾಗಿರುತ್ತದೆ" ಎಂದು ಹೇಳಿದ್ದರು.
ಒಂದ್ ಕಾಲದಲ್ಲಿ ನಾಗಚೈತನ್ಯ ಫ್ರೆಂಡ್ ಪಾತ್ರ ಮಾಡುತ್ತಾ ಯಾವುದೇ ಹಿನ್ನೆಲೆ ಇಲ್ಲದೆ ಬೆಳೆದು ಈಗ ಹೀರೋ!
ಟ್ರೋಲ್ ಮಾಡ್ತಿರೋ ಅಭಿಮಾನಿಗಳು!
ನಾಗಚೈತನ್ಯ, ಶೋಭಿತಾ ಧುಲಿಪಾಲರನ್ನು ಈಗ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇವರಿಬ್ಬರ ಸಂಬಂಧದ ಬಗ್ಗೆ ಈ ಜೋಡಿ ನೀಡಿದ ಹೇಳಿಕೆಗಳು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಚೆನ್ನಾಗಿ ತೆಲುಗು ಭಾಷೆ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಮದುವೆಯಾಗುವುದು ತಮಾಷೆಯಾಗಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಸಮಂತಾ ಅಭಿಮಾನಿಗಳು ನಾಗಚೈತನ್ಯರನ್ನು 'ಮ್ಯಾನಿಪ್ಯುಲೇಟರ್' ಎಂದು ಕರೆಯುತ್ತಿದ್ದಾರೆ. ಸಮಂತಾ ಕೂಡ ತೆಲುಗು ಮಾತನಾಡುತ್ತಿದ್ದರು, ಬುದ್ಧಿವಂತರು ಕೂಡ ಹೌದು. ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನ ನಡೆಸುತ್ತಿದ್ದಾಗಲೇ ಇವರ ಮಧ್ಯೆ ಸಂಬಂಧವಿತ್ತು ಎಂದು ಶಂಕಿಸಿ ಶೋಭಿತಾ ಅವರನ್ನು 'ಮನೆ ಮುರಿಯುವವಳು' ಎಂದು ಟ್ರೋಲ್ ಮಾಡುತ್ತಿದ್ದಾರೆ.
ನಾಗ ಚೈತನ್ಯ ಏನಂದ್ರು?
ನಾಗ ಚೈತನ್ಯ ಮಾತನಾಡಿ, “ದೂರದ ಪ್ರೇಮವು ಸಣ್ಣ ವಿಷಯಗಳನ್ನು ಲೆಕ್ಕಹಾಕುವಂತೆ ಮಾಡುತ್ತದೆ, ಕುಟುಂಬದೊಂದಿಗೆ ಊಟ ಮಾಡುವುದು, ಏನೂ ಮಾಡದೆ ಒಟ್ಟಿಗೆ ಸಮಯ ಕಳೆಯುವುದು. ತೆಲುಗಿನಲ್ಲಿ ಮಾತನಾಡುವುದು. ನಾವಿಬ್ಬರೂ ಅವಳ ಮತ್ತು ನನ್ನ ಕೆಲಸಗಳನ್ನು ಆಧರಿಸಿ ಮುಂದಿನ ನಾಲ್ಕೈದು ತಿಂಗಳುಗಳು ಹೇಗಿರಬೇಕು ಎಂದು ಪ್ಲ್ಯಾನ್ ಮಾಡಿದ್ದೇವೆ. ರಜೆಗಾಗಿ ಅಥವಾ ಒಟ್ಟಿಗೆ ಚಿಲ್ ಮಾಡಲು ಸಮಯ ಹುಡುಕುತ್ತಿದ್ದೇವೆ” ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.