ಕೇರಳದಲ್ಲಿ ಕೆಜಿಎಫ್ 2 ಸಿನಿಮಾ ಕಲೆಕ್ಷನ್ ದಾಖಲೆಯನ್ನು ಮೋಹನ್‌ಲಾಲ್ ಅವರ ಎಂಪೂರನ್ ಮುರಿಯಲಿದೆಯೇ ಎಂಬ ಕುತೂಹಲವಿದೆ. ಮಲಯಾಳಂ ಸಿನಿಮಾ ಪ್ರೇಮಿಗಳು ಎಂಪೂರಾನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಲಿಯೋ ದಾಖಲೆಯನ್ನು ಮುರಿಯುತ್ತದೆಯೇ ಎಂದು ಕಾದು ನೋಡಬೇಕಿದೆ.
ಕನ್ನಡಿಗರಾದ ಯಶ್ ಹಾಗೂ ಪ್ರಶಾಂತ್ ನೀಲ್ ಸೇರಿ ಮಾಡಿದ ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಭಾರೀ ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲಿಯೂ ಕೆಜಿಎಫ್-2 ಸಿನಿಮಾ ಕೇರಳದಲ್ಲಿ ಬಿಡುಗಡೆಯಾದ ದಿನವೇ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ 2ನೇ ಸ್ಥಾನದಲ್ಲಿದೆ. ಈ ಕಲೆಕ್ಷನ್ ಸಾಧನೆಯನ್ನು ಬೀಟ್ ಮಾಡುವುದಕ್ಕೆ ಮೋಹನ್ ಲಾಲ್ ಅವರ ಎಂಪೂರನ್ ಸಿನಿಮಾ ತುದಿಗಾಲಿನಲ್ಲಿ ಕಾಯುತ್ತಿದೆ. ಆದರೆ, ದೊಡ್ಡ ಮಟ್ಟದ ಕಲೆಕ್ಷನ್ ಆಗುತ್ತದೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ..
ಮಲಯಾಳಂ ಸಿನಿಮಾ ಪ್ರೇಮಿಗಳು ಎಂಪೂರಾನಿಗಾಗಿ ಕಾಯ್ತಾ ಇರೋ ಥರ ಬೇರೆ ಯಾವ ಚಿತ್ರಕ್ಕೂ ಕಾಯ್ದಿಲ್ಲ. ಸಿನಿಮಾ ರಿಲೀಸ್ ಹತ್ರ ಬರ್ತಾ ಇರೋ ಹಾಗೆ, ಮೋಹನ್‌ಲಾಲ್ ಅಭಿಮಾನಿಗಳಿಗೆ ಮಾತ್ರ ಅಲ್ಲ, ಎಲ್ಲ ಸಿನಿಮಾ ಪ್ರೇಮಿಗಳಿಗೂ ಈ ಚಿತ್ರದ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಮಲಯಾಳಂನಲ್ಲಿ ಇದುವರೆಗೂ ಬಂದಿರೋ ಸಿನಿಮಾಗಳಲ್ಲೇ ಇದು ದೊಡ್ಡ ಬಜೆಟ್ ಸಿನಿಮಾ. ಅದಕ್ಕೆ ಈ ಸಿನಿಮಾದ ಕಲೆಕ್ಷನ್ ಬಗ್ಗೆ ಟ್ರ್ಯಾಕರ್ಸ್ ಮತ್ತು ಸಿನಿಮಾ ಪ್ರೇಮಿಗಳು ಚರ್ಚೆ ಮಾಡ್ತಾ ಇದ್ದಾರೆ.
ಕೇರಳದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಮಲಯಾಳಂನದ್ದಲ್ಲ, ತಮಿಳಿನ ಸಿನಿಮಾ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ವಿಜಯ್ ನಟಿಸಿದ ಲಿಯೋ ಸಿನಿಮಾ 2023ರಲ್ಲಿ ರಿಲೀಸ್ ಆಗಿ 12 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ಸ್ಥಾನದಲ್ಲಿ ಇರೋದು ಬೇರೆ ಭಾಷೆಯ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಟಿಸಿದ ಕೆಜಿಎಫ್ 2 ಸಿನಿಮಾ 7.30 ಕೋಟಿ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್ ಕೊಟ್ಟ ಅಶ್ವಿನಿ!
ಮೂರನೇ ಸ್ಥಾನದಲ್ಲಿ ಮೋಹನ್‌ಲಾಲ್ ಅವರ ಸಿನಿಮಾ ಇದೆ. ವಿ.ಎ. ಶ್ರೀಕುಮಾರ್ ನಿರ್ದೇಶನದ ಒಡಿಯನ್ ಸಿನಿಮಾ 7.25 ಕೋಟಿ ಕಲೆಕ್ಷನ್ ಮಾಡಿತ್ತು. ಒಡಿಯನ್ ಸಿನಿಮಾ ಏಳು ವರ್ಷಗಳ ಹಿಂದೆ 7.25 ಕೋಟಿ ಕಲೆಕ್ಷನ್ ಮಾಡಿತ್ತು ಎಂದರೆ, ಎಂಪೂರಾನ್ ಕೆಜಿಎಫ್ 2 ಸಿನಿಮಾವನ್ನು ದಾಟೋದು ಗ್ಯಾರಂಟಿ ಎಂದು ಸ್ಥಳೀಯರು ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ, ಲಿಯೋ ಸಿನಿಮಾವನ್ನು ದಾಟುತ್ತಾ ಅನ್ನೋದು ಅಲ್ಲಿನವರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಇನ್ನು ತಮಿಳು ನಟ ವಿಜಯ್ ಅವರ ಲಿಯೋ ಸಿನಿಮಾ ಬೆಳಿಗ್ಗೆ 4 ಗಂಟೆಗೆ ಶುರುವಾಗಿತ್ತು. ಎಂಪೂರಾನ್ ಸಿನಿಮಾ ಬೆಳಿಗ್ಗೆ 6 ಗಂಟೆಗೆ ಶುರುವಾಗುತ್ತಿದೆ. ಈ ಸಿನಿಮಾ 3 ಗಂಟೆ ಸಿನಿಮಾ ಆಗಿರುವುದರಿಂದ ಲಿಯೋ ಸಿನಿಮಾಗಳಷ್ಟು ಶೋಗಳು ಇರೋದಿಲ್ಲ. ಜೊತೆಗೆ ವಿಕ್ರಮ್ ನಟನೆಯ 'ವೀರ ಧೀರ ಶೂರನ್' ಸಿನಿಮಾ ಕೂಡ ಅದೇ ದಿನ ರಿಲೀಸ್ ಆಗುತ್ತಿದೆ. ಈ ಸಿನಿಮಾ ಕೂಡ ಸ್ವಲ್ಪ ಥಿಯೇಟರ್‌ಗಳನ್ನು ತಗೊಳ್ಳುತ್ತದೆ. ಮೊದಲ ಶೋಗಳಲ್ಲಿ ಒಳ್ಳೆ ಅಭಿಪ್ರಾಯ ಬಂದರೆ, ಎಂಪೂರಾನ್ ಲಿಯೋ ಸಿನಿಮಾವನ್ನು ದಾಟೋ ಚಾನ್ಸ್ ಇದೆ ಎಂದು ಸಿನಿಪ್ರಿಯರು ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿ ತಿಳಿಯಬೇಕೆಂದರೆ ನಾವು ಮಾ.27 ಬರುವವರೆಗೂ ಕಾಯಬೇಕಾಗುತ್ತದೆ.
ಇದನ್ನೂ ಓದಿ: ಬ್ಯಾಂಕ್ ಈ ನೇರ ವಂಚನೆ ನಿಮ್ಮ ಗಮನಕ್ಕೆ ಬಂದಿದ್ಯಾ: ಹಿಸಾಬ್ ಬರಾಬರ್ ನೋಡಿ ಗೊತ್ತಾಗುತ್ತೆ