ಸೋಂಕಿತರಿಗೆ ಆಕ್ಸಿಜನ್ ಕೊಡಿಸಲು ಫೇವರಿಟ್ ಬೈಕನ್ನೇ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್!

By Suvarna News  |  First Published May 3, 2021, 10:47 AM IST

ಕೊರೋನಾದಿಂದ ಸಂಕಷ್ಟ ಸ್ಥಿತಿಗೆ ಸಿಲುಕಿಕೊಂಡಿರುವ ಜನರ ನೆರವಿಗೆ ನಿಂತ ತೆಲುಗು ನಟ ಹರ್ಷವರ್ಧನ್.


ತೆಲುಗು ಚಿತ್ರರಂಗದ ಯುವ ನಟ ಹರ್ಷವರ್ಧನ್ ರಾಣೆ ಕೋವಿಡ್‌ ರೋಗಿಗಳ ಸಹಾಯಕ್ಕೆ ಮುಂದಾಗಿದ್ದಾರೆ. ತಮ್ಮ ಪ್ರೀತಿಯ ದುಬಾರಿ ಬೈಕನ್ನು ಮಾರಾಟಕ್ಕೆ ಇಟ್ಟಿದ್ದಾರೆ, ಅದರಿಂದ ಬರುವ ಹಣದಿಂದ ಸೋಂಕಿತರಿಗೆ ಆಕ್ಸಿಜನ್ ಕೊಡಿಸಲು ಮುಂದಾಗಿದ್ದಾರೆ.

ಹರ್ಷವರ್ಧನ್ ಪೋಸ್ಟ್:

Tap to resize

Latest Videos

undefined

'ಅಗತ್ಯ ಇರುವವರಿಗೆ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ನನ್ನ ಬೈಕ್ ಮಾರಾಟ ಮಾಡುತ್ತಿದ್ದೇನೆ. ಹೈದರಾಬಾದ್‌ನಲ್ಲಿ ಉತ್ತಮ ಆಕ್ಸಿಜನ್ ಸಾಂದ್ರಕ ಎಲ್ಲಿ ಸಿಗುತ್ತೆ ಹೇಳಿ' ಎಂದು ಹರ್ಷ ಬರೆದುಕೊಂಡಿದ್ದಾರೆ.

ಕಣ್ಣೆದುರೇ ಜನ ಸಾಯ್ತಿದ್ರೂ ಏನೂ ಮಾಡಲಾಗದ ಅಸಹಾಯಕತೆ: ಸಂಯುಕ್ತಾ ಹೊರನಾಡು 

ಹರ್ಷವರ್ಧನ್‌ ಬೈಕ್‌ ಹಾಗೂ ಕಾರು ಕ್ರೇಜಿನ ಬಗ್ಗೆ ಎಲ್ಲರಿಗೂ ಗೊತ್ತಿದೆ ಹೀಗಿರುವಾಗ ಬೈಕ್ ಮಾರುತ್ತಿದ್ದಾರೆ ಅಂದ್ರೆ  ಜನರಿಗೆ ಸಹಾಯ ಮಾಡಬೇಕೆಂಬ ಮನಸ್ಸಿದೆ. ಕೋಟಿ ಕೋಟಿ ಸಂಪಾದನೆ ಮಾಡುವವರು ಮಾತ್ರ ಸಹಾಯ ಮಾಡುತ್ತಾರೆ ಎಂದುಕೊಳ್ಳಬೇಡಿ ಇಂತಹ ಮಾನವೀಯತೆ ಕೆಲಸ ಮಾಡುವವರು ಇದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರ್ಷವರ್ಧನ್ ಪರವಾಗಿ ನೆಟ್ಟಿಗರು ಮಾತನಾಡಿದ್ದಾರೆ. 

ಇನ್ನು ಸನಮ್‌ ಕಸಮ್‌ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಹರ್ಷವರ್ಧನ್ ಮೊದಲ ಚಿತ್ರಕ್ಕೆ ಸಿನಿ ಪ್ರೇಕ್ಷಕರ ಹೃದಯ ಗೆದ್ದಿದಾರೆ.

 

click me!