ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ಲತಾ ಮಂಗೇಶ್ಕರ್ ಅವರು ಮುಖ್ಯಮಂತ್ರಿಯ ಪರಿಹಾರ ನಿಧಿಗೆ 7 ಲಕ್ಷ ರೂ ನೀಡಿದ್ದಾರೆ.
ಮುಂಬೈ(ಮೇ.02): ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 7 ಲಕ್ಷ ರೂಪಾಯಿ ನೀಡಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗೇಶ್ಕರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ, ಭಾರತ್ ರತ್ನ ಲತಾ ಮಂಗೇಶ್ಕರ್ ಅವರಿಂದ 7 ಲಕ್ಷ ರೂ. ದೇಣಿಗೆ ನೀಡಿದ್ದನ್ನು ನಾವು ಕೃತಜ್ಞತೆಯಿಂದ ಸ್ವೀಕರಿಸುತ್ತೇವೆ. ಕೋವಿಡ್ -19 ವಿರುದ್ಧದ ನಮ್ಮ ಹೋರಾಟಕ್ಕೆ ಈ ಮೊತ್ತವನ್ನು ಬಳಸಲಾಗುತ್ತದೆ ಎಂದಿದ್ದಾರೆ.
undefined
ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಾಗಿ ಬೈಕ್ ಮಾರ್ತಿದ್ದಾರೆ ನಟ ಹರ್ಷವರ್ಧನ್
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡಲು ಬಯಸುವ ಎಲ್ಲರಿಗೂ ರಾಜ್ಯವು ಸಿಎಂ ರಿಲೀಫ್ ಫಂಡ್ ಅನ್ನು ಸ್ಥಾಪಿಸಿದೆ. ನಿಧಿಗೆ ಕೊಡುಗೆ ನೀಡುವ ಮೂಲಕ ಜನರು ಮುಂದೆ ಬರಬೇಕೆಂದು ಸಿಎಂ ಒತ್ತಾಯಿಸಿದ್ದಾರೆ.
2021-22ನೇ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ (ಎಸ್‌ಡಿಆರ್‌ಎಫ್) ಕೇಂದ್ರದ ಪಾಲಿನ ಮೊದಲ ಕಂತನ್ನು ಕೇಂದ್ರ ಈಗಾಗಲೇ ಬಿಡುಗಡೆ ಮಾಡಿದೆ. 2021-22ನೇ ಸಾಲಿನ ಸಾಮಾನ್ಯ ವೇಳಾಪಟ್ಟಿಗಿಂತ ಮುಂಚಿತವಾಗಿ ಕೇಂದ್ರವು ಶನಿವಾರ ಈ ಫಂಡ್ ಬಿಡುಗಡೆ ಮಾಡಿದ್ದು ಇದರ ಶೇ.50ರಷ್ಟು ಮೊತ್ತವನ್ನು ಕೊರೋನಾ ಪರಿಹಾರ ಕಾರ್ಯಕ್ಕೆ ಬಳಸಲು ಸೂಚಿಸಿದೆ.