
ಅನುಷ್ಕಾ ಶರ್ಮಾ ನಟಿಯಾಗಿದ್ದರೂ ಪತಿ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾದ ಸಂದರ್ಭ, ಪ್ರೀತಿ ಬೆಳೆದ ರೀತಿ ನೋಡಿದ್ರೆ ಬಾಲಿವುಡ್‌ನಲ್ಲಿ ಸೂಪರ್ ಸಿನಿಮಾ ಮಾಡಬಹುದು. ನಟಿ 33ನೇ ಹುಟ್ಟು ಹಬ್ಬ ಆಚರಿಸುತ್ತಿರುವ ಸಂದರ್ಭ ಅವರ ಬ್ಯೂಟಿಫುಲ್ ಲವ್‌ಸ್ಟೋರಿ ಹೇಗಿತ್ತು ನೋಡಿ.
2013 ರಲ್ಲಿ, ಅನುಷ್ಕಾ ಮತ್ತು ವಿರಾಟ್ ಮೊದಲ ಬಾರಿಗೆ ಒಟ್ಟಿಗೆ ಶಾಂಪೂ ಕಮರ್ಷಿಯಲ್ ಚಿತ್ರೀಕರಣಕ್ಕಾಗಿ ಭೇಟಿಯಾದರು. ಈ ಜಾಹೀರಾತು ದೇಶಾದ್ಯಂತ ಟೆಲಿವಿಷನ್ ಸೆಟ್‌ಗಳಲ್ಲಿ ಬಂದ ಕೂಡಲೇ, ಕ್ರಿಕೆಟ್ ಮತ್ತು ಬಾಲಿವುಡ್ ಅಭಿಮಾನಿಗಳು ಈ ಜೋಡಿ ಮಧ್ಯೆ ಏನಾದ್ರೂ ಕೆಮೆಸ್ಟ್ರಿ ಇದ್ಯಾ ಎಂದು ಗಾಸಿಪ್ ಶುರು ಹಚ್ಕೊಂಡ್ರು.
ಪತ್ನಿಗಾಗಿ ಕೊಹ್ಲಿಯ ರೊಮ್ಯಾಂಟಿಕ್ ಹಾಡು: ಕಣ್ಣೀರಾದ ಅನುಷ್ಕಾ
ಅನುಷ್ಕಾ ಅವರು ವಿರಾಟ್ ಅವರ ಭೇಟಿಯ ಬಗ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ವಿರಾಟ್‌ನನ್ನು ಮನೆಗೆ ಬಂದಿದ್ದಾರೆ. ಅವರು ನನ್ನ ಸ್ನೇಹಿತ. ನಾವು ಒಟ್ಟಿಗೆ ಜಾಹೀರಾತು ಮಾಡಿದ್ದೇವೆ. ಅವರು ತುಂಬಾ ಸೊಕ್ಕಿನವರು ಎಂದುಕೊಂಡಿದ್ದೆ. ಆದರೆ ನಾನು ಭೇಟಿಯಾದಾಗ ಅವರು ತುಂಬಾ ಸಿಂಪಲ್, ಬುದ್ಧಿವಂತ ಮತ್ತು ಫನ್ ಲವಿಂಗ್ ಎಂದಿದ್ದಾರೆ. ನನ್ನ ಹೊಸ ಮನೆಯ ಖುಷಿ ಆಚರಿಸಲು ನಾನು ನನ್ನ ಸ್ನೇಹಿತರನ್ನು ಊಟಕ್ಕೆ ಕರೆದಿದ್ದೆ, ನಾನು ಆಗ ವಿರಾಟ್‌ನನ್ನು ಕೂಡ ಆಹ್ವಾನಿಸಿದೆ. ಅಲ್ಲಿಂದ ಸ್ನೇಹ ಶುರುವಾಯ್ತು ಅಂತಾರೆ ಅನುಷ್ಕಾ.
ನಾವು ಜೋಕ್ ಮಾಡ್ತಿದ್ದೆವು. ನಾನು ಎಲ್ಲ ಸಮಯದಲ್ಲೂ ಫೂಲ್ ಆಗ್ತಿದ್ದೆ. ಕೆಲವು ಹಾಸ್ಯಗಳು ನಿಜವಾಗಿಯೂ ಸಿಲ್ಲಿ ಆಗಿದ್ದವು. ಆದರೆ ನಾನು ಹೇಗಿದ್ದೇನೆ. ನಾನು ಒಳ್ಳೆಯ ಸಮಯವನ್ನು ಹೊಂದಲು ಮತ್ತು ನಗುವುದನ್ನು ಪ್ರೀತಿಸುತ್ತೇನೆ. ಶಾಂಪೂ ಕಮರ್ಷಿಯಲ್ ಮಾಡಿದ ಬಗ್ಗೆ ನನಗೆ ಖುಷಿ ಇದೆ ಎಂದಿದ್ದರು ಕೊಹ್ಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.