ಸಿನಿಮಾ ಮಾಡೋವಾಗ ಮಾತ್ರವಲ್ಲ ಜೈಲಿನಲ್ಲಿರುವಾಗ್ಲೂ ನಟ ದರ್ಶನ್ ಗತ್ತು ಕಡಿಮೆ ಆಗಿಲ್ಲ. ಪ್ರತಿ ವಿಷ್ಯದಲ್ಲೂ ಟ್ರೆಂಡ್ ಸೆಟರ್ ಆಗಿರುವ ಡಿ ಬಾಸ್ ದರ್ಶನ್, ಸರ್ಜಿಕಲ್ ಚೇರ್ ಪ್ರಸಿದ್ಧಿ ಜಾಸ್ತಿ ಮಾಡ್ತಿದ್ದಾರೆ.
ಡಿ ಬಾಸ್ ನಟ ದರ್ಶನ್ (D Boss actor Darshan) ಜೈಲಿನಲ್ಲಿದ್ರೂ ಟ್ರೆಂಡ್ ಸೆಟರ್ (trend setter) ಆಗಿದ್ದಾರೆ. ಅವರು ಹಾಗಿದ್ದು, ಮಾಡಿದ್ದು ಎಲ್ಲ ಈಗ ಟ್ರೆಂಡ್ ಆಗ್ತಿದೆ. ಪರಪ್ಪನ ಅಗ್ರಹಾರ ಜೈಲಿ (Parappana Agrahara Jail)ನಲ್ಲಿದ್ದ ದರ್ಶನ್ ಗೆ ನೀಡಿದ್ದ ಕೈದಿ ನಂಬರ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಾದ್ಮೇಲೆ ಬಳ್ಳಾರಿ ಜೈಲು ಸೇರಿದ ದರ್ಶನ್ ಧರಿಸಿದ ಟೀ ಶರ್ಟ್ (T shirt), ನಂಬರ್ ವೈರಲ್ ಆಗಿ, ಅಭಿಮಾನಿಗಳ ಮೈಮೇಲೆ, ವಾಹನದ ಮೇಲೆ ಇದೇ ನಂಬರ್, ಅದೇ ಟೀ ಶರ್ಟ್ ಕಾಣಸಿಗ್ತಿದೆ. ಈಗ ಸರ್ಜಿಕಲ್ ಚೇರ್ (Surgical Chair) ಸರದಿ. ಬಳ್ಳಾರಿಯಲ್ಲಿ ಸರ್ಜಿಕಲ್ ಚೇರ್ ಗಾಗಿ ದರ್ಶನ್ ಬೇಡಿಕೆ ಇಟ್ಟಿದ್ದು, ಅವರಿಗೆ ಸಿಕ್ಕಾಗಿದೆ. ಹಾಗಾಗಿ ಇನ್ಮುಂದೆ ಸರ್ಜಿಕಲ್ ಚೇರ್ ಗೆ ಬಹುಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಸರ್ಜಿಕಲ್ ಚೇರ್ ಮಾರಾಟಗಾರರ ವ್ಯಾಪಾರ ಡಬಲ್ (business double) ಆಗೋದ್ರಲ್ಲಿ ಡೌಟಿಲ್ಲ.
ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಜೈಲಿಗೆ ಡಿಐಪಿ ಶೇಷ ಭೇಟಿ ನೀಡಿದ್ದಾಗ, ದರ್ಶನ್, ಜೈಲಿನಲ್ಲಿರುವ ಇಂಡಿಯನ್ ಟಾಯ್ಲೆಟ್ (Indian Toilet) ಯೂಸ್ ಮಾಡೋದು ಕಷ್ಟ. ಸರ್ಜಿಕಲ್ ಚೇರ್ ನೀಡಿ ಅಂತ ಮನವಿ ಮಾಡಿದ್ರು. ಆ ನಂತ್ರ ವೈದ್ಯರು ಪರೀಕ್ಷೆ ಮಾಡಿ ಮೆಡಿಕಲ್ ರಿಪೋರ್ಟ್ (Medical Report) ನೀಡಿದ ನಂತ್ರ ಸರ್ಜಿಕಲ್ ಚೇರ್ ನೀಡಿದ್ದಾರೆ. ದರ್ಶನ್ ಜೈಲಿನಲ್ಲಿ ಮಾಡಿದ್ದೆಲ್ಲ ಪಾಲಿಸುವ ಅಭಿಮಾನಿಗಳು ಈಗ ಸರ್ಜಿಕಲ್ ಚೇರ್ ಬಳಸೋದ್ರಲ್ಲಿ ಅನುಮಾನ ಇಲ್ಲ.
ಬಿಗ್ ಬಾಸ್ ಸ್ಪರ್ಧೆಗೆ ಬಂದು ಕಣ್ಣು ತಂಪು ಮಾಡ್ತಾರಾ ಜ್ಯೋತಿ ರೈ ? ನಟಿಯ ಸೌಂದರ್ಯ ಹಾಡಿಹೊಗಳಿದ ನಿರಂಜನ್,
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ಗೆ 6106 ನಂಬರ್ ನೀಡಲಾಗಿತ್ತು. ಇದನ್ನು ಅಭಿಮಾನಿಗಳು ಕೈ ಮೇಲೆ, ಆಟೋ ಮೇಲೆ ಬರೆಸಿಕೊಳ್ಳಲು ಶುರು ಮಾಡಿದ್ರು. ಈಗ ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗಿದ್ದಾರೆ. ಅವರಿಗೆ 511 ಖೈದಿ ನಂಬರ್ ನೀಡಲಾಗಿದೆ. ಈ ನಂಬರ್ ಲಕ್ಕಿ ನಂಬರ್ ಎನ್ನಲಾಗ್ತಿದೆ. ಅದೇನೇ ಇರಲಿ, ದರ್ಶನ್ ಗೆ ಸಿಕ್ಕಿರುವ ಈ ನಂಬರ್ ಅಭಿಮಾನಿಗಳಿಗೂ ಇಷ್ಟವಾಗಿದೆ. ಈ ನಂಬರ್ ಟ್ರೆಂಡಿಂಗ್ ಈಗ ಮತ್ತೆ ಶುರುವಾಗಿದೆ. ದರ್ಶನ್ ಅಭಿಮಾನಿಗಳು ಆಟೋ, ಬೈಕ್ ಅಂತ ತಮ್ಮಿಷ್ಟದ ವಸ್ತುಗಳ ಮೇಲೆ, ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡು ಡಿ ಬಾಸ್ ಮೇಲಿರುವ ಅಭಿಮಾನ ತೋರಿಸ್ತಿದ್ದಾರೆ.
ಇಷ್ಟೇ ಅಲ್ಲ, ಪರಪ್ಪನಅಗ್ರಹಾರದಿಂದ ದರ್ಶನ್ ಬಳ್ಳಾರಿಗೆ ಹೋಗೋ ಸಮಯದಲ್ಲಿ ಕಪ್ಪು ಬಣ್ಣದ ಪ್ಯೂಮ್ ಬ್ರ್ಯಾಂಡ್ ಟೀ ಶರ್ಟ್ ಧರಿಸಿದ್ರು. ಅದನ್ನು ಕೂಡ ಜನರು ಬಿಟ್ಟಿಲ್ಲ. ಈಗ ಪ್ಯೂಮ್ ಬ್ರ್ಯಾಂಡ್ ಟೀ ಶರ್ಟ್ ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ಯೂಮ್ ಬ್ರ್ಯಾಂಡ್ ಟೀ ಶರ್ಟ್ ಧರಿಸಿ ಅಭಿಮಾನಿಗಳು ಮಿಂಚುತ್ತಿದ್ದಾರೆ. ದರ್ಶನ್ ಬಳ್ಳಾರಿ ಜೈಲಿ (Bellary Jail)ಗೆ ಬರುವಾಗ ಫುಲ್ ಸ್ಟೈಲ್ ನಲ್ಲಿ ಬಂದಿದ್ರು. ಪ್ಯೂಮ್ ಬ್ರ್ಯಾಂಡ್ (Pume Brand) ಟೀ ಶರ್ಟ್, ಸನ್ ಗ್ಲಾಸ್, ಎಡಗೈನಲ್ಲಿ ಕ್ರೇಪ್ ಬ್ಯಾಂಡ್ ಹಾಕಿಕೊಂಡು ಬಂದಿದ್ದ ದರ್ಶನ್ ಎಲ್ಲರ ಗಮನ ಸೆಳೆದಿದ್ದರು. ಕೊಲೆ ಮಾಡಿದ ವ್ಯಕ್ತಿಗೆ ಇಷ್ಟೆಲ್ಲ ಸ್ಟೈಲ್ ಬೇಕಾ ಅಂತ ಟ್ರೋಲರ್ ಹೇಳಿದ್ರೆ , ನಮ್ ಬಾಸ್ ಗ್ರೇಟ್ ಅಂತ ಅಭಿಮಾನಿಗಳು ದರ್ಶನ್ ಸ್ಟೈಲ್ ಫಾಲೋ ಮಾಡ್ತಿದ್ದಾರೆ.
ಅವಕಾಶ ಕೊಡ್ತೀನಿ ಅಂತ ಕರೆದು ಮನೆ ಕೆಲಸ ಕೊಟ್ಟ ಅವಮಾನ ಮಾಡಿಬಿಟ್ಟರು; ಪುಟ್ಟಕ್ಕನ ಮಕ್ಕಳು ಕೌಶಿಕ್ ಬಿಚ್ಚಿಟ್ಟ ಸತ್ಯ
ದರ್ಶನ್ ಬಳ್ಳಾರಿ ಜೈಲಿಗೆ ಹೋಗ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಅಲ್ಲಿಗೆ ಹೋಗ್ ಬಂದಿದ್ದಾರೆ. ಅವರು ಬಳ್ಳಾರಿಗೆ ಶಿಫ್ಟ್ ಆಗ್ತಾರೆ ಎನ್ನುವ ಸುದ್ದಿ ಕೂಡ ಇದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಐಷಾರಾಮಿಯಾಗಿದ್ರು ಎನ್ನುವ ಕಾರಣಕ್ಕೆ ಅವರನ್ನು ಬಳ್ಳಾರಿಗೆ ಕಳುಹಿಸಲಾಗಿದೆ. ಆದ್ರೆ ಅಲ್ಲೂ ಅವರಿಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗ್ತಿದೆ ಮಾತು ಕೇಳಿ ಬಂದಿದೆ. ದರ್ಶನ್ ಗೆ ಎಸಿ ನೀಡಿದ್ದಾರೆ ಎಂಬ ವದಂತಿ ಹಬ್ಬಿದೆ.