ಮಲಯಾಳಂ ಚಿತ್ರರಂಗದಲ್ಲಿ ನಟಿ ಚಾರ್ಮಿಲಾ ಅವರಿಗೆ ಕೆಟ್ಟ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಚಿತ್ರ ನಿರ್ಮಾಪಕರೊಬ್ಬರು 27 ವರ್ಷಗಳ ಹಿಂದೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ. ಹೋಟೆಲ್‌ನಿಂದ ತಪ್ಪಿಸಿಕೊಂಡು ಬಂದ ಸನ್ನಿವೇಶವನ್ನು ವಿವರಿಸಿದ್ದಾರೆ.
ನವದೆಹಲಿ: ಕೇರಳದ ಸಿನಿಮಾ ರಂಗದಲ್ಲಿ ಹೇಮಾ ಕಮಿಟಿ ವರದಿ ಸಂಚಲನವನ್ನು ಸೃಷ್ಟಿಸಿದೆ. ಇದೀಗ ಕಲಾವಿದರು ತಾವು ಅನುಭವಿಸಿದ ಕಹಿ ಘಟನೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತನ ನಟಿ ಚಾರ್ಮಿಲಾ ಸಹ ಹೇಳಿಕೆ ನೀಡಿದ್ದು, ಅಂದು ಹೋಟೆಲ್‌ನಿಂದ ಹೇಗೋ ತಪ್ಪಿಸಿಕೊಂಡು ಬಂದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಚಿತ್ರದ ನಿರ್ಮಾಪಕರೊಬ್ಬರು 27 ವರ್ಷಗಳ ಹಿಂದೆ ಕಿರುಕುಳ ನೀಡಿದ್ದರು ಎಂದು ನಟಿ ಚಾರ್ಮಿಲಾ ಆರೋಪಿಸಿದ್ದಾರೆ.
ಸಿಎನ್‌ಎನ್-ನ್ಯೂಸ್ 18 ಜೊತೆ ಮಾತನಾಡಿರುವ ನಟಿ ಚಾರ್ಮಿಲಾ, ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ನನಗೂ ಒಮ್ಮೆ ಕೆಟ್ಟ ಅನುಭವವಾಗಿದೆ. ಅರ್ಜುನ್ ಪಿಳ್ಳಯಂ ಅಂಕು ಮಕ್ಕಳಮ್ ಚಿತ್ರದ ಶೂಟಿಂಗ್ ವೇಳೆ ಈ ಘಟನೆ ನಡೆದಿತ್ತು. ಹಾಡಿನ ಚಿತ್ರೀಕರಣಕ್ಕಾಗಿ ಮೂರು ದಿನ ತಮಿಳುನಾಡಿನ ಪೊಲಾಚಿಗೆ ಹೋಗಲಾಗಿತ್ತು. ಶೂಟಿಂಗ್ ಮುಕ್ತಾಯದ ಬಳಿಕ ಪ್ರೊಡೆಕ್ಷನ್ ಮ್ಯಾನೇಜರ್ ಬಂದು ನಿರ್ಮಾಪಕರನ್ನು ಭೇಟಿಯಾಗುವಂತೆ ಹೇಳಿದರು. ಒಬ್ಬಳೇ ಹೋಟೆಲ್‌ಗೆ ಹೋಗುವುದು ಉತ್ತಮ್ಮ ಅಲ್ಲ ಎಂದು ಸಹಾಯಕಿ ಜೊತೆಯಲ್ಲಿ ಹೋದೆ. ಆದ್ರೆ ಅಲ್ಲಿಗೆ ಹೋದ್ಮೇಲೆ ನನ್ನ ಸಹಾಯಕಿಯನ್ನು ಅವರ ಮ್ಯಾನೇಜರ್ ಕೋಣೆಯ ಹೊರಗೆ ತಡೆದು ನಿಲ್ಲಿಸಲಾಯ್ತು. ಆದರೂ ನಾನು ಅಸ್ಟಿಸ್ಟೆಂಟ್ ಜೊತೆಯಲ್ಲಿಯೇ ನಿರ್ಮಾಪಕರ ಕೋಣೆಯೊಳಗೆ ಹೋದೆ ಎಂದು ಚಾರ್ಮಿಲಾ ಹೇಳಿದ್ದಾರೆ.
OTT ಸಿನಿಮಾ, ವೆಬ್ ಸಿರೀಸ್‌ಗಳಲ್ಲಿ ಬೋಲ್ಡ್ ಆಗಿ ನಟಿಸಿದ ಟಾಪ್ 7 ನಟಿಯರು
ನಿರ್ಮಾಪಕರ ಕೋಣೆಯಲ್ಲಿ ಸುಮಾರು ಏಳೆಂಟು ಜನರು ಮದ್ಯ ಸೇವಿಸುತ್ತಾ ಕುಳಿತಿದ್ದರು. ಅದರಲ್ಲಿ ಒಬ್ಬ ಬಂದು ನನ್ನ ಸಹಾಯಕಿ ಮೇಲೆ ಎರಗಿ ಆಕೆಯ ಸೀರೆ ಎಳೆಯಲು ಆರಂಭಿಸಿದನು. ಮತ್ತೋರ್ವ ನನ್ನ ಬಳಿಯೇ ಬರುತ್ತಿದ್ದನು. ಈ ವೇಳೆ ನನ್ನ ಜೊತೆಯಲ್ಲಿದ್ದ ಮತ್ತೋರ್ವ ಪುರುಷ ಸಹಾಯಕ ಆಕೆಯನ್ನು ರಕ್ಷಣೆ ಮಾಡಲು ಹೋದ್ರೆ ಆತನ ಮೇಲೆ ಹಲ್ಲೆ ನಡೆಸಲಾಯ್ತು. ಈ ನಡುವೆ ಓರ್ವ ವ್ಯಕ್ತಿ ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡನು. ನಾನು ಆತನ ಕೈ ಕಚ್ಚಿ ಹೋಟೆಲ್‌ನಿಂದ ಹೊರ ಬಂದ, ಜನರ ಬಳಿ ಸಹಾಯ ಕೇಳಲು ಆರಂಭಿಸಿದೆ. ಅಷ್ಟರಲ್ಲಿ ಆಟೋ ಚಾಲಕರ ಗುಂಪು ನನಗೆ ಸಹಾಯ ಮಾಡಿತು. ನಂತರ ಅವರ ಸಹಾಯದಿಂದ ತಂದೆಗೆ ಫೋನ್ ಮಾಡಿ ವಿಷಯ ತಿಳಿಸುವಷ್ಟರಲ್ಲಿನ ಪೊಲೀಸರು ಬಂದು ಎಲ್ಲರನ್ನೂ ರಕ್ಷಿಸಿದರು ಎಂದು ಹೇಳಿಕೊಂಡಿದ್ದಾರೆ.
ನಾನು ಅಡ್ಜಸ್ಟ್ ಮಾಡಿಕೊಳ್ಳದ ಕಾರಣ ಮಲಯಾಳಂನ 28 ಆಫರ್‌ಗಳನ್ನು ಕಳೆದುಕೊಂಡಿದ್ದೇನೆ. ಹಲವು ಸಿನಿಮಾ ಆಫರ್‌ಗಳು ಬಂದರೂ ಬದಲಾಗಿ ಅವರ ಸೆಕ್ಸ್ ಬೇಡಿಕೆಯನ್ನು ಪೂರೈಸಬೇಕಿತ್ತು. ಆದ್ರೆ ಸಿನಿಮಾಗಾಗಿ ಅಂತಹದಕ್ಕೆಲ್ಲಾ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಮಲಯಾಳಂ ಸಿನಿಮಾ ನಿರ್ದೇಶಕ ಹರಿಹರನ್ ಮತ್ತು ನಟಿ ವಿಷ್ಣು ಒಮ್ಮೆ ನನ್ನನ್ನು ಭೇಟಿಯಾಗಿದ್ದರು. ನಾವೆಲ್ಲರೂ ಜೊತೆಯಾಗಿ ಸಿನಿಮಾ ನೋಡಿ ಕಥೆ ಬಗ್ಗೆ ಚರ್ಚೆ ನಡೆಸಿದೇವು. ಹರಿಹರನ್ ಅಂದು ಸಭ್ಯವಾಗಿಯೇ ನಡೆದುಕೊಂಡರು. ಇದಾದ ಬಳಿಕ ಫೋನ್ ಮಾಡಿದ ನಟಿ ವಿಷ್ಣು, ಅಡ್ಜಸ್ಟ್ ಆಗುವಂತೆ ಹೇಳಿದರು. ಆದ್ರೆ ನಾವಿಬ್ಬರೂ ಅಡ್ಜಸ್ಟ್ ಆಗಲು ಒಪ್ಪಲಿಲ್ಲ. ಹಾಗಾಗಿ ಸಿನಿಮಾ ಆಫರ್ ನಾವು ಕಳೆದುಕೊಳ್ಳಬೇಕಾಯ್ತು ಎಂದು ಚರ್ಮಿಲಾ ತಿಳಿಸಿದ್ದಾರೆ.
ಸೀನಿಯರ್‌ಗಳು ನನ್ನ ಎದೆಗೆ ಕೈ ಹಾಕುತ್ತಿದ್ರು : ಬಾಲ್ಯದಲ್ಲಿ ಅನುಭವಿಸಿದ ಕಿರುಕುಳ ಬಿಚ್ಚಿಟ್ಟ ನಟ