ಬಾಲಿವುಡ್ ನಟಿ ಅನನ್ಯಾ ಪಾಂಡೆ 16 ವರ್ಷಗಳಿಂದ ತಮ್ಮ ಜೊತೆಗಿದ್ದ ತಮ್ಮ ಪ್ರೀತಿಯ ನಾಯಿಮರಿಯನ್ನು ಕಳೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾಯಿ ಮರಿಯ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಅನನ್ಯಾ ಪಾಂಡೆ 16 ವರ್ಷಗಳಿಂದ ತಮ್ಮ ಜೊತೆಗಿದ್ದ ತಮ್ಮ ಪ್ರೀತಿಯ ನಾಯಿಮರಿಯನ್ನು ಕಳೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾಯಿ ಮರಿಯ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಾಯಿ ಮರಿಯ ಜೊತೆ ಕಳೆದ ಹಲವು ಸುಂದರ ಕ್ಷಣಗಳ ಥ್ರೋ ಬ್ಯಾಕ್ ಫೋಟೋಗಳನ್ನು ಅನನ್ಯಾ ಪಾಂಡೆ ಶೇರ್ ಮಾಡಿದ್ದು, ನಿನ್ನನ್ನು ನಾನು ಪ್ರತಿದಿನವೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅನನ್ಯಾ ಪಾಂಡೆ 2008ರಲ್ಲಿ ಶ್ವಾನ ಫಡ್ಜ್‌ನನ್ನು ಮನೆಗೆ ಬರ ಮಾಡಿಕೊಂಡಿದ್ದರು. ಅಂದಿನಿಂದಲೂ ಈ ನಾಯಿಮರಿ ಅನನ್ಯಾ ಪಾಂಡೆ ಜೀವನದ ಭಾಗವಾಗಿತ್ತು. ಸಮಯ ಸಿಕ್ಕಾಗಲೆಲ್ಲಾ ಈ ಶ್ವಾನದ ಜೊತೆ ಆಟವಾಡುತ್ತಾ ಫೋಟೋ ತೆಗೆಯುತ್ತಾ ಎಂಜಾಯ್ ಮಾಡ್ತಿದ್ದರು ನಟಿ. ಆದರೆ ಈಗ ಈ ಫಡ್ಜ್ ವಯೋಸಹಜವಾಗಿ ಸಾವನ್ನಪ್ಪಿದ್ದು, ಪ್ರೀತಿಯ ಶ್ವಾನದ ಸಾವಿಗೆ ನಟಿ ಕಂಬನಿ ಮಿಡಿದಿದ್ದಾರೆ.
ಅನನ್ಯಾ ಪಾಂಡೆ 10 ವರ್ಷವಿದ್ದಾಗ ಮನೆಗೆ ಈ ಶ್ವಾನ ಬಂದಿದ್ದರಿಂದ ಶ್ವಾನವನ್ನು ಮುದ್ದಾಡುತ್ತಾ ಜೊತೆ ಜೊತೆಗೆ ಬೆಳೆದ ಅನನ್ಯಾ ಪಾಂಡೆಗೆ ಈಗ 25 ವರ್ಷ. ಹೀಗಾಗಿ ಬಾಲ್ಯದಲ್ಲಿ ಜೊತೆಯಾಗಿದ್ದ ಈ ಶ್ವಾನದ ನೆನಪು ನಟಿಯನ್ನು ತೀವ್ರವಾಗಿ ಕಾಡುತ್ತಿದೆ.
ಈ ಬಗ್ಗೆ ಸೋಶೀಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅನನ್ಯಾ ಪಾಂಡೆ, ರೆಸ್ಟ್ ಇನ್ ಪೀಸ್ ಪಡ್ಜ್, ನಾನು ನಿನ್ನನ್ನು ಪ್ರೀತಿಸುತ್ತೇನೆ ಫೈಟರ್, ನಿನ್ನ ಜೊತೆ ಕಳೆದ 16 ವರ್ಷಗಳು ಖುಸಿ ಹಾಗೂ ಆಹಾರದಿಂದ ಕೂಡಿದ್ದವು. ನಾನು ನಿನ್ನನ್ನು ಪ್ರತಿದಿನವೂ ಮಿಸ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ ಪೋಸ್ಟ್‌ಗೆ ನೆಟ್ಟಿಗರು ಅಭಿಮಾನಿಗಳು, ಸೆಲೆಬ್ರಿಟಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದು, ಶ್ವಾನದ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಅನನ್ಯಾ ಪಾಂಡೆ ರಿಯಟ್ ಹೆಸರಿನ ಮತ್ತೊಂದು ನಾಯಿಮರಿಯನ್ನು ದತ್ತು ಪಡೆದಿದ್ದರು. ಇದರ ಫೋಟೋಗಳನ್ನು ಕೂಡ ಅನನ್ಯಾ ಪಾಂಡೆ ಆಗಾಗ ಪೋಸ್ಟ ಮಾಡ್ತಿರ್ತಾರೆ.
ಅನನ್ಯಾ ಪಾಂಡೆ ಸಿನಿಮಾ ಬಗ್ಗೆ ಹೇಳುವುದಾದರೆ ಅನನ್ಯಾ ಕೊನೆಯದಾಗಿ ನೆಟ್‌ಫ್ಲಿಕ್ಸ್‌ನ 'ಖೋ ಗಯೆ ಹಮ್ ಕಹಾ' ದಲ್ಲಿ ನಟಿಸಿದ್ದಾರೆ. ಅರ್ಜುನ್ ವರೈನ್ ಸಿಂಗ್ ನಿರ್ದೇಶನದ ಈ ಸಿನಿಮಾದಲ್ಲಿ ಸಿದ್ಧಾರ್ಥ್ ಚತುರ್ವೇದಿ, ಆದರ್ಶ ಗೌರವ್ ಹಾಗೂ ಕಲ್ಕಿ ಕೊಚ್ಚಿನ್ ನಟಿಸಿದ್ದಾರೆ. ಇದು ಮಾತ್ರವಲ್ಲದೇ ಅನನ್ಯಾ ಕೈಯಲ್ಲಿ ಕಂಟ್ರೋಲ್ ಹಾಗೂ ಅನ್‌ಟೋಲ್ಡ್ ಸ್ಟೋರಿ ಆಫ್ ಸಿ ಶಂಕರನ್ ನಾಯರ್ ಎಂಬ ಪ್ರಾಜೆಕ್ಟ್‌ಗಳಿವೆ. ಕಾಲ್ ಮಿ ಬೇ ಎಂಬ ಶೋದಲ್ಲೂ ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ.