ಬಹುಭಾಷಾ ನಟ ಆಶಿಷ್ ವಿದ್ಯಾರ್ಥಿ ಮತ್ತು ಪತ್ನಿ ರೂಪಾಲಿ ಬರುವಾ ಬೆಂಗಳೂರಿನ ಪ್ರವಾಸದಲ್ಲಿದ್ದಾರೆ. ಈ ಜೋಡಿಯನ್ನು ನೋಡಿ ಅವರ ಮದುವೆಯ ಅರಿವಿಲ್ಲದ ಯೂಟ್ಯೂಬರ್ ಕೇಳಿದ್ದೇನು?
ಬಹುಭಾಷಾ ನಟ ಆಶಿಷ್ ವಿದ್ಯಾರ್ಥಿ (Ashish Vidyarthi) ಕಳೆದೊಂದು ವರ್ಷದಿಂದ ಭಾರಿ ಸುದ್ದಿಯಲ್ಲಿರುವ ನಟ. ಇದಕ್ಕೆ ಕಾರಣ, ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ವಿವಾಹವಾಗಿರುವುದು. ಅವರು ಮೊದಲು ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಇವರು ನಟಿ ಶಕುಂತಲಾ ಬರುವಾ ಅವರ ಪುತ್ರಿ. ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆದರೆ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ನಂತರ ಉದ್ಯಮಿ ರೂಪಾಲಿ ಅವರನ್ನ ಆಶಿಷ್ 60ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. ರೂಪಾಯಿ ಅವರಿಗೆ 33 ವರ್ಷ ವಯಸ್ಸು. ಕೋಲ್ಕತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈ ವಯಸ್ಸಿನಲ್ಲಿ ವಿವಾಹವಾದುದಕ್ಕೆ ಸಕತ್ ಟ್ರೋಲ್ ಕೂಡ ಆಗಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ್ದ ಆಶಿಷ್ ‘ಅನೇಕರು ನನ್ನ ಮದುವೆ ಬಗ್ಗೆ ಟ್ರೋಲ್ ಮಾಡಿದ್ದಾರೆ. ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಆದರೆ ತಪ್ಪೇನು? ನಾನು ಒಂಟಿಯಾಗಿ, ನೆಮ್ಮದಿಯಿಲ್ಲದೇ ಸಾಯಬೇಕಿತ್ತಾ?’ ಎಂದು ಅವರು ಪ್ರಶ್ನೆ ಮಾಡಿದ್ದರು. ಮದುವೆ ಅನ್ನುವುದು ವಯಸ್ಸಿಗೆ ಅಥವಾ ದೇಹಕ್ಕೆ ಸಂಬಂಧಿಸಿದ್ದಲ್ಲ, ಮನಸ್ಸಿಗೆ ಸಂಬಂಧಿಸಿದ್ದು ಎಂದು ಉತ್ತರ ನೀಡಿದ್ದರು. ಈ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದರು.
ಅದಾದ ಬಳಿಕ ಈ ಜೋಡಿ ಹನಿಮೂನ್ಗೆ ಇಂಡೋನೇಷ್ಯಾದ (Indonesia) ಬಾಲಿ ದ್ವೀಪಕ್ಕೆ ಹಾರಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಹಚ್ಚ ಹಸಿರಿನ ಬೆಟ್ಟಗಳ ಮಧ್ಯೆ ಕುಳಿತುಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಮೂಲಕ ಟ್ರೋಲ್ ಮಾಡುತ್ತಿರುವವರಿಗೆ ಹೊಟ್ಟೆ ಉರಿ ತರಿಸಿದ್ದರು. ಸದ್ಯ ಅವರ ವಿಷಯ ತಣ್ಣಗಾಗಿದೆ. ಆದರೆ ಬೆಂಗಳೂರಿಗೆ ಬಂದಿರೋ ಆಶಿಷ್ ಮತ್ತು ರೂಪಾಲಿ ಜೋಡಿಯನ್ನು ನೋಡಿ ಯೂಟ್ಯೂಬರ್ ಒಬ್ಬರು ಕೇಳಿರೋ ಪ್ರಶ್ನೆ ಈಗ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದೆ.
ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣು? ಮಗಳ ರಹಸ್ಯ ಪೋಸ್ಟ್ ಬೆನ್ನಲ್ಲೇ ಘಟನೆ!
ಬೆಂಗಳೂರಿಗೆ ಬಂದಿರುವ ಈ ಜೋಡಿಯನ್ನು ಮಾತನಾಡಿಸಿದ್ದಾರೆ ಯೂಟ್ಯೂಬರ್. ಅವರಿಗೆ ಆಶಿಷ್ ವಿದ್ಯಾರ್ಥಿ ಬಗ್ಗೆ ಗೊತ್ತು ಬಿಟ್ಟರೆ, ಅವರು ಮದುವೆಯಾದ ವಿಷಯ ಗೊತ್ತಿರಲಿಲ್ಲ ಎನ್ನಿಸುತ್ತಿದೆ. ಮೊದಲು ತಮ್ಮನ್ನು ಫೋಟೋಗ್ರಾಫರ್ ಎಂದು ಪರಿಚಯ ಮಾಡಿಸಿಕೊಂಡಿರುವ ಅವರು, ಆಶಿಷ್ ಅವರು ಬೆಂಗಳೂರಿಗೆ ಬಂದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಸ್ಟ್ಯಾಂಡ್ ಅಪ್ ಕಮೀಡಿಯನ್ ಷೋ ಇರುವ ಕಾರಣ ತಾವು ಬಂದಿರುವುದಾಗಿ ಆಶಿಷ್ ಹೇಳಿದ್ದಾರೆ. ನಂತರ ನಿಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದಾಗ, ಕೂದಲನ್ನು ಸರಿಮಾಡಿಕೊಂಡ ಆಶಿಷ್ ಅವರು ದೂರದಲ್ಲಿ ನಿಂತಿದ್ದ ರೂಪಾಲಿ ಅವರನ್ನು ಕರೆದಿದ್ದಾರೆ. ಇಬ್ಬರೂ ಒಟ್ಟಿಗೇ ನಿಂತದ್ದು ನೋಡಿ ಯೂಟ್ಯೂಬರ್ಗೆ ಏನು ಎಂದು ಅರ್ಥವಾಗಿಲ್ಲ. ಅದಕ್ಕೇ ಅವರು ಇವರು ನಿಮ್ಮ ಫ್ರೆಂಡಾ, ಪತ್ನಿನಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಥಟ್ ಅಂತ ಆಶಿಷ್ ಅವರು ನಾವು ಫ್ರೆಂಡ್ಸೇ ಆದ್ರೆ ಮದ್ವೆಯಾಗಿದ್ದೇವೆ ಎಂದಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಯೂಟ್ಯೂಬರ್ ಕಾಲೆಳೆಯುತ್ತಿದ್ದಾರೆ. ಪುಣ್ಯಕ್ಕೆ ಮಗಳಾ ಎಂದು ಕೇಳಲಿಲ್ಲ, ಅಷ್ಟೇ ಸಾಕು ಎನ್ನುತ್ತಿದ್ದಾರೆ.
ಅಂದಹಾಗೆ ಆಶಿಷ್ ವಿದ್ಯಾರ್ಥಿ ಅವರು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿದ್ದಾರೆ. ಆಶಿಶ್ ವಿದ್ಯಾರ್ಥಿ ಪ್ಯಾನ್-ಇಂಡಿಯನ್ ನಟನಾಗಿದ್ದರೂ ಹೆಚ್ಚಾಗಿ ತಮಿಳು (Tamil) ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಟಾಲಿವುಡ್, ಕಾಲಿವುಡ್, ಹಾಗೂ ಸ್ಯಾಂಡಲ್ವುಡನಲ್ಲಿ ಖಳನಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಬಾ, ಗಿಲ್ಲಿ, ಮಾಪಿಳ್ಳೈ, ಉತ್ತಮ ಪುತ್ರನ್ ಸೇರಿದಂತೆ ಹಲವು ತಮಿಳು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಅವರ ವಿಲನ್ ಲುಕ್ಗೆ ಅವರೇ ಸಾಟಿ. ಅತ್ಯುತ್ತಮ ಅಭಿನಯಕ್ಕಾಗಿ 1995 ರಲ್ಲಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇತ್ತೀಚಿಗೆ ಸಿನಿಮಾಗಳಲ್ಲಿ ಅವರು ಆಶಿಷ್ ವಿದ್ಯಾರ್ಥಿ ಹೆಚ್ಚು ಕಾಣಿಸಿಕೊಂಡಿಲ್ಲ. ಅವರೊಂದು ಯೂಟ್ಯೂಬ್ ಶುರು ಮಾಡಿದ್ದು, ಅದರಲ್ಲಿ ಆಹಾರದ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಕರ್ನಾಟಕದ ಆಹಾರ ಎಂದರೆ ಅವರಿಗೆ ಪ್ರೀತಿ. ತಮ್ಮಿಷ್ಟದ ಊಟದ ಬಗ್ಗೆ ಆಶಿಷ್ ವಿಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ದೇಶದ ವಿವಿದ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಫೇಮಸ್ ಹೋಟೆಲ್‌ಗೆ ಹೋಗಿ ಊಟ ಸವಿದು ಅಭಿಮಾನಿಗಳಿಗೂ ವಿವರಿಸುತ್ತಿದ್ದಾರೆ.
ಬಹುತೇಕ ಹೆಣ್ಣುಮಕ್ಕಳಿಗೆ ಗಂಡನ ಬಗ್ಗೆ ಇಂಥ ವಿಚಿತ್ರ ಬಯಕೆ ಇರುತ್ತಂತೆ! ನಿಮಗೇನಾದ್ರೂ ಹೀಗೆ ಅನ್ನಿಸಿದ್ಯಾ?