ಹಿರಿಯ ನಟ ಅನುಪಮ್ ಖೇರ್ ಮದುವೆಯಾಗಿ 1ವರ್ಷದೊಳಗೆ ಮೊದಲ ಪತ್ನಿಯಿಂದ ದೂರವಾಗಿದ್ದೇಕೆ?

Published : Sep 19, 2023, 06:46 PM IST
ಹಿರಿಯ ನಟ ಅನುಪಮ್ ಖೇರ್ ಮದುವೆಯಾಗಿ 1ವರ್ಷದೊಳಗೆ ಮೊದಲ ಪತ್ನಿಯಿಂದ ದೂರವಾಗಿದ್ದೇಕೆ?

ಸಾರಾಂಶ

ಹಿರಿಯ ನಟ ಅನುಪಮ್ ಖೇರ್  ಸಂಸದೆ ಕಿರಣ್ ಖೇರ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಮೊದಲ ಮದುವೆಯಾಗಿದ್ದರು. ಪರಿಚಯಸ್ಥಳನ್ನೇ ಮದುವೆಯಾಗಿದ್ದರು ಕೂಡ ಮೊದಲ ಮದುವೆ ಖೇರ್ ಗೆ ಇಷ್ಟವಿರಲಿಲ್ಲ. ಮದುವೆಯಾಗಿ ವರ್ಷದೊಳಗೆ ಆ ಸಂಬಂಧ ಮುರಿದು ಬಿತ್ತು.

ಹಿರಿಯ ನಟ ಅನುಪಮ್ ಖೇರ್ ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವೇ ಇಲ್ಲ. ಕಳೆದ ಮೂರು ದಶಕಗಳಿಂದ ತಮ್ಮ ಅತ್ಯುತ್ತಮ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಅನುಪಮ್ ಖೇರ್ ತಮ್ಮ  ವೃತ್ತಿ ಬದುಕಿನಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.  ಪ್ರತೀ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಅನುಪಮ್ ಖೇರ್ ಕಳೆದ 38 ವರ್ಷಗಳಿಂದ ನಟಿ ಮತ್ತು ಬಿಜೆಪಿ ಸಂಸದೆ ಕಿರಣ್ ಖೇರ್ ಅವರೊಂದಿಗೆ ಸಂತೋಷದ  ಜೀವನ ನಡೆಸುತ್ತಿದ್ದಾರೆ. ಆದರೆ ಕಿರಣ್ ಖೇರ್ ಅವರು ಅನುಪಮ್ ಖೇರ್ ಅವರ ಮೊದಲ ಪತ್ನಿಯಲ್ಲ ಎಂಬುದು ನಿಮಗೆ ಗೊತ್ತೇ?

17ನೇ ವಯಸ್ಸಿಗೆ ಸೂಪರ್‌ಸ್ಟಾರ್‌ ನಟಿ, ಕುಟುಂಬಕ್ಕೆ ವಿರುದ್ಧವಾಗಿ ಪ್ರೇಮಿಯ ಕೈಹಿಡಿದು 21 ವರ್ಷ

ಮತ್ತೊಂದೆಡೆ, ಕಿರಣ್ ಖೇರ್ ಅವರು ಅನುಪಮ್‌ ಅವರನ್ನು ವಿವಾಹವಾಗುವುದಕ್ಕೂ ಮುನ್ನ ಮೊದಲ ವಿವಾಹವಾಗಿದ್ದರು.  ಕಿರಣ್ ಖೇರ್ ಮೊದಲ ಪತಿ ಗೌತಮ್ ಬೆರ್ರಿ , ಆದ್ರೆ ಗೌತಮ್ ಬೆರ್ರಿ ಅವರೊಂದಿಗಿನ ವಿವಾಹವು ಆರು ವರ್ಷಗಳ ನಂತರ ಕೊನೆಗೊಂಡಿತು. ಕಿರಣ್ ಖೇರ್ ಮತ್ತು ಗೌತಮ್ ಅವರಿಗೆ ಸಿಕಂದರ್ ಖೇರ್ ಎಂಬ ಮಗನಿದ್ದಾನೆ. ಕಿರಣ್ ಖೇರ್ 1985 ರಲ್ಲಿ ಗೌತಮ್  ಅವರಿಂದ ವಿಚ್ಚೇಧನ ಪಡೆದಿದ್ದಾರೆ.

ಅನುಪಮ್ ಖೇರ್  ಅವರು ಕಿರಣ್ ಖೇರ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ  ನಟಿ ಮಧುಮಾಲ್ತಿ ಕಪೂರ್ ಅವರನ್ನು ಮದುವೆಯಾಗಿದ್ದರು. ಆದರೆ ಕೇವಲ ಒಂದು ವರ್ಷದ ನಂತರ ಇಬ್ಬರೂ ಬೇರೆಯಾಗಿದ್ದರು. ಅನುಪಮ್ ಖೇರ್ 1979 ರಲ್ಲಿ ಮಧುಮಾಲ್ತಿ ಅವರನ್ನು ವಿವಾಹವಾದರು ಆದರೆ ಅವರ ವಿವಾಹವು ಅದೇ ವರ್ಷದಲ್ಲಿ ಕೊನೆಗೊಂಡಿತು. 

ಇಬ್ಬರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ನಲ್ಲಿ ಓದುತ್ತಿದ್ದಾಗ ಅನುಪಮ್ ಮತ್ತು ಮಧುಮಲ್ತಿ ಪರಸ್ಪರ ಭೇಟಿಯಾದರು. ಅನುಪಮ್ ಖೇರ್ ಮತ್ತು ಮಧುಮಲ್ತಿ ಅವರು ಎನ್‌ಎಸ್‌ಡಿಯಲ್ಲಿದ್ದಾಗ ಉತ್ತಮ ಸ್ನೇಹಿತರಾದರು.

17ನೇ ವಯಸ್ಸಿಗೆ ಚಿತ್ರರಂಗ ಎಂಟ್ರಿ, 19ನೇ ವಯಸ್ಸಿಗೆ ಸೂಪರ್‌ಸ್ಟಾರ್‌, 24ನೇ ವಯಸ್ಸಿಗೆ ನಟನೆ ಗುಡ್‌

ವರದಿಗಳ ಪ್ರಕಾರ, ಅನುಪಮ್ ಮತ್ತು ಮಧುಮಾಲ್ತಿಯ ಮದುವೆಯು ನಿಶ್ಚಯವಾದ ವಿಷಯವಾಗಿತ್ತು. ಇಬ್ಬರನ್ನು ಮದುವೆ ಮಾಡಿಸಲು ಕುಟುಂಬ ನಿರ್ಧರಿಸಿತು. ಕುಟುಂಬದ ಒತ್ತಡದ ಮೇರೆಗೆ ಅನಿವಾರ್ಯವಾಗಿ ಇಬ್ಬರೂ ಮದುವೆಯಾದರು. ಇಬ್ಬರೂ ಸ್ನೇಹಿತರಾಗಿದ್ದರೂ ಕೂಡ ಅನುಪಮ್ ಖೇರ್ ಮಧುಮಾಲ್ತಿಯನ್ನು ಮದುವೆಯಾಗಲು ವಿರೋಧಿಸಿದ್ದರು. ಇದುವೇ ಅವರ ಮದುವೆಯು ಒಂದು ವರ್ಷದೊಳಗೆ ಕೊನೆಗೊಳ್ಳಲು ಕಾರಣವೆಂದು ಹೇಳಲಾಗುತ್ತದೆ.

ಮಧುಮಲ್ತಿ ಕಪೂರ್‌ ತನ್ನಿಂದ ಬೇರೆಯಾದ ಕೆಲವು ವರ್ಷಗಳ ನಂತರ ಅನುಪಮ್ ಖೇರ್ ಕಿರಣ್ ಖೇರ್ ಅವರನ್ನು ಭೇಟಿಯಾದರು ಮತ್ತು ಇಬ್ಬರೂ 1985 ರಲ್ಲಿ ವಿವಾಹವಾದರು. ಮತ್ತೊಂದೆಡೆ, ಮಧುಮಲ್ತಿ ನಿರ್ದೇಶಕ ರಂಜಿತ್ ಕಪೂರ್ ಅವರನ್ನು ವಿವಾಹವಾದರು. 

ಮಧುಮಲ್ತಿ ಕಪೂರ್ ಇನ್ನೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರು ಕೊನೆಯದಾಗಿ ಅಯನ್ ಮುಖರ್ಜಿಯವರ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಂಡರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!