
ನಟ, ರಾಜಕಾರಣಿ ರಾಜ್ ಬಬ್ಬರ್ (Actor and Politician Raj Babbar) ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 1996ರ ಪ್ರಕರಣದ ತೀರ್ಪು ಈಗ ಪ್ರಕಟಿಸಿದ ಲಕ್ನೋ ನ್ಯಾಯಾಲಯ 2 ವರ್ಷ ಜೈಲು ಜೊತೆಗೆ 8500 ರೂಪಾಯಿ ದಂಡ ವಿದಿಸಿದೆ. ಚುನಾವಣಾಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್‌ಗೆ ಜೈಲು ಶಿಕ್ಷೆಯಾಗಿದೆ. 1996ರ ಮೇ ತಿಂಗಳಲ್ಲಿ ನಡೆದ ಚುನಾವಣೆ ವೇಳೆ ಅವರು ಈ ಕೃತ್ಯ ಎಸಗಿದ್ದರು.
ನಟ-ರಾಜಕಾರಣಿ ರಾಜ್ ಬಬ್ಬರ್ ಸಾರ್ವಜನಿಕ ಸೇವೆಯಲ್ಲಿದ್ದ ವ್ಯಕ್ತಿಯನ್ನು ಕರ್ತವ್ಯ ನಿರ್ವಹಿಸದಂತೆ ತಡೆದಿರುವುದು, ಹರ್ಟ್ ಮಾಡಿರುವುದು ಸೇರಿದಂತೆ ಒಟ್ಟು ಇತರ ಮೂರು ಆರೋಪ ರಾಜ್ ಬಬ್ಬರ್ ವಿರುದ್ಧ ವಿತ್ತು. 1996ರ ಮೇನಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ರಾಜ್ ಬಬ್ಬರ್ ವಿರುದ್ಧ FIR ದಾಖಲಿಸಲಾಗಿತ್ತು. ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಸಮಾಜವಾದಿ ಪಕ್ಷದಿಂದ ರಾಜ್ ಬಬ್ಬರ್ ಸ್ಪರ್ಧಿಸಿದ್ದರು. 1996ರ ಚುನಾವಣೆಯಲ್ಲಿ ರಾಜ್ ಬಬ್ಬರ್ ಸೋತಿದ್ದರು.
ತೀರ್ಪು ಪ್ರಕಟವಾದಾಗ ರಾಜ್ ಬಬ್ಬರ್ ನ್ಯಾಯಾಲಯದಲ್ಲಿ ಹಾಜರಿದ್ದರು. ತೀರ್ಪು ಪ್ರಕಟವಾದಾಗ ರಾಜ್ ಬಬ್ಬರ್ ನ್ಯಾಯಾಲಯದಲ್ಲಿ ಹಾಜರಿದ್ದರು. ಮತಗಟ್ಟೆ ಅಧಿಕಾರಿ ಶ್ರೀಕೃಷ್ಣ ಸಿಂಗ್ ರಾಣಾ ಅವರು ಬಬ್ಬರ್, ಯಾದವ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಬಬ್ಬರ್ ಮತ್ತು ಅವರ ಬೆಂಬಲಿಗರು ಮತಗಟ್ಟೆ ಕೇಂದ್ರಕ್ಕೆ ನುಗ್ಗಿ ಸುಳ್ಳು ಆರೋಪ ಹೊರಿಸಿ ಶಿವಕುಮಾರ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಹೆಂಡತಿ ಮಕ್ಕಳಿದ್ದರೂ ಸ್ಮಿತಾ ಪಾಟೀಲ್‌ನಿಂದ ದೂರವಾಗಲಿಲ್ಲ ರಾಜ್ ಬಬ್ಬರ್!
ರಾಜ್ ಬಬ್ಬರ್ ನಟನಾಗಿ ಮತ್ತು ರಾಜಕೀರಣಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ, ಸೀರಿಯಲ್, ವೆಬ್ ಸೀರಿಸ್ ಸೇರಿದಂತೆ ಎಲ್ಲಾ ಕಡೆ ನಟಿಸಿ ಫೇಮಸ್ ಆಗಿದ್ದಾರೆ. ಇತ್ತೀಚಿಗಷ್ಟೆ ರಾಜ್ ಬಬ್ಬರ್ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆದ ದಿಲ್ ಬೇಕರಾರ್ ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. 150ಕ್ಕೂ ಅಧಿಕಾ ಸಿನಿಮಾ ಮತ್ತು ಅನೇಕ ನಾಟಕಗಳಲ್ಲಿ ರಾಜ್ ಬಬ್ಬರ್ ನಟಿಸಿದ್ದಾರೆ. ನಟನೆ ಜೊತೆಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಾಜ್ ಬಬ್ಬರ್ ಸಾಮಾಜವಾದಿ ಪಕ್ಷ ಸೇರಿದರು.
2ನೇ ಪತ್ನಿಯ ಮರಣದ ನಂತರ ರೇಖಾ ಜೊತೆ ಸಂಬಂಧದಲ್ಲಿದ್ದ ರಾಜ್ ಬಬ್ಬರ್ !
1994ರಲ್ಲಿ ರಾಜ್ಯ ಸಭೆಗೆ ನಾಮನಿರ್ದೇಶಗೊಂಡರು. 2008ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಮೂರು ಬಾರಿ ಅವರು ಸಂಸದರಾಗಿ ಆಯ್ಕೆಆಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜ್ ಬಬ್ಬರ್ ಅನುಭವ ಅಪಾರ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದಿರುವ ರಾಜ್ ಬಬ್ಬರ್ ಸಿನಿಮಾದಲ್ಲೂ ಫೇಮಸ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.