
ವಿಶಿಷ್ಟ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಮನೆ ಮಾತಾಗಿರುವ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ನಟನೆಯ ಬಹುನಿರೀಕ್ಷಿತ ಸಿನಿಮಾ ಡ್ರೈವರ್ ಜಮುನಾ (Driver Jamuna) ಚಿತ್ರದ ಟ್ರೇಲರ್ (Trailer) ರಿಲೀಸ್ (Release) ಆಗಿದೆ. ಈ ಸಿನಿಮಾದಲ್ಲಿ ಹೆಣ್ಣು, ಡ್ರೈವರ್ ವೃತ್ತಿಗೆ ಇಳಿದಾಗ ಆಕೆ ಎದುರಿಸುವ ಸವಾಲುಗಳನ್ನು ಇಡೀ ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ. ಕನ್ನಡದಲ್ಲಿ ಈ ಟ್ರೇಲರ್ ಅನ್ನು ಬಹುಭಾಷಾ ನಟ ಕಿಶೋರ್ (Actor Kishor) ಬಿಡುಗಡೆ ಮಾಡುವ ಮೂಲಕ ಸಿನಿಮಾಗೆ ಸಾಥ್ ನೀಡಿದ್ದಾರೆ.
'ವತ್ತಿಕುಚ್ಚಿ’ ಸಿನಿಮಾ ಖ್ಯಾತಿಯ ಪಾ. ಕನ್ಸ್ಲಿನ್ ನಿರ್ದೇಶನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಐಶ್ವರ್ಯಾ ರಾಜೇಶ್ ಕ್ಯಾಬ್ ಡ್ರೈವರ್ ಆಗಿ ಬಣ್ಣ ಹಚ್ಚಿದ್ದಾರೆ. ತಾರಾಬಳಗದಲ್ಲಿ ಆಡುಕಳಂ ನರೇನ್, ಶ್ರೀ ರಂಜನಿ, ‘ಸ್ಟ್ಯಾಂಡ್ ಅಪ್ ಕಾಮಿಡಿಯನ್’ ಅಭಿಷೇಕ್, ‘ರಾಜಾ ರಾಣಿ’ ಸಿನಿಮಾ ಖ್ಯಾತಿಯ ಪಾಂಡಿಯನ್, ಕವಿತಾ ಭಾರತಿ, ಮಣಿಕಂದನ್, ರಾಜೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಗೋಕುಲ್ ಬೆನೊಯ್ ಛಾಯಾಗ್ರಹಣ, ಗಿಬ್ರಾನ್ ಸಂಗೀತ ಜವಾಬ್ದಾರಿ ಹೊತ್ತುಕೊಂಡಿದ್ದು, ಎಸ್.ಪಿ.ಚೌದರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಹುಟ್ಟಿ, ಬೆಳೆದದ್ದು ಸ್ಲಮ್‌ನಲ್ಲಿ, ಮಿಂಚ್ತಿರೋದು ಕಾಲಿವುಡ್‌ನಲ್ಲಿ: ನಟಿ ಐಶ್ವರ್ಯಾರ ಮನಮುಟ್ಟುವ ಕಥೆ
ಅಂದಹಾಗೆ ಡ್ರೈವರ್ ಜಮುನಾ ಸಿನಿಮಾದ ಟ್ರೈಲರ್ ಕನ್ನಡದ (Kannada) ಜೊತೆಗೆ ಬೇರೆ ಬೇರೆ ಬಾಷೆಯಲ್ಲೂ ತೆರೆಗೆ ಬಂದಿದೆ. ತಮಿಳಿನಲ್ಲಿ ನಟರಾಟ ಶಿವಕಾರ್ತಿಕೇಯನ್ ಮತ್ತು ಶಶಿಕುಮಾರ್ ರಿಲೀಸ್ ಮಾಡಿದರು. ತೆಲುಗಿನಲ್ಲಿ ಸುರೇಶ್ ಪ್ರೋಡಕ್ಷನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಮಲಯಾಳಂನಲ್ಲಿ ನಟ ಉನ್ನಿಮುಕುಂದನ್ ಬಿಡುಗಜೆ ಮಾಡುವ ಮೂಲಲಕ ಸಿನಿಮಾ ತಂಡಕ್ಕೆ ಶುಭಕೋರಿದರು. ಡ್ರೈವರ್ ಜಮುನಾ ವಿಭಿನ್ನ ಕಾನ್ಸೆಪ್ಟ್ ಸಿನಿಮಾಗೆ ಸ್ಟಾರ್ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ ಟ್ರೈಲರ್ ಮೂಲಕ ಗಮನ ಸೆಳೆಯುತ್ತಿರುವ ಡ್ರೈವರ್ ಜಮುನಾನನ್ನು ನೋಡಲು ಅಭಿಮಾನಿಗಳ ಸಹ ಕಾತರರಾಗಿದ್ದಾರೆ.
ಅರಿಶಿಣ ದಾರ ಹಾಕಿ ಏರ್ಪೋಟ್‌ನಲ್ಲಿ ಕಾಣಿಸಿಕೊಂಡ ನಯನತಾರಾ; ಅಭಿಮಾನಿಗಳ ಮೆಚ್ಚುಗೆ
ಅಂದಹಾಗೆ ಡ್ರೈವರ್ ಜಮುನಾ ಸಿನಿಮಾದ ಬಗ್ಗೆ ಹೇಳುವುದಾದರೆ ಇದು ಮಹಿಳಾ ಕ್ಯಾಬ್ ಡ್ರೈವರ್ ಸುತ್ತ ನಡೆಯುವ ಘಟನೆಯಾಗಿದೆ. ಈ ಪಾತ್ರಕ್ಕಾಗಿ ನಟಿ ಐಶ್ವರ್ಯಾ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾರೆ. ಐಶ್ವರ್ಯಾ ಸ್ವತಃ ಹೋಗಿ ಡ್ರೈವರ್ ಗಳನ್ನು ಭೇಟಿಯಾಗಿ ಅವರ ಜೊತೆ ಮಾತನಾಡಿದ್ದಾರೆ. ಈ ಪಾತ್ರಕ್ಕಾಗಿ ಐಶ್ವರ್ಯಾ ಮಹಿಳಾ ಕ್ಯಾಬ್ ಡ್ರೈವರ್ ಭೇಟಿ ಮಾಡಿ ಅವರ ಹವಾ-ಭಾವವನ್ನು ತಮ್ಮ ಪಾತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಯಾವುದೇ ಡೂಪ್ ಬಳಸದೇ ಐಶ್ವರ್ಯಾ ತಮ್ಮ ಪಾತ್ರ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.