ಅತಿಯಾದ ಡ್ರಗ್: ಶವವಾಗಿ ಪತ್ತೆಯಾದ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್

By Shruthi Krishna  |  First Published May 23, 2023, 10:38 AM IST

ಖ್ಯಾತ ಮಾಡೆಲ್ ಮತ್ತು ನಟ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಅತಿಯಾದ ಡ್ರಗ್ ಕಾರಣ ಎಂದು ಹೇಳಲಾಗುತ್ತಿದೆ. 


ಖ್ಯಾತ ಮಾಡೆಲ್ ಹಾಗು ನಟ ಆದಿತ್ಯ ಸಿಂಗ್ ರಜಪೂತ್ ಮುಂಬೈನ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ನಿನ್ನೆ (ಮೇ 22) ಶವವಾಗಿ ಪತ್ತೆಯಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾತ್‌ರೂಮಿನಲ್ಲಿ ಬಿದ್ದಿದ ಆದಿತ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆಗಲೇ ಸಾವನ್ನಪ್ಪಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಆದಿತ್ಯ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದರು. ವರದಿಗಳ ಪ್ರಕಾರ ಆದಿತ್ಯ ಅತಿಯಾದ ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ  ಕೃಷ್ಣಕಾಂತ್ ಉಪಾಧ್ಯಾಯ, 'ಏನಾಯಿತು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ. ನಮಗೆ ಅಗತ್ಯ ವಿವರಗಳು ಲಭ್ಯವಾದ ಬಳಿಕ ಮಾಹಿತಿ ನೀಡುತ್ತೇವೆ' ಎಂದು ಹೇಳಿದ್ದಾರೆ. ಶವಪರೀಕ್ಷೆಗೆ ಆದಿತ್ಯ ಪಾರ್ಥಿವ ಶರೀರವನ್ನು ಸಿದ್ಧಾರ್ಥ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಇಂದು ಬೆಳಗ್ಗೆ 10 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ಆರಂಭವಾಗಲಿದೆ. ನಟನ ಕುಟುಂಬ ಶೀಘ್ರದಲ್ಲೇ ಮುಂಬೈ ತಲುಪಲಿದೆ.

RRR ಚಿತ್ರದ ನಟ ಇನ್ನಿಲ್ಲ; ರೇ ನೆನೆದು ಭಾವುಕರಾದ ರಾಜಮೌಳಿ

Tap to resize

Latest Videos

ಆದಿತ್ಯ ಸಿಂಗ್ ರಜಪೂತ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಕೇವಲ ಐದು ದಿನಗಳ ಹಿಂದೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದರು, ನಿಮ್ಮ ಪ್ರಕಾರ ಸಂತೋಷ ಎಂದರೇ ಏನು ಎನ್ನುವ ವಿಡಿಯೋ ಹಂಚಿಕೊಂಡಿದ್ದರು.

 Sarath Babu Death: ಫಲಿಸದ ಪ್ರಾರ್ಥನೆ, 'ಅಮೃತವರ್ಷಿಣಿ' ನಟ ಶರತ್ ಬಾಬು ಇನ್ನಿಲ್ಲ

ದೆಹಲಿ ಮೂಲದ ನಟ ಮತ್ತು ಮಾಡೆಲ್ ಆದಿತ್ಯ ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಅವರು ಕ್ರಾಂತಿವೀರ್ ಮತ್ತು ಮೈನೆ ಗಾಂಧಿ ಕೊ ನಹಿಂ ಮಾರಾ ಮುಂತಾದ ಚಿತ್ರಗಳ ನಟಿಸಿದ್ದಾರೆ. ಜೊತೆಗೆ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. MTV ಸ್ಪ್ಲಿಟ್ಸ್ವಿಲ್ಲಾ 9 ನಲ್ಲಿ ಭಾಗವಹಿಸಿದ್ದರು. ಲವ್, ಆಶಿಕಿ, ಕೋಡ್ ರೆಡ್, ಆವಾಜ್ ಸೀಸನ್ 9, ಬ್ಯಾಡ್ ಬಾಯ್ ಸೀಸನ್ 4, ಮತ್ತು ಇತರ ಟಿವಿ ಪ್ರಾಜೆಕ್ಟ್‌ಗಳಲ್ಲೂ ಕಾಣಿಸಿಕೊಂಡಿದ್ದರು. 

click me!