ಅಯ್ಯೋ, ನಟ ನಾನಿಗೆ ಹುಚ್ಚ ಅಂದಿದ್ಯಾಕೆ; ಪವರ್ ಕಟ್ ಆದ್ರೆ ಹಾಗೆಲ್ಲಾ ಮಾಡ್ತಿದ್ರಾ 'ಈಗ' ನಟ!

By Shriram BhatFirst Published Feb 12, 2024, 3:43 PM IST
Highlights

ಸಹಜವಾಗಿಯೇ ಶಾಲೆ, ಕಾಲೇಜು ಓದಿನ ಬಳಿಕ ಮನೆಯಲ್ಲಿ ಕೆಲಸಕ್ಕೆ ಹೋಗು ಎಂಬ ಮಾತು ಬಂದಾಗ ನಾನಿಗೆ ತುಂಬಾ ಬೇಸರವಾಗಿತ್ತಂತೆ. ಆದರೆ ಅವರಿಗೆ ನಟನೆ, ಸಿನಿಮಾ ಇವುಗಳನ್ನೇ ಮಾಡಿಕೊಂಡಿರಬೇಕು ಎಂಬ ಆಸೆ ಬಲವಾಗಿಯೇ ಇತ್ತಂತೆ. 

ತೆಲುಗು ನಟ ನಾನಿ ಬಹುತೇಕ ಎಲ್ಲರಿಗೂ ಗೊತ್ತಿದೆ. ತೆಲುಗು ಉದ್ಯಮ ಹೊರತುಪಡಿಸಿ ಕೂಡ ನಟ ನಾನಿ ಇಡೀ ಇಂಡಿಯಾಕ್ಕೆ ಗೊತ್ತು. ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಬಳಿಕವಂತೂ ನಟ ನಾನಿ ಇಂಟರ್‌ನ್ಯಾಷನಲ್ ಮಟ್ಟದಲ್ಲೂ ಫೇಮಸ್ ಎನ್ನಬಹುದು. ಇಂಥ ನಾನಿ ಚಿಕ್ಕವರಿದ್ದಾಗ ಹೇಗಿದ್ದಿರಬಹುದು? ಅವರ ಮನೆಯವರು, ಆಪ್ತರು ಎಲ್ಲರ ಬಗ್ಗೆ ಸಹಜವಾದ ಕುತೂಹಲ ಎಲ್ಲರಿಗೂ ಇದ್ದೇ ಇದೆ ಅಲ್ಲವೇ? ನಾನಿಯೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅವರ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸುವುದರ ಜತೆಜತೆಗೆ ನಾನಿ ಮಾಡಿರುವ ಸಾಧನೆ ಬಗ್ಗೆ ಹೆಮ್ಮೆ ಕೂಡ ಮೂಡುತ್ತದೆ.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. ನಾನಿ ಆಗಿನ್ನು ಚಿಕ್ಕ ಹುಡುಗನಾಗಿದ್ದರಂತೆ. ಅವರನ್ನು ಎಲ್ಲರೂ 'ಸಿನಿಮಾ ಹುಚ್ಚ' ಎಂದೇ ಕರೆಯುತ್ತಿದ್ದರಂತೆ. ಅವರು ಸಿನಿಮಾ ನೋಡಲು ಶುರು ಮಾಡಿದರೆ ಬಿಟ್ಟೂಬಿಡದೇ ನೋಡುತ್ತಿದ್ದರಂತೆ. ಸಿನಿಮಾ ಮಧ್ಯೆ ಪವರ್ ಕಟ್ ಏನಾದರೂ ಆಗಿಬಟ್ಟರೆ ನಾನಿ ಬಹಳಷ್ಟು ದುಃಖ ಪಡುತ್ತಿದ್ದರಂತೆ. ಇಡೀ ದಿನ ಆ ಬಗ್ಗೆಯೇ ಮಾತನಾಡುತ್ತ ಸಿನಿಮಾ ಪೂರ್ತಿ ನೋಡಲಾಗಲಿಲ್ಲ ಎಂಬ ಕೊರಗಿನಲ್ಲೇ ಕಳೆಯುತ್ತಿದ್ದರಂತೆ. ಅವರಿಗೆ ಸಿನಿಮಾ ಹುಚ್ಚು ಅದೆಷ್ಟು ಇತ್ತು ಎಂದರೆ ಅವರು ಸಿನಿಮಾ ನೋಡದೇ ಒಂದು ದಿನ ಕೂಡ ಕಳೆಯುತ್ತಿರಲಿಲ್ಲವಂತೆ. 

'ರಂಗನಾಯಕ'ನ ಕಾಂಟ್ರೋವರ್ಸಿ ಶುರು; ಗಾಳಿ ತಂಗಾಳಿ ಅಂತ 'ಬಿರುಗಾಳಿ' ಎಬ್ಬಿಸಲು ಹೊರಟ್ರಾ ಗುರೂ..!?

ಸಹಜವಾಗಿಯೇ ಶಾಲೆ, ಕಾಲೇಜು ಓದಿನ ಬಳಿಕ ಮನೆಯಲ್ಲಿ ಕೆಲಸಕ್ಕೆ ಹೋಗು ಎಂಬ ಮಾತು ಬಂದಾಗ ನಾನಿಗೆ ತುಂಬಾ ಬೇಸರವಾಗಿತ್ತಂತೆ. ಆದರೆ ಅವರಿಗೆ ನಟನೆ, ಸಿನಿಮಾ ಇವುಗಳನ್ನೇ ಮಾಡಿಕೊಂಡಿರಬೇಕು ಎಂಬ ಆಸೆ ಬಲವಾಗಿಯೇ ಇತ್ತಂತೆ. ತಾವು ಮನೆಯವರು ಹೇಳಿದಂತೆ ಕೆಲಸಕ್ಕೆ ಹೋಗದೇ ಸಿನಿಮಾ ಕಡೆ ಮುಖ ಮಾಡಿದರೆ ತಮಗೆ ಯಾರದ್ದೂ ಸಪೋರ್ಟ್‌ ಸಿಗುವುದಿಲ್ಲ ಎಂಬ ಬಗ್ಗೆ ನಾನಿಗೆ ಫುಲ್ ಕ್ಲಾರಿಟಿ ಇತ್ತಂತೆ. ಆದರೆ, ಅದಕ್ಕಿಂತ ಹೆಚ್ಚು ಕ್ಲಾರಿಟಿ ಇದ್ದಿದ್ದು ಯಾವುದರ ಬಗ್ಗೆ ಎಂಬುದನ್ನು ಕೂಡ ಸ್ವತಃ ನಾನಿಯೇ ಹೇಳಿಕೊಂಡಿದ್ದಾರೆ. 

ರಾಕ್‌ಲೈನ್ ವೆಂಕಟೇಶ್ ನನ್ನ ಹಿಂದಿರುವ ನಿಜವಾದ ದೊಡ್ಡ ಶಕ್ತಿ; ಸುಮಲತಾ ಅಂಬರೀಷ್

ಮನೆಯವರು ಹೇಳಿದ ಕೆಲಸ ನಾನು ಮಾಡಿಲ್ಲ ಎಂದರೆ ನನಗೆ ಯಾರದೂ ಸಹಕಾರ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನಾನು ಅದನ್ನು ಮಾಡಲು ಸಿದ್ಧನಿರಲಿಲ್ಲ. ಕಾರಣ, ನನಗೆ ಅದು ಇಷ್ಟವೇ ಆಗುತ್ತಿರಲಿಲ್ಲ. ಯಾರ ಸಪೋರ್ಟ್‌ ಸಿಗದಿದ್ದರೂ ನಾನು ನನಗಿಷ್ಟವಾದ ಕೆಲಸವನ್ನೇ ಮಾಡಬೇಕೆಂದು ಗಟ್ಟಿಯಾಗಿ ನಿರ್ಧಾರ ಮಾಡಿದ್ದೆ. ಕಾರಣ, ನನಗೆ ಎಲ್ಲರ ಸಹಕಾರ ಪಡೆದು ಇಷ್ಟವಿಲ್ಲದ ಕೆಲಸ ಮಾಡಿಕೊಂಡು ಜೀವಿಸುವುದಕ್ಕಿಂತ ನನಗಿಷ್ಟವಾದ ಕೆಲಸ ಮಾಡಿಕೊಂಡಿರುವುದೇ ಲೇಸು ಎನಿಸಿತ್ತು. ಒಬ್ಬಂಟಿಯಾಗಿ ಹೋರಾಟ ನಡೆಸಿ ಒಂದು ಹಂತಕ್ಕೆ ತಲುಪಿದ ಮೇಲೆ ನನಗೆ ಎಲ್ಲರ ಸಪೋರ್ಟ್‌ ಸಿಕ್ಕಿತು ಅದು ಬೇರೆ ಮಾತು' ಎಂದಿದ್ದಾರೆ ನಟ ನಾನಿ. 

ಸಾಯುವುದಕ್ಕೆ ಎರಡು ದಶಕಗಳ ಮೊದಲೇ ಸಾವಿನ ಬಾಗಿಲು ತಟ್ಟಿ ಬಂದಿದ್ದರು ನಟ ವಿಷ್ಣುವರ್ಧನ್!

click me!