ಪತ್ನಿ ಐಶ್ವರ್ಯ, ಅಮ್ಮ ಜಯಾ ಇನ್ನೂ ಬಹಳಷ್ಟು ಕೆಲಸ ಮಾಡ್ಬೇಕು ಅಂದಿದ್ಯಾಕೆ ಅಭಿಷೇಕ್ ಬಚ್ಚನ್?

By Suvarna News  |  First Published Aug 12, 2023, 5:35 PM IST

ನಟ ಅಭಿಷೇಕ್​ ಬಚ್ಚನ್​ ತಮ್ಮ ತಾಯಿ ಜಯಾ ಹಾಗೂ ಪತ್ನಿ ಐಶ್ವರ್ಯಾ ಅವರ ಕುರಿತು ಹೇಳಿದ್ದೇನು? ಅವರು ಹೆಚ್ಚೆಚ್ಚು ಚಿತ್ರಗಳನ್ನು ಒಪ್ಪಿಕೊಳ್ಳಬೇಕು ಎಂದಿದ್ದೇಕೆ? 
 


ಅಮಿತಾಭ್ ಬಚ್ಚನ್ (Amitabh Bachchan), ಜಯಾ ಬಚ್ಚನ್ ಅಥವಾ ಅಭಿಷೇಕ್, ಐಶ್ವರ್ಯಾ ರೈ ಅವರು ತಮ್ಮ ವಿಶಿಷ್ಟ ರೀತಿಯ  ನಟನಾ ಕೌಶಲಕ್ಕೆ ಹೆಸರುವಾಸಿಯಾದವರು. ಈಗ, ಅಭಿಷೇಕ್ ಬಚ್ಚನ್  ತಮ್ಮ ಮುಂಬರುವ ಚಿತ್ರ 'ಘೂಮರ್' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು  ಪತ್ನಿ ಐಶ್ವರ್ಯಾ ರೈ ಬಚ್ಚನ್​ ಅವರ  'ಪೊನ್ನಿಯಿನ್ ಸೆಲ್ವನ್' ಫ್ರಾಂಚೈಸ್ ಮತ್ತು ತಾಯಿ ಜಯಾ ಬಚ್ಚನ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯೊಂದಿಗೆ ಸಿನಿಮಾಕ್ಕೆ   ಪುನರಾಗಮನದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ತಮ್ಮ ತಾಯಿ ಮತ್ತು ಪತ್ನಿಯಲ್ಲಿ ಅಮೋಘ ಶಕ್ತಿಯಿದ್ದು, ಅವರು ಇನ್ನಷ್ಟು ಕೆಲಸ ಮಾಡುವುದನ್ನು, ಇನ್ನಷ್ಟು ಚಿತ್ರಗಳಲ್ಲಿ ಕೆಲಸ ಮಾಡುವುದನ್ನು ತಾವು ನೋಡಲು ಬಯಸುವುದಾಗಿ ಹೇಳಿದರು. 

ತಂದೆ ಮತ್ತು ತಾಯಿಯ ಚಿತ್ರಗಳ ಕುರಿತು ಮಾತನಾಡಿದ ಅಭಿಷೇಕ್​ (Abhishek Bachchan), ' ಇದೊಂದು ಭಾವನಾತ್ಮಕ ವಿಷಯವಾಗಿದೆ. ನನ್ನ ತಂದೆಯ ಕೆಲಸಗಳನ್ನು ನಾನು  ನಟನಾಗಿ ನೋಡುತ್ತೇನೆ. ಆದರೆ ತಾಯಿಯ ವಿಷಯದಲ್ಲಿ ಹಾಗಾಗುವುದಿಲ್ಲ. ಕೆಲವೊಂದು  ಭಯಂಕರ ತೀರ್ಪುಗಾರನಾಗುತ್ತೇನೆ ಎನಿಸುತ್ತದೆ. ಎಷ್ಟೆಂದರೂ ಆಕೆ ನನ್ನ ಅಮ್ಮ. ನಟಿಯಾಗಿ ಆಕೆಯ ಕೆಲಸವನ್ನು ನಾನು ವಿಮರ್ಶೆ ಮಾಡಲು ಸಾಧ್ಯವಾಗುವುದೇ ಇಲ್ಲ. ಅಮ್ಮನೇ ಕಾಣುತ್ತಾಳೆ ಎಣದಿದ್ದಾರೆ. ಅದೇನೆ ಇದ್ದರೂ ನನ್ನ ಕುಟುಂಬದ ಇಬ್ಬರು ಮಹಿಳೆಯರಿಗೆ ನಾನು ಹೇಳಬಹುದಾದ ಒಂದು ವಿಷಯವೆಂದರೆ ಅವರು ಹೆಚ್ಚು ಕೆಲಸ ಮಾಡಬೇಕು ಎಂದು. ಇದನ್ನೇ ನಾನು ಹೆಚ್ಚಾಗಿ  ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಸಿನಿಮಾದ ವೀಕ್ಷಕರಾಗಿ ಐಶ್ವರ್ಯಾ ಮತ್ತು ನನ್ನ ತಾಯಿ ಇಬ್ಬರೂ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಲ್ಲಿ ತುಂಬಾ ಟ್ಯಾಲೆಂಟ್​ ಇದೆ. ಅವರು ಇನ್ನೂ ಹೆಚ್ಚಿಗೆ ನೀಡಬೇಕಿದೆ. ಆದ್ದರಿಂದ ಅವರು ಅವರಿಷ್ಟದಂತೆ ಹೆಚ್ಚೆಚ್ಚು ಸಾಧನೆ ಮಾಡಿ, ಹೆಚ್ಚು ಚಿತ್ರಗಳಲ್ಲಿ ನಟಿಸುವುದೇ ನನ್ನ ಆಸೆ ಎಂದಿದ್ದಾರೆ.

Tap to resize

Latest Videos

ನಾನು ಮಾತ್ರವಲ್ಲ, ಕೋಪ ಬಂದ್ರೆ ಐಶ್ವರ್ಯಾ ರೈ ಕೂಡ ರಿಯಾಕ್ಟ್‌ ಮಾಡ್ತಾಳೆ: ಅತ್ತೆ ಜಯಾ ಬಚ್ಚನ್

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಚುಪ್‌’ ಚಿತ್ರಕ್ಕೆ ಹೆಸರುವಾಸಿಯಾದ ನಿರ್ದೇಶಕ ಆರ್. ಬಾಲ್ಕಿ ಅವರು ಇದೀಗ ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಕ್ರೀಡಾ ಆಧರಿತ ಘೂಮರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಪಘಾತದಲ್ಲಿ ಕೈಯನ್ನು ಕಳೆದುಕೊಂಡ ಕ್ರಿಕೆಟಿಗಳ ಸುತ್ತ ಈ ಕಥೆ ಸುತ್ತುತ್ತದೆ. ನಾಯಕಿಯ ಕೋಚ್​ ಆಗಿ ಅಭಿಷೇಕ್​ ಕಾಣಿಸಿಕೊಂಡಿದ್ದಾರೆ.  ಸಿನಿಮಾಗೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದಾರೆ.   ಒಂದು ಕೈಯಿಂದ  ಆಟವನ್ನು ಆಡಲಿ ಅಕೆಗೆ ಉತ್ತೇಜಿಸುವ ಕಥಾಹಂದರವನ್ನು ಇದು ಹೊಂದಿದೆ.  ಚಿತ್ರದಲ್ಲಿ ಅಂಗದ್ ಬೇಡಿ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಇದೇ 18ರಂದು  ಬಿಡುಗಡೆಯಾಗಲಿದೆ.   

ಈ ಹಿಂದೆ  ಜಯಾ ಬಚ್ಚನ್ (Jaya Bachchan) ತಮ್ಮ  ಸೊಸೆ ಐಶ್ವರ್ಯಾ ರೈ ಬಚ್ಚನ್ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.  ಅಮಿತಾಭ್‌ ಬಚ್ಚನ್‌ ಅವರು ಸೊಸೆ ಐಶ್ವರ್ಯಾಳನ್ನು  ತಮ್ಮ ಮಗಳು  ಶ್ವೇತಾರಂತೆ ನೋಡಿಕೊಳ್ಳುತ್ತಾರೆ ಎಂದಿದ್ದರು.  ಸೊಸೆಯನ್ನು ನೋಡಿದಾಗಲೆಲ್ಲಾ ಅಮಿತಾಜಿ ಅವರ  ಕಣ್ಣುಗಳು ಬೆಳಗುತ್ತವೆ. ಶ್ವೇತಾ ತವರು ತೊರೆದ ಬಳಿಕ, ಆಕೆಯ ಜಾಗವನ್ನು ಐಶ್ವರ್ಯ ತುಂಬಿದ್ದಾಳೆ. ನಮ್ಮ ಮಗಳು ಶ್ವೇತಾ ಈಗ ನಮ್ಮ ಕುಟುಂಬದ ಜೊತೆ ಇಲ್ಲ, ಪತಿಯ ಮನೆಯಲ್ಲಿದ್ದಾಳೆ. ಆ ದುಃಖವನ್ನು ಮರೆಸಿದ್ದು, ಐಶ್ವರ್ಯ. ಇಲ್ಲದಿದ್ದರೆ ಶ್ವೇತಾ ಇಲ್ಲದ ನೋವು ನಮ್ಮನ್ನು ಕಾಡುತ್ತಿತ್ತು' ಎಂದು ಜಯಾ ಬಚ್ಚನ್‌ ಹೇಳಿದ್ದರು.

ಸೊಸೆ ಐಶ್ವರ್ಯನ ರೈ ಕುರಿತು ಜಯಾ ಬಚ್ಚನ್​ ನೀಡಿದ ಹೇಳಿಕೆಗೆ ಫ್ಯಾನ್ಸ್​ ಗರಂ

click me!