
ಮಂಡ್ಯ (ಜೂ.15) : ಚಿತ್ರನಟ ದಿ.ಅಂಬರೀಶ್ ಹಾಗೂ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್- ಅವಿವಾ ವಿವಾಹದ ನಿಮಿತ್ತ ಜೂ.16ರಂದು ಬೀಗರ ಔತಣಕೂಟ ಏರ್ಪಸಿದ್ದು, ಇದಕ್ಕಾಗಿ ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ನಾಳೆ ಅಭಿಮಾನಿಗಳಿಗೆ ಬೊಂಬಾಟ್ ಬಾಡೂಟ ಹಾಕಿಸಲು ಅಂಬಿ ಕುಟುಂಬ ತಯಾರಿ ನಡೆಸಿದೆ. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಬೀಗರ ಊಟದ ಸಿದ್ಧತೆ. ಸುಮಾರು 50 ಸಾವಿರ ಜನರು ಆಗಮಿಸುವ ನಿರೀಕ್ಷೆಯಲ್ಲಿದೆ ಸಂಸದೆ ಸುಮಲತಾ ಅಂಬರೀಶ್ ಕುಟುಂಬ.
ವಿಶಾಲ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿಸಲಾಗಿದ್ದು ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ.
ಮಂಡ್ಯದಲ್ಲಿ ಅಭಿ-ಅವಿವಾ ಬೀಗರೂಟ: ಭರ್ಜರಿ ಬಾಡೂಟಕ್ಕೆ 14,000 ಕೆ.ಜಿ ಮಾಂಸ ರೆಡಿ!
ನಾಳೆ ಬೆಳಿಗ್ಗೆ 11:30ರಿಂದ ಆರಂಭವಾಗಲಿರುವ ಔತಣಕೂಟ. 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಮಂಡ್ಯ ಶೈಲಿಯ ಭರ್ಜರಿ ಬಾಡೂಟ ಸಿದ್ಧಪಡಿಸಲಾಗುತ್ತಿದೆ. ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ. ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿಸಾಂಬಾರ್, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಮೆನು ಇರಲಿದೆ.
ಅಭಿಮಾನಿಗಳು, ಮುಖಂಡರು ವಧು ವರರಿಗೆ ಕೇಕ್, ಹಾರ- ಬೊಕ್ಕೆ ತರದೆ ಬಂದು ಆಶೀರ್ವಾದ ಮಾಡದರೆ ಸಾಕು ಎಂದು ಅಭಿ ಮನವಿ ಮಾಡಿದ್ದಾರೆ. ಬೀಗರ ಔತಣಕೂಟಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಕುಟುಂಬ ಸದಸ್ಯರಂತೆ ಭಾಗಿಯಾಗಲಿದ್ದಾರೆ.
ಅಭಿಷೇಕ್-ಅವಿವಾ ದಂಪತಿಗೆ ಮೋದಿ ಪತ್ರ; ನವ ಜೋಡಿಗೆ ಶುಭಕೋರಿದ ಪ್ರಧಾನಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.