ಮಗಳ ಮದ್ವೆ ದಿನ ಆಮೀರ್​ ಖಾನ್​ ಕಿಸ್​ ಕೊಟ್ರೆ ಗುಟ್ಟಾಗಿ ​ಕೆನ್ನೆ ಒರೆಸಿಕೊಂಡ ಮಾಜಿ ಪತ್ನಿ! ಕ್ಯಾಮೆರಾ ಕಣ್ಣಿಗೆ ಬೀಳದೇ ಇರುತ್ತಾ?

By Suvarna News  |  First Published Jan 4, 2024, 11:54 AM IST

ಇರಾ ಖಾನ್​ ಮದುವೆಯ ದಿನ ಆಮೀರ್​ ಖಾನ್​ ಅವರು ಮಾಜಿ ಪತ್ನಿ ಕಿರಣ್​ ರಾವ್​ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಆದರೆ ಕಿರಣ್​ ರಾವ್​ ಕೆನ್ನೆಯನ್ನು ಒರೆಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.
 


 ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮತ್ತು  ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಮದುವೆ ಸಂಭ್ರಮ ಜೋರಾಗಿ ನಡೆದಿದೆ. ಮೂರು ವರ್ಷಗಳ ಪ್ರೀತಿಗೆ ವಿವಾಹದ ಮುದ್ರೆ ಬಿಟ್ಟಿದೆ.  2020ರ ಇದೇ ದಿನದಂದು ಅಂದರೆ  ಜನವರಿ 3ರಂದು  ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್​ ಮಾಡಿದ ಬಳಿಕ ಇದೀಗ ಮದುವೆಯಾಗಿದೆ ಜೋಡಿ. ಇರಾ ಖಾನ್​ ನಟ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ.  ಅಂದಹಾಗೆ ಆಮೀರ್​ ಖಾನ್​ ಅವರು ಎರಡನೆಯ ಪತ್ನಿಯೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಇದೀಗ ಮಗಳ ಮದುವೆಗೆ ಮೊದಲ ಪತ್ನಿ  ಕಿರಣ್​ ಕೂಡ ಹಾಜರಾಗಿದ್ದಾರೆ.  ಇರಾ ಖಾನ್​ ಸ್ಟಾರ್​ ಕಿಡ್​ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 

ಮದುವೆಗೆ ಇರಾ ಅವರ ತಾಯಿ ರೀನಾ ದತ್ತಾ ಹಾಗೂ ಆಮೀರ್​ ಖಾನ್​ ಎರಡನೆಯ ಪತ್ನಿ ಕಿರಣ್​ ರಾವ್​ ಕೂಡ ಹಾಜರಾಗಿದ್ದರು. ಆಮೀರ್​ ಖಾನ್​ ಇಬ್ಬರಿಗೂ ವಿಚ್ಛೇದನ ನೀಡಿದ್ದರೂ ಮಗಳ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಕುತೂಹಲದ ವಿಷಯ ಏನೆಂದರೆ, ತಮ್ಮ ಎರಡನೆಯ ಪತ್ನಿಯನ್ನು ನೋಡುತ್ತಿದ್ದಂತೆಯೇ ಆಮೀರ್​ ಖಾನ್​ ಅವರಿಗೆ ಪ್ರೀತಿ ಉಕ್ಕಿ ಹರಿದಂತಿದೆ. ವೇದಿಕೆಯ ಮೇಲೆಯೇ ಕಿರಣ್​ ರಾವ್​ ಅವರಿಗೆ ಮುತ್ತಿಕ್ಕಿದ್ದಾರೆ. ಎಲ್ಲರ ಎದುರು ಮುತ್ತನ್ನು ನಗುಮೊಗದಿಂದಲೇ ಸ್ವೀಕರಿಸಿದಂತೆ ಮಾಡಿದ ಕಿರಣ್​ ರಾವ್​ ಅತ್ತ ಹೋಗುತ್ತಿದ್ದಂತೆಯೇ ಕೆನ್ನೆಯನ್ನು ಒರೆಸಿಕೊಂಡಿದ್ದಾರೆ. ಅವರ ಮುಖ ನೋಡಿದರೆ ಈ ಮುತ್ತನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಅವರು ಇದ್ದಂತೆ ಇರಲಿಲ್ಲ. ಅತ್ತ ಯಾರೂ ನೋಡದಂತೆ ಕೆನ್ನೆಯನ್ನು ಒರೆಸಿಕೊಂಡಿದ್ದಾರೆ. ಆದರೆ ಕ್ಯಾಮೆರಾ ಕಣ್ಣಿಗೆ ಅದು ಕಂಡಿದೆ. ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. 

Tap to resize

Latest Videos

ಆಮೀರ್​ ಪುತ್ರಿ ಇರಾಗೆ ಮದ್ವೆ ದಿನನೇ ಆಂಟಿ ಶಾಕ್! ಈ ರೀತಿ ವೇಷ ಮಾಡ್ಕೊಂಡ್ರೆ ಇನ್ನೇನ್​ ಆಗತ್ತೆ ಕೇಳಿದ ನೆಟ್ಟಿಗರು

ಅಂದಹಾಗೆ, ಇರಾ ಮತ್ತು ನೂಪುರ್​ ಲವ್​ ಸ್ಟೋರಿ ಶುರುವಾದದ್ದು, ಕೋವಿಡ್  ಸಮಯದಲ್ಲಿ. ನೂಪುರ್ ಅವರು ಅಮೀರ್ ಖಾನ್‌ಗೆ ತರಬೇತಿ ನೀಡುತ್ತಿದ್ದಾಗ, ಇರಾ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಾಗ ಈ ಜೋಡಿ ಪರಸ್ಪರ ಭೇಟಿಯಾಗಿದೆ. ಆಗ ಪ್ರೀತಿ ಚಿಗುರಿತ್ತು.  ಕಳೆದ ವರ್ಷ ನವೆಂಬರ್‌ನಲ್ಲಿ ಇವರಿಬ್ಬರು ಎಂಗೇಜ್‌ಮೆಂಟ್ ಪಾರ್ಟಿ ಮಾಡಿಕೊಂಡಿದ್ದರು.   ನುಪೂರ್ ಶಿಖರೆ  ಸೈಕ್ಲಿಂಗ್ ಈವೆಂಟ್​ನಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮಕ್ಕೆ ಪ್ರೇಯಸಿ ಇರಾ ಖಾನ್ ಕೂಡ ಭಾಗಿಯಾಗಿದ್ದರು. ಆಗ ನೂಪುರ್  ಇರಾಗೆ ಪ್ರಪೋಸ್ ಮಾಡಿದ್ದರು. ಎಲ್ಲರ ಮುಂದೆಯೇ ಮಂಡಿಯೂರಿ ಪ್ರಪೋಸ್ ಮಾಡಿ, ರಿಂಗ್ ಹಾಕಿ ಲವ್ ಯು ಹೇಳಿ, ಲಿಪ್ ಕಿಸ್ ಮಾಡಿದ್ದರು. ನುಪೂರ್, ಮಂಡಿಯೂರಿ ನೀವು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದರು. ಆಗ ಇರಾ ಮೈಕ್ ತೆಗೆದುಕೊಂಡು ಹೌದು ಎಂದು ಹೇಳಿದ್ದರು. ಬಳಿಕ ಇಬ್ಬರು ಹಗ್ ಮಾಡಿ ಪ್ರೀತಿ ವ್ಯಕ್ತಪಡಿಸಿದರು. ನವ ಜೋಡಿಗೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ವಿಶ್ ಮಾಡಿದ್ದರು. ಇದಾದ ಬಳಿಕ ಎಂಗೇಜ್​ಮೆಂಟ್​ ಆಗಿತ್ತು.  


ಇನ್ನು ಇರಾ ಭಾವಿ ಪತಿ  ನೂಪುರ್ ಶಿಖರೆ ಕುರಿತು ಹೇಳುವುದಾದರೆ, ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ರು. ಶಿಕ್ರೆ ಫಿಟ್​ನೆಸ್​ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್​ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದು ಇದೀಗ ಮದುವೆ ಆಗಿದೆ. 
ನನ್​ ಗಂಡನೂ ನಿಮ್​ ಹಾಗೆ ಹೇಳ್ಬೋದು ಎನ್ನೋ ಮೂಲಕ ಮದ್ವೆ ಹಿಂಟ್​ ಕೊಟ್ರಾ ರಶ್ಮಿಕಾ ಮಂದಣ್ಣ?

click me!