ಚಡ್ಡಿ ಬನಿಯನ್‌ನಲ್ಲಿ ಆಮೀರ್ ಪುತ್ರಿಯನ್ನು ವಿವಾಹವಾದ ನೂಪುರ್!

Published : Jan 04, 2024, 10:55 AM IST
ಚಡ್ಡಿ ಬನಿಯನ್‌ನಲ್ಲಿ ಆಮೀರ್ ಪುತ್ರಿಯನ್ನು ವಿವಾಹವಾದ ನೂಪುರ್!

ಸಾರಾಂಶ

ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ನೂಪುರ್ ಶಿಖರೆ ಅವರನ್ನು ರಿಜಿಸ್ಟರ್ ಮ್ಯಾರೇಜ್ ಆದರು. ಈ ಸಂದರ್ಭದಲ್ಲಿ ವರ ನೂಪುರ್ ಶಿಖರೆ ಧರಿಸಿದ್ದ ಉಡುಗೆ ನೆಟಿಜನ್‌ಗಳನ್ನು ಕೆರಳಿಸಿದೆ.  

ಆಮೀರ್ ಪುತ್ರಿ ಇರಾ ಖಾನ್ ತಮ್ಮ ಹಲವು ವರ್ಷಗಳ ಬಾಯ್‌ಫ್ರೆಂಡ್ ನೂಪುರ್‌ರನ್ನು ಜನವರಿ 3ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್ ನಟ ನಟಿಯರ, ಅವರ ಮಕ್ಕಳ ವಿವಾಹ ಎಂದರೆ ಎಲ್ಲರ ಕಣ್ಣೂ ಅವರು ಏನು ಧರಿಸಿದ್ದರು, ಅದನ್ನು ಯಾರು ಡಿಸೈನ್ ಮಾಡಿದ್ದು, ಯಾವೆಲ್ಲ ಆಭರಣ ಹಾಕಿದ್ದಾರೆ ಇತ್ಯಾದಿಗಳ ಮೇಲಿರುತ್ತದೆ. ಆ ಬಗ್ಗೆ ಸಾಕಷ್ಟು ಫ್ಯಾಶನ್ ಸುದ್ದಿಯೂ ಆಗುತ್ತದೆ. ಫ್ಯಾಶನ್ ವಿಷಯದಲ್ಲಿ ತಾವು ಸಾಮಾನ್ಯರ ಐಕಾನ್ ಆಗಬೇಕೆಂದು ಬಾಲಿವುಡ್ ಮಂದಿಯೂ ಬಯಸುತ್ತಾರೆ. 

ಆದರೆ, ಇರಾ- ನೂಪುರ್ ವಿವಾಹ ಸಮಾರಂಭದಲ್ಲಿ ಮಾತ್ರ ನೂಪುರ್ ಧರಿಸಿದ್ದ ಬಟ್ಟೆ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ. ಅದೇನು ಬಹಳ ಚೆನ್ನಾಗಿತ್ತೆಂದಲ್ಲ, ಬದಲಿಗೆ ವಿಚಿತ್ರವಾಗಿತ್ತು ಎಂಬ ಕಾರಣಕ್ಕೆ. ಆಮೀರ್ ಖಾನ್ ಕುಟುಂಬವಷ್ಟೇ ಅಲ್ಲ, ಅಂಬಾನಿ ಕುಟುಂಬವೂ ಭಾಗವಹಿಸಿದ್ದಂತ ವಿವಾಹ ಸಮಾರಂಭದಲ್ಲಿ ಆಮೀರ್ ಅಳಿಯ ಯಾರಿಗೂ ಕೇರ್ ಮಾಡದೆ ಚಡ್ಡಿ ಬನಿಯನ್ ಧರಿಸಿ ವಿವಾಹ ನೋಂದಣಿ ಕಾರ್ಯ ಪೂರೈಸಿದ್ದು ಸುದ್ದಿಯಾಗಿದೆ. 

ಅಲ್ಲಾ ಸ್ವಾಮಿ, ಅಷ್ಟೊಂದು ಹೆಸರು ಮಾಡಿದ ನಟನ ಪುತ್ರಿಯನ್ನು ವಿವಾಹವಾಗುವುದೆಂದ ಮೇಲೆ ದೊಡ್ಡ ದೊಡ್ಡ ವಿನ್ಯಾಸಕರು ತಯಾರಿಸಿದ ಶೇರ್ವಾನಿಯೋ, ಸೂಟೋ ಧರಿಸುವುದು ಬಿಟ್ಟು, ಇದೇನಿದು ಚಡ್ಡಿ ಬನಿಯನ್ನು? ಹೋಗಲಿ, ಸಿಂಪಲ್ ಆಗಿ ಒಂದು ಶರ್ಟ್ ಆದರೂ ಹಾಕಿಕೊಳ್ಳಲಾಗುತ್ತಿರಲಿಲ್ಲವೇ ಎನ್ನುತ್ತಿದ್ದಾರೆ ನೆಟಿಜನ್ಸ್. 

ಕಷ್ಟದಲ್ಲಿದ್ದಾರಾ ನಟ : ಸಲ್ಮಾನ್ ಖಾನ್ ಮನೆಯಲ್ಲೇಕೆ ನಡೀತಿದೆ ಆಮೀರ್ ಖಾನ್ ಮಗಳ ಮದ್ವೆ?

ವಿವಾಹಕ್ಕೆ ಇರಾ ಲೆಹೆಂಗಾ ಹಾಕಿ ಅದ್ದೂರಿಯಾಗಿ ಸಜ್ಜಾಗಿದ್ದರು. ಆಮೀರ್, ಆತನ ಪತ್ನಿಯರು ಎಲ್ಲರೂ ಮಿರಿಮಿರಿ ಮಿಂಚುತ್ತಿದ್ದರು. ಆದರೆ, ಮದುವೆ ವರ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿದ್ದಿದು ಬಹಳ ವಿಚಿತ್ರವಾಗಿತ್ತು. ಈ ಸಂಬಂಧ ವಿಡಿಯೋ ವೈರಲ್ ಆದ ಕೂಡಲೇ ನೆಟಿಜನ್‌ಗಳು ಕಾಮೆಂಟ್‌ಗಳ ವಿಭಾಗದಲ್ಲಿ ಹರಿಹಾಯ್ದಿದ್ದಾರೆ. 'ಒಬ್ಬ ವರನು ಅಂತಹ ಶೈಲಿಯಲ್ಲಿ ಧರಿಸಿರುವುದು ತುಂಬಾ ಮುಜುಗರದ ಸಂಗತಿ' ಎಂದು ಓರ್ವ ಬಳಕೆದಾರರು ಹೇಳಿದ್ದರೆ, 'ಈತ ಮದುವೆಯಾಗಲು ಬಂದಿದ್ದನೋ, ಜಿಮ್‌ನಲ್ಲಿ ವರ್ಕೌಟ್ ಮಾಡಲು ಬಂದಿದ್ದನೋ' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. 
'ಆಮೀರ್ ತಮ್ಮ ಅಳಿಯನಿಗೆ ಹೊಸ ಬಟ್ಟೆ ಕೊಡಿಸಲಿಲ್ಲವೇ' ಎಂದು ಇನ್ನೊಬ್ಬ ನೆಟ್ಟಿಗರು ಕೇಳಿದ್ದರೆ, 'ಎಲ್ಲರೂ ತಮ್ಮ ತಮ್ಮ ತಯಾರಿಯಲ್ಲಿ ವರನನ್ನೇ ಮರೆತರೇ' ಎಂದು ಮತ್ತೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಇದಿಷ್ಟೇ ಅಲ್ಲ, ಮದುವೆ ಮೆರವಣಿಗೆಗೆ ಕೂಡಾ ನೂಪುರ್ ಇದೇ ಚಡ್ಡಿ ಬನಿಯನ್‌ನಲ್ಲಿ 8 ಕಿಲೋಮೀಟರ್ ಓಡಿಕೊಂಡು ಬಂದಿದ್ದಾರೆ. ಈ ಹಿಂದೆ ಇದೇ ನೂಪುರ್ ಬೆತ್ತಲೆಯಾಗಿ ಓಡಿ ಫೋಟೋಶೂಟ್ ಮಾಡಿಸಿ ಸುದ್ದಿಯಾಗಿದ್ದರು. 

ಇರಾ ಖಾನ್ ಕೈ ಹಿಡಿದ ನೂಪರ್; ಫಿಟ್ನೆಸ್ ತರಬೇತುದಾರ ಯಾಕಿಷ್ಟು ಲೇಟ್ ಮಾಡಿದ್ರು?!

'ಇರಾ ಮತ್ತು ನೂಪುರ್ ಅವರ ವಿವಾಹವು ಬಾಲಿವುಡ್ ವಿವಾಹದ ಇತಿಹಾಸದಲ್ಲಿ ಅತ್ಯಂತ ಅಸಹ್ಯವಾಗಿ ಕಾಣುವ ಮದುವೆಯಲ್ಲಿ ಒಂದಾಗಿದೆ. ಕಚ್ಚಾ-ಬನಿಯನ್‌ನಲ್ಲಿ ಮದುವೆಯಾಗುವುದರಿಂದ ಹಿಡಿದು ಆ ಸಂಜೆಯ ಕುಟುಂಬದ ಗ್ರೂಪ್ ಫೋಟೋ ಮೇಳದವರೆಗೆ ಎಲ್ಲವೂ ವಿಲಕ್ಷಣವಾಗಿತ್ತು' ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಸೂಪರ್‌ಸ್ಟಾರ್ ಅಮೀರ್ ಖಾನ್ ಮತ್ತು ಚಲನಚಿತ್ರ ನಿರ್ಮಾಪಕಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್, ಮಾನಸಿಕ ಆರೋಗ್ಯ ಬೆಂಬಲ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿದ್ದಾರೆ. ಅವರ ಪತಿಯಾದ ನೂಪುರ್ ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಾಗಿದ್ದಾರೆ. 
ಸೆಪ್ಟೆಂಬರ್ 22, 2022 ರಂದು, ಇರಾ ಖಾನ್ ಮತ್ತು ನೂಪುರ್ ಶಿಖರೆ ತಮ್ಮ ನಿಶ್ಚಿತಾರ್ಥವನ್ನು ಘೋಷಿಸುವ ಮೂಲಕ ಎಲ್ಲರನ್ನು ವಿಸ್ಮಯಗೊಳಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!